ಸುಪ್ರೀಂಕೋರ್ಟ್ 
ದೇಶ

ಪತ್ನಿಯನ್ನು ಸೇವಕಿಯಂತೆ ನೋಡಬಾರದು; ಮನೆ ಕೆಲಸಗಳನ್ನು ಗಂಡಂದಿರು ಸಹ ಜೊತೆಗೆ ಮಾಡಬೇಕು: ಸುಪ್ರೀಂಕೋರ್ಟ್ ​| Supreme Court

ನವದೆಹಲಿ: ಪತಿ-ಪತ್ನಿ ನಡುವಿನ ಸಂಬಂಧದಲ್ಲಿ ಸಮಾನತೆ ಅತ್ಯಂತ ಮಹತ್ವದ್ದು, ಗಂಡಂದಿರು ಪತ್ನಿಯರನ್ನು ಸೇವಕಿಯರಂತೆ ನೋಡಬಾರದು. ಅವರ ಜೊತೆ ಮನೆಕೆಲಸಗಳಲ್ಲಿ ಭಾಗವಹಿಸಬೇಕು ಎಂದು ಶುಕ್ರವಾರ(ಮಾ. 20) ಸುಪ್ರೀಂಕೋರ್ಟ್(Supreme Court) ಅಭಿಪ್ರಾಯಪಟ್ಟಿದೆ.
ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠವು, ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ವಿವಾಹವು ಸಂಗಾತಿಗಾಗಿಯೇ ಹೊರತು ಸೇವೆಗಳನ್ನು ಪಡೆಯುವುದಕ್ಕಾಗಿ ಅಲ್ಲ ಎಂದು ಪ್ರಮುಖ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದೆ.
ಮನೆಕೆಲಸಗಳು ಸಂಪೂರ್ಣವಾಗಿ ಮಹಿಳೆಯರ ಜವಾಬ್ದಾರಿ ಎಂಬ ಪುರಷರ ಹಳೆಯ ಸಿದ್ದಾಂತ ಮತ್ತು ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸೂಚಿಸಿದ ಪೀಠ, ಮನೆಯ ಅಡುಗೆ, ಬಟ್ಟೆ ತೊಳೆಯುವುದು ಹಾಗೂ ನೆಲ ಹೊರೆಸುವಂತಹ ಶುಚಿಗೊಳಿಸುವಿಕೆಯ ಮನೆಕೆಲಸಗಳಲ್ಲಿ ಗಂಡಂದಿರುವ ಸಮಾನವಾಗಿ ಭಾಗವಹಿಸಬೇಕು. ಮನೆಕೆಲಸಗಳಲ್ಲಿ ಸಮಾನ ಹಂಚಿಕೆ ಇದ್ದಾಗ ಮಾತ್ರ ಗಂಡ ಮತ್ತು ಹೆಂಡತಿಯ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ ಎಂದು ತಿಳಿಸಿದೆ (ಏಜೆನ್ಸೀಸ್).