27 ಮಕ್ಕಳು ಸೇರಿ 180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್
ಇಸ್ರೇಲ್, ಭಾರತ ಸೇರಿದಂತೆ ಅಮೆರಿಕದ ನಾಯಕರಿಂದ ಮೆಚ್ಚುಗೆ ವ್ಯಕ್ತ
ಫ್ಲೈ ದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ರ ಹಳೆಯ ಪಾಡ್ಕಾಸ್ಟ್ ಮಾತು ವೈರಲ್
ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಸಂಭವಿಸುವುತ್ತಿದ್ದ ಭೀಕರ ದುರಂತವನ್ನು ಎದುರಿಸಿ, 27 ಮಕ್ಕಳು ಸೇರಿ 180 ಜನರ ಪ್ರಾಣವನ್ನು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಉಳಿಸಿದರು. ಹೀರೋ ಆಗಿ ಹೊರಹೊಮ್ಮಿರುವ ಇವರ ಹಳೆಯ ಪಾಡ್ಕಾಸ್ಟ್ವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕ್ಯಾಬಿನ್ ಸಿಬ್ಬಂದಿಯನ್ನು ಪ್ರಯಾಣಿಕರು ನಡೆಸಿಕೊಳ್ಳುವ ರೀತಿ, ಸಮಸ್ಯೆಯಾದಾಗ ಪ್ರಯಾಣಿಕರನ್ನು ನಿಭಾಯಿಸುವ ರೀತಿ, ಹಾರಾಟದ ಸಮಯದಲ್ಲಿ ಪೈಲಟ್‌ಗಳು ಎದುರಿಸುವ ರೀತಿ ಬಗ್ಗೆ ಪಾಡ್‌ಕ್ಯಾಸ್ಟರ್ ಜಲಕ್ ಮೆಹ್ತಾ ಅವರ ಬೋನಾ-ಫೈಡ್ ಬ್ಯಾಂಟರ್ ಸಂಚಿಕೆ 2ರಲ್ಲಿ ಮಾತನಾಡಿದ್ದಾರೆ.
ವೈರಲ್ ಆಗುತ್ತಿರುವ ಪಾಡ್ಕಾಸ್ಟ್ನ ತುಣುಕುಗಳಲ್ಲಿ ಸ್ಮಿತ್ ಅವರು ವಿಮಾನ ಹಾರಾಟದ ವೇಳೆ ಎದುರಾಗುವ ಸಮಸ್ಯೆ, ಹಾಗೂ ಕ್ಯಾಬಿನ್ ಸಿಬ್ಬಂದಿಯನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಜಲಕ್ ಮೆಹ್ತಾರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದಾರೆ.
'ಪ್ರಯಾಣಿಕರಲ್ಲಿ ಕ್ಯಾಬಿನ್ ಸಿಬ್ಬಂದಿ ಬಗ್ಗೆ ಬೇರೆಯದ್ದೇ ಗ್ರಹಿಕೆ ಇದೆ. ಸೂಚನೆ ಪ್ರಕಟಿಸುವವರು. ಊಟ ತಿಂಡಿ ನೀಡುವವರು ಎಂದಷ್ಟೇ ಭಾವಿಸುವುದು ವಿಷಾದನೀಯ. ಆದರೆ, ನಿಮಗೆ ವಿಮಾನದಲ್ಲಿ ಸಮಸ್ಯೆಯಾಗದಾಗ ನಿಮ್ಮನ್ನು ಕಾಪಾಡುವವರು ಯಾರು?. ನೀವು ಪ್ರಯಾಣಿಸುವಾಗ ವಿಮಾನದಲ್ಲಿ ಡಾಕ್ಟರ್ ಇದ್ದರೆ ಸರಿ. ಇಲ್ಲದೇ ಹೋದರೆ ಪ್ರಾಣಾಪಾಯದಿಂದ ಪಾರು ಮಾಡುವುದು ಇದೇ ಸಿಬ್ಬಂದಿ' ಎಂದು ಹೇಳಿದರು.
ವೈದ್ಯ ವೃತ್ತಿಯ ತರಬೇತಿ, ಅಥವಾ ಸರ್ಜರಿ ಮಾಡುವಷ್ಟು ತರಬೇತಿ ಪಡೆಯದೇ ಇರಬಹುದು. ಆದರೆ, ನಿಮಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಹಾಗೂ ಸುರಕ್ಷತಾ ಕ್ರಮಗಳಲ್ಲಿ ಕಠಿಣ ತರಬೇತಿ ಪಡೆದಿರುತ್ತಾರೆ. ಕ್ಯಾಬಿನ್ ಸಿಬ್ಬಂದಿಗೆ ಜೀವ ಉಳಿಸುವ ಎಲ್ಲ ಬಲವು ಇರುತ್ತದೆ. ಎಲ್ಲವೂ ಸುಸೂತ್ರವಾಗಿ ಇರುವಾಗ ಜನರು ಸಿಬ್ಬಂದಿಯನ್ನು ಕಡೆಗಣಿಸುತ್ತಾರೆ. ಪರಿಸ್ಥಿತಿ ಹದಗೆಟ್ಟಾಗ ಮಾತ್ರ ಸಿಬ್ಬಂದಿಯ ಅಸಲಿ ಮಹತ್ವ ತಿಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿ ಮಾತನಾಡಿದ್ದರು.
ವೃತ್ತಿ ಜೀವನದ ಆರಂಭದ ದಿನದ ಬಗ್ಗೆ ಮಾತನಾಡಿದ ಸ್ಮಿತ್ ಆಗ ತಾವು ಪ್ರಯಾಣಿಕರನ್ನು ನಿಭಾಯಿಸಿದ ರೀತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರೆ. ಒಂದೊಮ್ಮೆ ವಿಮಾನ ತಡವಾಗಿ ಟೇಕಾಫ್ ಆದ ಕಾರಣದಿಂದ ಪ್ರಯಾಣಿಕರು ಸಿಟ್ಟಾಗಿದ್ದರು. ಇದರಿಂದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಕಷ್ಟಪಟ್ಟಿದ್ದರು. ಆಗ ನನ್ನ ಒಟ್ಟು ಹಾರಾಟದ ಅನುಭವ ಸುಮಾರು ಸಾವಿರ ಗಂಟೆಗಳಷ್ಟಿತ್ತು, ಆಗಷ್ಟೇ ಫಸ್ಟ್ ಆಫೀಸರ್ ಆಗಿದ್ದೆ.
ವಿಮಾನ ಯಾವಾಗ ಹೊರಡುತ್ತದೆ ಎಂದು ಪ್ರಯಾಣಿಕರು ಕಿಡಿಕಾರಿದ್ದರು. ಆಗ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನುವುದನ್ನು ಅಂದಿನ ಕ್ಯಾಪ್ಟನ್ ಹೇಳಿಕೊಟ್ಟಿದ್ದರು ಎಂದು ಮಚ್ಚರ್ ಸ್ಮರಿಸಿಕೊಂಡಿದ್ದಾರೆ.ಕಾಕ್‌ಪಿಟ್ ಬಾಗಿಲನ್ನು ಮುಚ್ಚಿಕೊಂಡು ಕಾಯಬೇಕು. ಆಗಲೂ ಸಮಸ್ಯೆ ಸರಿಯಾಗದೇ ಇದ್ದಾಗ ನೇರವಾಗಿ ಕ್ಯಾಬಿನ್‌ಗೆ ನಡೆದುಹೋಗಿ ಪ್ರಯಾಣಿಕರೊಂದಿಗೆ ಮಾತನಾಡಬೇಕು ಎಂದರು.
ನೋಡಿ, ಅವರು ನಿಮ್ಮ ಮೇಲೆ ಕೈಮಾಡುವುದಿಲ್ಲ, ನಾವು ಸಮವಸ್ತ್ರದಲ್ಲಿದ್ದೇವೆ. ನಮಗೂ ಮನೆಗೆ ಹೋಗಬೇಕೆನ್ನುವುದು ಇದೆ. ನಾವು ಸಹ ನಿಮ್ಮೊಂದಿಗೆ ಇಲ್ಲಿ ಸಿಲುಕಿಕೊಂಡಿದ್ದೇವೆ, ಈ ಬಗ್ಗೆ ಹಲವು ಪ್ರಯಾಣಿಕರು ಸಹ ದನಿ ಎತ್ತಿ ಬೆಂಬಲ ಕೊಟ್ಟರು. ಜನರು 10-15 ನಿಮಿಷಗಳಲ್ಲಿ ಎಲ್ಲರೂ ಕುಳಿತುಕೊಂಡರು, ಆಹಾರ ಸೇವಿಸಲು ಶುರು ಮಾಡಿದರು. ಇಡೀ ಕ್ಯಾಬಿನ್ ಶಾಂತವಾಯಿತು. ನಂತರ ಅಚ್ಚರಿ ಎನ್ನುವಂತೆ ನಮಗೆ ಪ್ರಯಾಣಿಕರೆ ಆಹಾರ ಪೂರೈಕೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ದುಬೈನಿಂದ ಟೇಕ್ ಆಫ್ ಆದ ವಿಮಾನ ಎರಡೂವರೆ ಗಂಟೆ ಸಂಚರಿಸಿದ ನಂತರ ಓಮನ್ ದೇಶದ ಸಹ ಪ್ರಯಾಣಿಕ ನಿಯಂತ್ರಣಕ್ಕೆ ತೆಗೆದುಕೊಂಡರು. ನೆಲಕ್ಕೆ ಅಥವಾ ಕಟ್ಟಡಕ್ಕೆ ಅಪ್ಪಳಿಸುವ ಪ್ರಯತ್ನ ಮಾಡಿದ್ದ. ಈ ವೇಳೆ ವಿಮಾನದ ಕ್ಯಾಪ್ಟನ್, ಭಾರತದ ಸ್ಮಿತ್ ಮಚ್ಚಾರ್ ಇದನ್ನು ತಡೆಯುವ ಪ್ರಯತ್ನ ನಡೆಸಿದ್ದರು. ಆಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಓಮನ್ ಪೈಲಟ್ ಸ್ಮಿತ್ ಮರ್ಚ್ಛಾಗೆ ಚಾಕುವಿನಿಂದ ಇರಿದಿದ್ದಾನೆ. ತಲೆ ಹಾಗೂ ಹೊಟ್ಟೆಗೆ ಗಾಯವಾಗಿ ರಕ್ತಸ್ತಾವವಾಗುತ್ತಿರುವ ಮಧ್ಯೆ ಕೆಚ್ಚೆದೆಯಿಂದ ಹೋರಾಡಿದ ಭಾರತೀಯ ಕ್ಯಾಪ್ಟನ್ ವಿಮಾನ ಪತನಗೊಳ್ಳುವುದನ್ನು ತಡೆದಿದ್ದಾರೆ. ಪೈಲಟ್‌ಗಳು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಭಾರತದ ಸ್ಮಿತ್ ಮಚ್ಚಾರ್ ಅವರ ಈ ಸಾಹಸವನ್ನು ಭಾರತದ ನಾಯಕರು ಹಾಗೂ ಇಸ್ರೇಲ್, ಅಮೆರಿಕದ ಅಧ್ಯಕ್ಷ ಟ್ರಂಪ್ ಕೊಂಡಾಡಿದ್ದಾರೆ.
ಫ್ಲೈದುಬೈ ಸೇರುವ ಮೊದಲು, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮುಂಬೈನಲ್ಲಿ ಸ್ಪೈಸ್‌ಜೆಟ್ ಜೊತೆ ಸುಮಾರು 11 ವರ್ಷಗಳ ಕಾಲ ಹಿರಿಯ ಕಮಾಂಡರ್ ಮತ್ತು ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದಾರೆ, (ಏಜೆನ್ಸೀಸ್).