ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮುಗಿಬಿದ್ದ ಹಾಲಿ ಸಿಎಂ ರೇಖಾ ಗುಪ್ತಾ
- ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣ
- ಆಪ್ ಮಾಜಿ ನಾಯಕ ತಾಹಿರ್ ಹುಸೇನ್‌ಗೆ ಜೀವಾವಧಿ ಶಿಕ್ಷೆ ಪ್ರಕಟ
- ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮುಗಿಬಿದ್ದ ಹಾಲಿ ಸಿಎಂ ರೇಖಾ ಗುಪ್ತಾ
ನವದೆಹಲಿ: 2020 ರಲ್ಲಿ ದೆಹಲಿಯಲ್ಲಿ ನಡೆದಿದ್ದ ಸಿಎಎ ಹಾಗೂ ಎನ್ಆರ್ಸಿ ವಿರೋಧಿ ದಂಗೆ ಸಂದರ್ಭದಲ್ಲಿ ನಡೆದಿದ್ದ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಕೊಲೆ ಪ್ರಕರಣ ದೇಶದಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಶುಕ್ರವಾರ (ಜು.31) ದೆಹಲಿ ನ್ಯಾಯಾಲಯವು ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಆದೇಶಿಸಿದೆ.
ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (Rekha Gupta on Arvind Kejriwal), ತಾಹಿರ್ ಹುಸೇನ್‌ಗೆ ನೀಡಿರುವ ಶಿಕ್ಷೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ನನ್ನ ಕೆಲ ಪ್ರಶ್ನೆಗಳಿಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಉತ್ತರಿಸಬೇಕಿದೆ ಎಂದಿದ್ದಾರೆ.
ತಾಹಿರ್ ಬಿಡುಗಡೆಗೆ ಪ್ರಯತ್ನ ಪಟ್ಟವರು ಯಾರು?
ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದಲ್ಲಿ ಆಮ್ ಆದ್ಮಿ ಪಕ್ಷದ ಅಂದಿನ ಕೌನ್ಸಿಲರ್ ಆಗಿದ್ದ ತಾಹಿರ್ ಹುಸೇನ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ತಾವು (ಅರವಿಂದ್ ಕೇಜ್ರಿವಾಲ್) ಆರೋಪಿಯ ಬಿಡುಗಡೆಗೆ ಏಕೆ ಪ್ರಯತ್ನ ಮಾಡಿದ್ದರಿ? ಎಂದು ರೇಖಾ ಪ್ರಶ್ನಿಸಿದ್ದಾರೆ.
ಅಷ್ಟೇ, ಅಲ್ಲದೆ ನಿನ್ನೆ ನ್ಯಾಯಾಲಯದ ತೀರ್ಪು ಬಂದ ನಂತರವೂ ಈ ವಿಷಯದ ಕುರಿತು ಒಂದೇ ಒಂದು ಮಾತನ್ನು ನೀವಾಗಲೀ, ನಿಮ್ಮ ಬಲಗೈ ಬಂಟ ಮನೀಶ್ ಸಿಸೋಡಿಯಾ ಏಕೆ ಮಾತನಾಡುತ್ತಿಲ್ಲ? ನೀವು ಈ ತಾಹಿರ್ ಹುಸೇನ್‌ಗೆ ಏಕೆ ಬೆಂಬಲ ನೀಡಿದ್ರಿ ಎಂದು ದೆಹಲಿ ಜನರಿಗೆ ಯಾವಾಗ ವಿವರಿಸುತ್ತರೀ? ಎಂದು ಟ್ವಿಟ್ ಮಾಡಿದ್ದಾರೆ.
ತಾಹಿರ್ ನಂತರ ಜನರಿಗೆ ನಿಮ್ಮ ಬೆಂಬಲ, ಅವರಿಗೆ ಶಿಕ್ಷೆಯಾದಾಗ ನಿಮ್ಮ ಮೌನ, ದೆಹಲಿಯಲ್ಲಿ ಗಲಭೆ ಉಂಟುಮಾಡುವುದೇ ನಿಮ್ಮ ಉದ್ದೇಶವಾಗಿತ್ತು ಎನ್ನುವುದನ್ನು ಸಾಭೀತು ಪಡಿಸುತ್ತದೆ ಎಂದು ರೇಖಾ ಗುಪ್ತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಐಬಿ ಅಧಿಕಾರಿ ಬರ್ಬರ ಕೊಲೆ!
ಐಬಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಕಿತ್ ಶರ್ಮಾ, ಫೆಬ್ರುವರಿ 25 ರಂದು ತಮ್ಮ ಮನೆಗೆ ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದರು. ನಂತರ ಮನೆಗೆ ಸಾಮಾಗ್ರಿತರಲು ಆಚೆ ಹೋದಾಗ ಅವರನ್ನು ಅಪಹರಣ ಮಾಡಲಾಗಿತ್ತು.
ಆಚೆ ಹೋದ ಮಗ ಮನೆಗೆ ಮರಳದಿದ್ದಾಗ ಆಘಾತಗೊಂಡ ಕುಟುಂಬ ವರ್ಗ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಮಾರನೇ ದಿನ ಅಂದರೆ ಫೆಬ್ರುವರಿ 26 ರಂದು ದೆಹಲಿಯ ಕೊಳಚೆ ಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಪರೀಕ್ಷೆ ಬಳಿಕ ಈ ದೇಹ ಅಂಕಿತ್ ಶರ್ಮಾರದ್ದೇ ಎಂದು ಸಾಭೀತಾಗಿತ್ತು. ಮೃಹದೇಹದ ಮುಖಕ್ಕೆ ಆ್ಯಸಿಡ್ ಚೆಲ್ಲಿ ಗುರುತು ಸಿಗದ ರೀತಿ ಮಾಡುವ ಹುನ್ನಾರವು ನಡೆದಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಹೀರ್ ಹುಸೇನ್ನನ್ನು ಬಂಧಿಸಲಾಗಿತ್ತು, (ಏಜನ್ಸೀಸ್).