ಮಂಚಕ್ಕೆ ಗಂಡನನ್ನು ಕಟ್ಟಿಹಾಕಿರುವುದು, ಪ್ರದೀಪನ ಪತ್ನಿ ಸೋನಿ 
ದೇಶ

ಕುಡುಕ ಪತಿಯನ್ನು ಮಂಚಕ್ಕೆ ಕಟ್ಟಿದ ಪತ್ನಿ; ಸೊಸೆ ಕಾಟಕ್ಕೆ ಬೇಸತ್ತ ಅತ್ತೆಯಿಂದ ಪೊಲೀಸ್​ ಕಂಪ್ಲೆಂಟ್​ | Husband

ಉತ್ತರ ಪ್ರದೇಶ: ಉತ್ತರ ಪ್ರದೇಶದ ಅಲಿಗಢದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ (Husband) ಕುಡಿತದ ಚಟದಿಂದ ಕೋಪಗೊಂಡು ಅವನನ್ನು ಹಾಸಿಗೆಗೆ ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದೆಲ್ಲಡೆ ವೈರಲ್​ ಆಗುತ್ತಿದೆ.
ಆದರೆ ಈ ಘಟನೆಯಿಂದ ಮನನೊಂದ ಅತ್ತೆ ಈದೀಗ ಪೊಲೀಸ್​ ಠಾಣೆಯ ಮೇಟ್ಟಿಲೇರಿದ್ದು, ತನ್ನ ಸೊಸೆ ಹತ್ತಿರ ನಾಡ ಬಂದೂಕಿದೆ ಅದನ್ನು ಇಟ್ಟುಕೊಂಡು ನನ್ನ ಮಗನಿಗೆ ಹಿಂಸೆ ನೀಡುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದಾಳೆ. ದೂರಿನ ಪ್ರಕಾರ, ಮಹಿಳೆ ತನ್ನ ಪತಿ ಮದ್ಯ ಸೇವಿಸಿದ್ದಾನೆಂದು ಆರೋಪಿಸಿ ಮಂಚಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾಳೆ. ವೈರಲ್ ಆಗಿರುವ ವೀಡಿಯೊದಲ್ಲಿ, ಪತಿ ನೋವಿನಿಂದ ಒದ್ದಾಡುತ್ತಿದ್ದು, ಅವನ ಹೆಂಡತಿ ಗಲಾಟೆ ಮಾಡುತ್ತಿರುವುದು ಕೇಳಿಸುತ್ತದೆ.
ಘಟನೆಯ ಬಗ್ಗೆ ತಿಳಿದ ನಂತರ, ಬಲಿಪಶುವಿನ ತಾಯಿ ಮತ್ತು ಗ್ರಾಮಸ್ಥರು ಮನೆಗೆ ಧಾವಿಸಿ, ಆ ವ್ಯಕ್ತಿಯನ್ನು ಹಾಸಿಗೆಯಿಂದ ಮುಕ್ತಗೊಳಿಸಿದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಮಹಿಳೆಯ ಬಳಿ ಅಕ್ರಮ ಪಿಸ್ತೂಲ್ ಇದ್ದು, ಅದನ್ನು ಆಕೆ ತನ್ನ ಗಂಡನಿಗೆ ಬೆದರಿಕೆ ಹಾಕಲು ಬಳಸಿದ್ದಾಳೆ ಎಂದು ಆರೋಪಿಸಲಾಗಿದೆ. ಬಲಿಪಶುವಿನ ತಾಯಿ ತನ್ನ ಸೊಸೆ ಆಯುಧವನ್ನು ಹಿಡಿದಿರುವ ಫೋಟೋವನ್ನು ಪೊಲೀಸರಿಗೆ ನೀಡಿರುವುದಾಗಿ ಹೇಳಿದ್ದಾಳೆ.
ನನ್ನ ಮಗ ಪ್ರದೀಪನಿಗೆ ಅವನ ಹೆಂಡತಿ ಸೋನಿ ಹೊಡೆಯುತ್ತಾಳೆ. ಅವಳ ಬಳಿ ಅಕ್ರಮದ ಪಿಸ್ತೂಲ್​ ಇದ್ದು, ಅದನ್ನು ಬಳಸಿಕೊಂಡು ನನ್ನ ಮಗನನ್ನು ಬೆದರಿಸುತ್ತಾಳೆ. ಇವಳು ನಮ್ಮ ಮನೆಯ ಸೊಸೆಯಾಗಿ ಬಂದು ನಾಲ್ಕು ವರ್ಷಗಳಾಗಿದ್ದು, ಕಳೆದ ಎರಡು ವರ್ಷಗಳಿಂದ ನಮಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಪ್ರದೀಪನ ತಾಯಿ ದೂರಿನಲ್ಲಿ ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ದೂರನ್ನು ಸ್ವೀಕರಿಸಿರುವುದಾಗಿ ದೃಢಪಡಿಸಿದ್ದಾರೆ ಮತ್ತು ವೈರಲ್ ಆಗಿರುವ ವೀಡಿಯೊ ಮತ್ತು ಕುಟುಂಬವು ಮಾಡಿದ ಆರೋಪಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಪ್ರದೀಪ್ ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಾತ್ರವಲ್ಲದೆ ನೆರೆಹೊರೆಯವರೊಂದಿಗೆ ಆಗಾಗ್ಗೆ ಜಗಳವಾಡುತ್ತಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಈ ಕಾರಣಕ್ಕೆ ಪತ್ನಿ ತನ್ನ ಗಂಡನನ್ನು ಮಂಚಕ್ಕೆ ಕಟ್ಟಿಹಾಕಿದ್ದಾಳೆ. ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಟಪ್ಪಲ್ ಪೊಲೀಸ್ ಠಾಣೆ ಪ್ರದೀಪ್ ಪತ್ನಿಯನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಆರಂಭಿಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ,(ಏಜನ್ಸೀಸ್).