ಗಂಡನ ಮುಂಡವನ್ನು ಮಣ್ಣಿನಲ್ಲಿ ಹೂತು ರುಂಡಕ್ಕೆ ಹಾಲಿನ ಅಭಿಷೇಕ ಮಾಡಿದ ಪತ್ನಿ ( VIRAL VIDEO )
- ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ
- ಕೆಲವು ವಿಡಿಯೋಗಳು ವಿಶೇಷ ಅಥವಾ ವಿಚಿತ್ರ ಕಾರಣಗಳಿಗೆ ಎಲ್ಲರ ಗಮನ ಸೆಳೆದು ವೈರಲ್ ಆಗಿಬಿಡುತ್ತವೆ
- ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ
VIRAL VIDEO : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಕೆಲವೇ ಕೆಲವು ವಿಡಿಯೋಗಳು ವಿಶೇಷ ಅಥವಾ ವಿಚಿತ್ರ ಕಾರಣಗಳಿಗೆ ಎಲ್ಲರ ಗಮನ ಸೆಳೆದು, ಕ್ಷಣ ಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಓರ್ವ ಮಹಿಳೆ ತನ್ನ ಗಂಡನ ಮುಂಡವನ್ನು ಮಣ್ಣಿನಿಂದ ಮುಚ್ಚಿದ್ದಾಳೆ. ಆತನ ರುಂಡ ಮಾತ್ರ ಗೋಚರಿಸುತ್ತದೆ. ಗಂಡನ ತಲೆಯ ಮೇಲೆ ಮತ್ತು ಅದರ ಸುತ್ತಲೂ ಹೂವುಗಳನ್ನು ಹಾಕಿ, ತಲೆಗೆ ಹಾಲಿನ ಅಭಿಷೇಕ ಮಾಡುತ್ತಾಳೆ. ಈ ವೇಳೆ ಶಿವನನ್ನು ಸ್ಮರಿಸುತ್ತಾ 'ಹರ ಹರ ಮಹಾದೇವ' ಎಂದು ಜಪಿಸುತ್ತಿದ್ದಳು.
ಅಂದಹಾಗೆ, ಆ ಮಹಿಳೆ ತನ್ನ ಗಂಡನ ತಲೆಯನ್ನೇ ಶಿವಲಿಂಗವೆಂದು ಪರಿಗಣಿಸಿ ಪೂಜೆ ಮಾಡಿರುವಂತೆ ತೋರುತ್ತದೆ. ಫೆ.15ರಂದು ಶಿವರಾತ್ರಿ ಹಿನ್ನೆಲೆಯಲ್ಲಿ ಅದೇ ದಿನ ಸೆರೆಹಿಡಿದಿರುವ ವಿಡಿಯೋ ಎನ್ನಲಾಗಿದೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಪತ್ನಿಯ ಈ ವಿಚಿತ್ರ ಪೂಜೆಗೆ ಗಂಡನು ಕೂಡ ಸಹಕರಿಸಿದ್ದಾನೆ. ತನ್ನ ಪತ್ನಿ, ತಲೆಗೆ ಅಭಿಷೇಕ ಮಾಡುವುದನ್ನು ಪತಿ ಆನಂದಿಸುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. ಆಕೆಯನ್ನು ಬಳಿ ಬೇಡ ಅನ್ನೋ ಒಂದೇ ಒಂದು ಮಾತು ಕೂಡ ಪತಿ ಆಡಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ತಮ್ಮ ಹುಬ್ಬೇರಿಸಿದ್ದಾರೆ.
ಇನ್ನು ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ಗಳು ಹರಿದುಬಂದಿವೆ. ಇದು ಒಂದು ಭಕ್ತಿಯೇ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು ಗಂಡನಾದವು ಪತ್ನಿಯಿಂದ ಇನ್ನೂ ಏನೆನೆಲ್ಲ ಸಹಿಸಿಕೊಳ್ಳಬೇಕೋ ಎಂದು ನಗೆಚಟಾಕಿ ಹಾರಿಸಿದ್ದಾರೆ. ಓರ್ವ ಬಳಕೆದಾರರು ಇದು ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಆದರೆ, ಕೆಲವರು ಮಹಿಳೆಯ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಈ ದೇಶದ ಪ್ರತಿಯೊಂದು ಜನಾಂಗ ಮತ್ತು ಧರ್ಮಕ್ಕೂ ತನ್ನದೇ ಆದ ಪದ್ಧತಿಗಳಿವೆ. ಅವರವರ ಪದ್ಧತಿಗಳನ್ನು ಗೌರವಿಸಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ, (ಏಜೆನ್ಸೀಸ್).