ಕೇವಲ ಹೆಲಿಕಾಪ್ಟರ್ ಮಾತ್ರವಲ್ಲ ಸಬ್​ಮರೀನ್​ಗಳನ್ನು ಬಳಸಿ: ಪ್ರಿಯಾಂಕಾ ಚತುರ್ವೇದಿ 
ದೇಶ

ಹೆಲಿಕಾಪ್ಟರ್ ಯಾಕೆ, ಸಬ್‌ಮರೀನ್‌ನಲ್ಲೇ ಆನ್ಸರ್ ಶೀಟ್ ಕಳಿಸಿ: ನೀಟ್​ ಪರೀಕ್ಷೆ ತಯಾರಿಗೆ ಮಾಜಿ ಸಂಸದೆ ಪ್ರಿಯಾಂಕಾ ಚತುರ್ವೇದಿ ವ್ಯಂಗ್ಯ! Priyanka Chaturvedi on NEET Exam

ಪ್ರಮುಖ ಮುಖ್ಯಾಂಶಗಳು

  • ಪೇಪರ್​ ಸೋರಿಕೆ ನಂತರ ಜೂನ್​.21 ಕ್ಕೆ ನಡೆಯಲಿರುವ ನೀಟ್​ ಯುಜಿ ಪರೀಕ್ಷೆ
  • ಪರೀಕ್ಷಾ ಭದ್ರತೆಗೆ ಸೇನಾ ಶಕ್ತಿಗಳ ಬಳಕೆ ಬಗ್ಗೆ ಪ್ರಸ್ತಾಪ
  • ಕೇವಲ ಹೆಲಿಕಾಪ್ಟರ್ ಮಾತ್ರವಲ್ಲ ಸಬ್​ಮರೀನ್​ಗಳನ್ನು ಬಳಸಿ: ಪ್ರಿಯಾಂಕಾ ಚತುರ್ವೇದಿ
  • ಕೇಂದ್ರ ಸರ್ಕಾರದ ವಿರ್ಧಾರಕ್ಕೆ ಮಾಜಿ ಸಂಸದೆ ವ್ಯಂಗ್ಯ!
ನವದೆಹಲಿ: ಮೇ. 3 ರಂದು ನಡೆದಿದ್ದ ನೀಟ್​ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಜೂನ್​. 21 ರಂದು ನಡೆಯಲಿರುವ ಮರು ಪರೀಕ್ಷೆಯಲ್ಲಿ ಸೇನಾ ವಾಹನಗಳ ಬಳಕೆ ಕುರಿತಂತೆ ರಾಜ್ಯಸಭಾ ಮಾಜಿ ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi on NEET Exam) ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ಜೂನ್​. 21 ರಂದು ನಡೆಯಲಿರುವ ನೀಟ್​ ಯುಜಿ ಪರೀಕ್ಷೆಯಲ್ಲಿ ಯಾವುದೇ ಲೋಪದೋಷವಾಗಬಾರದು ಎಂಬ ಹಿನ್ನಲೆಯಲ್ಲಿ ಸರ್ಕಾರ ವಾಯುಸೇನಾ ಹೆಲಿಕಾಪ್ಟರ್​ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವ ಬಗ್ಗೆ ರಕ್ಷಣಾ ಸಚಿವರು ಹಾಗೂ ಸೇನಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದ ಹಿನ್ನಲೆಯಲ್ಲಿ ಶಿವಸೇನಾ (ಉದ್ಧವ್​ ಬಣ) ಸಂಸದೆ ಗರಂ ಆಗಿದ್ದಾರೆ.

ಹೆಲಿಕಾಪ್ಟರ್​ ಒಂದೇ ಏಕೆ ಸಬ್​ಮರೀನ್​ನ್ನು ಬಳಸಿ!

ನೀಟ್​ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಮಿಲಿಟರಿ ಬಳಕೆಯನ್ನು ಕಠುವಾಗಿ ವಿರೋಧಿಸಿರುವ ಪ್ರಿಯಾಂಕಾ ಚತುರ್ವೇದಿ, ತಮ್ಮ ಆಕ್ರೋಶವನ್ನು ಎಕ್ಸ್​(ಟ್ವಿಟರ್​) ಖಾತೆಯಲ್ಲಿ ಟ್ವಿಟ್​ ಮೂಲಕ ಹಂಚಿಕೊಂಡಿದ್ದಾರೆ.
ಆರ್ಮಿಯ ಅಧಿಕಾರಿಗಳು ಮುದ್ರಣ ಕೇಂದ್ರದಿಂದ ನೀಟ್ ಪರೀಕ್ಷೆಯ ಪತ್ರಿಕೆಯನ್ನು ತೆಗೆದುಕೊಳ್ಳುತ್ತದೆ. ನಂತರ ಆರ್ಮಿಯ ಬುಲೆಟ್​ ಪ್ರೂಪ್​ ವಾಹನದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ವಾಯುನೆಲೆಗೆ ತರಲಾಗುತ್ತದೆ. ಕೊನೆಗೆ ಸೇನಾ ಹೆಲಿಕಾಪ್ಟರ್​ಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುತ್ತವೆ. ಇಷ್ಟಕ್ಕೆ ಏಕೆ ನಿಲ್ಲಿಸಿ ಬಿಟ್ಟರಿ ನೇವಿಯ ಸಬ್​ ಮರೀನ್​ಗಳು ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್​ ಮಾಡಲು ಸರ್ವರ್‌ಗಳಿಗೆ ಅಪ್​ಲೋಡ್ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ!

ಜೂನ್​.21 ರಂದು ನಡೆಯಲಿರುವ ನೀಟ್​ ಯುಜಿ ಪರೀಕ್ಷೆಗೆ ಗರಿಷ್ಟ ಮಟ್ಟದ ರಕ್ಷಣೆಯನ್ನು ನೀಡುವುದು ಸರ್ಕಾರದ ಯೋಜನೆಯಾಗಿದ್ದು, ಹೀಗಾಗಿ ಮಿಲಿಟರಿ ಶಕ್ತಿಗಳ ಬಳಕೆ ಕುರಿತು ಸಹ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಶ್ನೆ ಪತ್ರಿಕೆಗಳ ಹಂಚಿಕೆಗೆ ಸೇನಾ ವಾಹನಗಳ ಬಳಕೆ ಬಗ್ಗೆ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ, (ಏಜನ್ಸೀಸ್​).