Jasprit Bumrah | ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ 
ದೇಶ

ಟೀಮ್ ಇಂಡಿಯಾಗೆ ಆರಂಭಿಕ ವಿಘ್ನ...ಅನಾರೋಗ್ಯದ ಕಾರಣಕ್ಕೆ ಬುಮ್ರಾ ಔಟ್! | Jasprit Bumrah

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯುಎಸ್‌ಎ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅಲಭ್ಯರಾಗಿದ್ದಾರೆ.
ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಬದಲು ಮೊಹಮ್ಮದ್ ಸಿರಾಜ್ ವೇಗದ ದಾಳಿಯಲ್ಲಿ ಅರ್ಶದೀಪ್​ ಸಿಂಗ್ ಜೊತೆ ಕೈಜೋಡಿಸಲಿದ್ದಾರೆ. ಸುಮಾರು ಎರಡು ವರ್ಷಗಳ ಬಳಿಕ ಟಿ20ಗೆ ಮರಳಿರುವ ಸಿರಾಜ್, ಗಾಯಗೊಂಡಿರುವ ಹರ್ಷಿತ್ ರಾಣಾ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬುಮ್ರಾ ಅಲಭ್ಯತೆಯ ಕುರಿತು ಪ್ರತಿಕ್ರಿಯೆ ನೀಡಿರುವ ನಾಯಕ ಸೂರ್ಯಕುಮಾರ್ ಯಾದವ್, ಸ್ಟಾರ್​ ವೇಗಿ ಜ್ವರದಿಂದ ಬಳಲುತ್ತಿದ್ದು, ಆದ್ದರಿಂದ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಇದು ದುರದೃಷ್ಟಕರ ಎಂದು ಹೇಳಿದ್ದಾರೆ. ನಮ್ಮಲ್ಲಿ ವಾಷಿಂಗ್ಟನ್​, ಸಂಜು ಮಿಸ್ ಆಗಿದ್ದಾರೆ. ದುರದೃಷ್ಟವಶಾತ್ ಬುಮ್ರಾ ಆರೋಗ್ಯ ಚೆನ್ನಾಗಿಲ್ಲ, ಆದ್ದರಿಂದ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೂರ್ಯಕುಮಾರ್ ಯಾದವ್​ ಮಾಹಿತಿ ನೀಡಿದ್ದಾರೆ.

ಟಾಸ್ ಗೆದ್ದ ಯುಎಸ್ಎ

ಟಾಸ್ ಗೆದ್ದ ಯುಎಸ್ಎ ನಾಯಕ ಮೋನಾಂಕ್ ಪಟೇಲ್ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಈ ಕುರಿತಾಗಿಯೂ ಮಾತನಾಡಿದ ಸೂರ್ಯಕುಮಾರ್, ಟಾಸ್​ ಏನೇ ಇರಲಿ ನಾವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೆವು, ಅದರಂತೆಯೇ ಆಗಿದೆ ಎಂದರು.
ನಾನು ಇಲ್ಲಿ ಬಹಳಷ್ಟು ಕ್ರಿಕೆಟ್ ಆಡಿದ್ದೇನೆ. ಸುತ್ತಲೂ ಗಾಳಿ ಇದೆ, ಆದ್ದರಿಂದ ಇಬ್ಬನಿ ಬೀಳುವ ಸಾಧ್ಯತೆ ಕಡಿಮೆ, ಪಂದ್ಯದ ವಿಷಯವಾಗಿ ಸ್ವಲ್ಪ ಒತ್ತಡವಿದ್ದು, ಆ ಸಂಗತಿಯಿಂದ ಓಡಿಹೋಗಲು ಸಾಧ್ಯವಿಲ್ಲ. ಹೊಸ ಟೂರ್ನಮೆಂಟ್​​ನಲ್ಲಿ ಅದೇ ಹಳೇ ಬ್ರಾಂಡ್ ಕ್ರಿಕೆಟ್ ಆಡುವುದು ನಮ್ಮ ಗುರಿಯಾಗಿದೆ ಎಂದು ಸ್ಕೈ ತಿಳಿಸಿದ್ದಾರೆ.
ಭಾರತ: ಇಶಾನ್ ಕಿಶನ್ (WK), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (c), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವರುಣ್ ಚಕ್ರವರ್ತಿ
USA: ಸೈತೇಜ ಮುಕ್ಕಮಲ್ಲ, ಆಂಡ್ರೀಸ್ ಗೌಸ್ (WK), ಮೊನಾಂಕ್ ಪಟೇಲ್ (c), ಮಿಲಿಂದ್ ಕುಮಾರ್, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಶುಭಂ ರಂಜನೆ, ಮೊಹಮ್ಮದ್ ಮೊಹ್ಸಿನ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಲ್ಕರ್, ಅಲಿ ಖಾನ್ (ಏಜೆನ್ಸೀಸ್​​).