Garbage Truck 
ದೇಶ

ಕಸದ ವಾಹನದಲ್ಲಿ ಅನಾಥ ಶವದ ಯಾತ್ರೆ! ವ್ಯಾಪಕ ಆಕ್ರೋಶ..

ಪಂಜಾಬ್​: ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಕೆಲವು ಸಾರಿ ಅನಾಥ ಶವಗಳಾಗಿ ಪತ್ತೆಯಾಗುತ್ತಾರೆ. ಅಂತಹ ಶವಗಳನ್ನು ಗೌರವಿತವಾಗಿ ಶವ ಸಂಸ್ಕಾರ ಮಾಡಲಾಗುತ್ತದೆ. ಆದರೆ, ಪಂಜಾಬ್‌ನ ಫಾಗ್ವಾರಾದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಸ್ಮಶಾನಕ್ಕೆ ಪುರಸಭೆಯ ಕಸ ಸಂಗ್ರಹಣಾ ವಾಹನದಲ್ಲಿ ಅನಾಥ ಶವವನ್ನು ಸಾಗಿಸಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಫಾಗ್ವಾರಾ ಸಿವಿಲ್ ಆಸ್ಪತ್ರೆಯಲ್ಲಿ ಶವವನ್ನು ಕಸದ ಟ್ರಾಲಿಗೆ ಹಾಕುತ್ತಿರುವ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿದಾಗ ಈ ಘಟನೆ ಹೊರ ಬಂದಿದೆ. ಈ ದೃಶ್ಯಗಳು ಫೋಟೋ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿದೆ.
ರೈಲ್ವೆ ನಿಲ್ದಾಣದಲ್ಲಿ ಶವ ಪತ್ತೆಯಾಗಿದ್ದು, ಕಸ ಸಂಗ್ರಹಿಸುವ ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಯಾರೂ ಶವ ತೆಗೆದುಕೊಳ್ಳುವುದಕ್ಕೆ ಮುಂದೆ ಬಾರದ ಕಾರಣ ಅದೇ ವಾಹನದಲ್ಲಿ ಶವಸಂಸ್ಕಾರ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಪುರಸಭೆಯ ವಾಹನದ ಚಾಲಕ, ಪುರಸಭೆಯ ಅಧಿಕಾರಿಗಳು ಸರಿಯಾದ ಸೌಲಭ್ಯಗಳನ್ನು ಒದಗಿಸದ ಕಾರಣ ಶವವನ್ನು ಕಸದ ಟ್ರಾಲಿಯಲ್ಲಿ ಹಾಕಲಾಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಫಾಗ್ವಾರಾದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಜಶಂಜಿತ್ ಸಿಂಗ್ ಅವರು ಆಸ್ಪತ್ರೆಯ ಸಿವಿಲ್ ಸರ್ಜನ್‌ಗೆ ಈ ವಿಷಯದ ಬಗ್ಗೆ ವರದಿ ಕೋರಿ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ಇದ್ದು, ಅದನ್ನು ಏಕೆ ಬಳಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿದ್ದಾರೆ(ಏಜೆನ್ಸೀಸ್​)