Who Was Ketan Agarwal 
ದೇಶ

ಭಾವಿ ಪತ್ನಿಯಿಂದಲೇ ಕೊಲೆಯಾದ ಯುವ ಉದ್ಯಮಿ ಕೇತನ್​​ ಅಗರ್ವಾಲ್​ ಯಾರು?.. Ketan Agarwal

ಪ್ರಮುಖ ಮುಖ್ಯಾಂಶಗಳು

  • ಪುಣೆ ರಿಯಲ್ ಎಸ್ಟೇಟ್ ಉದ್ಯಮಿ ಮಗ ಕೇತನ್​ ಅಗರ್ವಾಲ್​​ ನಿಧನ
  • ಭಾವಿ ಪತ್ನಿಯಿಂದಲೇ ಕೊಲೆಯಾದ ಕೇತನ್​ ಯಾರು, ತಂದೆಯ ವ್ಯವಹಾರದಲ್ಲಿದ್ದ ಪಾಲು ಎಷ್ಟು?
  • ಮದುವೆ ಇಷ್ಟವಿಲ್ಲದಿದ್ದರೆ ಹೇಳಬೇಕಿತ್ತು ಎಂದು ಹೇಳಿದ ಕೇತನ್​ ತಂದೆ ವಿಶಾಲ್ ಅಗರ್ವಾಲ್
ಪುಣೆ: ನವೆಂಬರ್​ನಲ್ಲಿ ನಡೆಯಬೇಕಿದ್ದ ಅದ್ದೂರಿ ಮದುವೆಗೆ 17 ಕೋಟಿ ಕೊಟ್ಟು ಹಾಲ್​ ಬುಕ್​ ಮಾಡಲಾಗಿತ್ತು. ಆದರೆ, ನಿಶ್ಚಿತಾರ್ಥ ಮಾಡಿಕೊಂಡ ಭಾವಿ ಪತಿಯೊಂದಿಗೆ ಬದುಕು ಕಟ್ಟಿಕೊಳ್ಳಲು ಇಚ್ಛಿಸದೆ, ಆತನನ್ನು ಟ್ರೆಕ್ಕಿಂಗ್​ಗೆಂದು ಪುಣೆಯ ಲೋಹಗಢ ಕೋಟೆಯಲ್ಲಿ ಕಣಿವೆಗೆ ಕರೆದುಕೊಂಡು ಹೋಗಿ ಕೊಲೆ( Ketan Agarwal) ಮಾಡಿದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಆರಂಭದಲ್ಲಿ ಇದು ಫೋಟೋ ತೆಗೆಯುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಸಂಭವಿಸಿದ ಸಾವು ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಿಂದ ಇದು ಪೂರ್ವಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಹೊರಬಂದಿದೆ.

ಕೇತನ್​ ಯಾರು?

ಭಾವಿ ಪತ್ನಿಯಿಂದ ಕೇತನ್​ ಅಗರ್ವಾಲ್​ ಯಾರು ಓದಿದ್ದು ಏನು, ತಂದೆ ಉದ್ಯಮದಲ್ಲಿ ಅವರ ಪಾತ್ರ ಹೇಗಿತ್ತು ಮತ್ತು ಏನಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
  • ಕೇತನ್​ ಆಸ್ಟ್ರೇಲಿಯಾದಲ್ಲಿ ಎಂಬಿಎ ಪೂರ್ಣಗೊಳಿಸಿ ಭಾರತಕ್ಕೆ ಮರಳಿದ್ದರು. ಕೇತನ್​ ಅನುಭವಿ ಚಾರಣಿ. ಲೋಹ್​ಗಡ್​ಗೆ ಹಲವಾರು ಬಾರಿ ಹೋಗಿದ್ದರು.
  • ಕೇತನ್ ಅಗರ್ವಾಲ್ ಪ್ರಮುಖ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರರಾಗಿದ್ದು, ತಮ್ಮ ಕೌಟುಂಬಿಕ ರಿಯಲ್ ಎಸ್ಟೇಟ್ ಸಂಸ್ಥೆಯಾದ 'ಅಗರ್ವಾಲ್​ ಸಕ್ಸಸ್ ಗ್ರೂಪ್' ಕಂಪನಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
  • ಪೋಷಕರೊಂದಿಗೆ ಕೇತನ್​ ಪುಣೆಯ ಗಹುಂಜೆಯಲ್ಲಿ ವಾಸ ಮಾಡುತ್ತಿದ್ದರು. ಬಾಬ್ಸನ್ ಎಫ್‌ಡಬ್ಲ್ಯೂ ಓಲಿನ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಟರ್‌ಪ್ರೆನರ್‌ಶಿಪ್' ವಿಷಯದಲ್ಲಿ ಮ್ಯಾಸ್ಟರ್ ಆಫ್ ಸೈನ್ಸ್ ಪದವಿ ಪಡೆದಿದ್ದರು.
  • ಇದರೊಂದಿಗೆ ಅವರು ಸಿಂಬಯೋಸಿಸ್ ವಿಶ್ವವಿದ್ಯಾಲಯದಿಂದ ಬಿಬಿಎ ಪದವಿಯನ್ನೂ ಹೊಂದಿದ್ದರು.
  • ಲಿಂಕ್ಡ್‌ಇನ್ ಪ್ರೊಫೈಲ್ ಮಾಹಿತಿ ಪ್ರಕಾರ, ಅವರು ಸುಸ್ಥಿರತೆ ಮತ್ತು ನಾವೀನ್ಯತೆಗೆ ಬದ್ಧರಾಗಿದ್ದರು. ಕೇವಲ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಹಸಿರು ಹಾಗೂ ಪರಿಸರ ಸ್ನೇಹಿ ಭವಿಷ್ಯಕ್ಕೆ ಕೊಡುಗೆ ನೀಡುವಂತಹ ಯೋಜನೆಗಳತ್ತ ಅವರು ವಿಶೇಷ ಗಮನ ಹರಿಸುತ್ತಿದ್ದರು.

ಯುವ ಉದ್ಯಮಿ ಕೊಂದ ಭಾವಿ ಪತ್ನಿ

26 ವರ್ಷದ ಮೃತ ಕೇತನ್​​ ಅಗರ್ವಾಲ್​​​ ಉದ್ಯಮಿ ವಿಶಾಲ್​ ಅಗರ್ವಾಲ್​ ಪುತ್ರ. ಈತನಿಗೆ 22 ವರ್ಷದ ಸಿಯಾ ಗೋಯಲ್​ ಜೊತೆಗೆ ಜೂನ್​ 18ರಂದು ಎಂಗೇಜ್​ಮೆಂಟ್​ ಜರುಗಿತ್ತು. ನವೆಂಬರ್​ನಲ್ಲಿ ಮದುವೆಗೆ ಡೇಟ್​ ಫಿಕ್ಸ್​ ಆಗಿತ್ತು, ಎರಡು ಕುಟುಂಬಸ್ಥರು ರಾಜಸ್ಥಾನದಲ್ಲಿ ಅರಮನೆ ಬುಕ್​ ಮಾಡಿದ್ದರು. ಜೊತೆಗೆ ಬಂದ ಅತಿಥಿಗಳನ್ನು ಕರೆದೊಯ್ಯಲು ವಿಮಾನ ಬುಕ್​ ಮಾಡಿದ್ದರು. ಆದರೆ ಈ ಸಂಭ್ರಮದ ಮಧ್ಯೆ ಮಡುಗಟ್ಟಿದ ಮೌನ ಮನೆ ಮಾಡಿದೆ.
ಮದುವೆ ಇಷ್ಟವಿಲ್ಲದಿದ್ದರೆ ನಮ್ಮ ಬಳಿ ಹೇಳಬಹುದಿತ್ತು. ಆದರೆ ಕೊಲೆ ಮಾಡುವಂತಹ ನೀಚ ಕೃತ್ಯಕ್ಕೆ ಕೈ ಹಾಕಬಾರದಿತ್ತು ಎಂದು ವಿಶಾಲ್​ ಅಗರ್ವಾಲ್​ ಅವರು ಸಿಯಾ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಕೇತನ್​​ ಒಬ್ಬ ಟ್ರೆಕ್ಕರ್​ ಅವನು ಸುಲಭವಾಗಿ ಕಂದಕಕ್ಕೆ ಬಿದ್ದಿರುವುದಿಲ್ಲ ಎನ್ನುವ ಅನುಮಾನ ಒಂದಾದರೆ. ಮತ್ತೊಂದು ಭಾವಿ ಪತಿಯ ಮೃತದೇಹ ಮನೆಗೆ ತಂದಾಗಲೂ ಸಿಯಾ ನೊಂದುಕೊಳ್ಳದೇ ಇದ್ದಿದ್ದೇ ಘಟನೆಯ ಸತ್ಯಾಂಶ ಏನು ಎಂಬುದು ಬೆಳಕಿಗೆ ಬಂದಿದ್ದು, (ಏಜೆನ್ಸೀಸ್).