ರೈಹಾನ್ ವಾದ್ರಾ, ಅವಿವಾ ಬೇಗ್
- ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವಿವಾ ಬೇಗ್
- ಸಾಕಷ್ಟು ಜನಪ್ರಿಯ ಮ್ಯಾಗ್ಜೀನ್ಗಳಲ್ಲಿ ಕೆಲಸ ಮಾಡಿರುವ ಅನುಭವ
- ಪ್ರಸ್ತುತ 'ದಿ ಜರ್ನಲ್'ನ ಪ್ರಧಾನ ಸಂಪಾದಕಿ
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ಅವರ ಸುಪುತ್ರ ರೈಹಾನ್ ವಾದ್ರಾ ಅವರ ನಿಶ್ಚಿತಾರ್ಥದ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮಧ್ಯೆ, ಪ್ರಿಯಾಂಕಾ ಅವರ ಮಗನ ಕೈಹಿಡಿಯಲಿರುವ ಸುಂದರಿ ಅವಿವಾ ಬೇಗ್ ಯಾರು? ಇವರ ವೃತ್ತಿಯೇನು? ಎಂಬ ಹತ್ತು ಹಲವು ಕುತೂಹಲಕಾರಿ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.
ಈ ಜೋಡಿ ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಅವಿವಾ ಬೇಗ್ ಅವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದ್ದು, ಎರಡೂ ಕುಟುಂಬಗಳು ತುಂಬಾ ಆತ್ಮೀಯವಾಗಿವೆ ಎಂದು ಮೂಲಗಳು ತಿಳಿಸಿವೆ. ಅವಿವಾ ಬೇಗ್ 3 ದಿನಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರೈಹಾನ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡರು. ಪ್ರಿಯಾಂಕಾ ಗಾಂಧಿ ಅವರ ಪುತ್ರನ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಅವಿವಾ ಬೇಗ್ ಯಾರು? ಇವರ ವಿದ್ಯಾಭ್ಯಾಸ ಏನು? ಸುಂದರಿಯ ಹಿನ್ನೆಲೆ ಏನು? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಹೀಗಿದೆ ನೋಡಿ.
ಯಾರು ಈ ಅವಿವಾ ಬೇಗ್?
ಅವಿವಾ ಬೇಗ್ ದೆಹಲಿಯ ವೃತ್ತಿಪರ ಛಾಯಾಗ್ರಾಗಕಿ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಬೇಗ್ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಜರ್ನಲಿಸಂ ಮುಗಿಸಿದ್ದಾರೆ. ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ನಂತರದಲ್ಲಿ ಭಾರತದ ಏಜೆನ್ಸಿ, ಬ್ರ್ಯಾಂಡ್‌ಗಳು ಮತ್ತು ಅನೇಕ ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡುವ ಬ್ರ್ಯಾಂಡ್ ಸ್ಟುಡಿಯೋ ಮತ್ತು ನಿರ್ಮಾಣ ಕಂಪನಿಯಾದ ಅಟೆಲಿಯರ್ 11ರ ಸಹ-ಸಂಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ಲರಂತೆ ಸಿಂಪಲ್ ಲೈವ್ಸ್ಟೈಲ್ ನಡೆಸುತ್ತಿರುವ ಅವರು, ಕ್ಯಾಮರಾ ಜಗತ್ತಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವುದು ವಿಶೇಷ. ಹಲವಾರು ಆರ್ಟ್ ಗ್ಯಾಲರಿಗಳಲ್ಲಿ ತಮ್ಮ ಫೋಟೋಗಳನ್ನು ಪ್ರದರ್ಶಿಸಿರುವ ಅವಿವಾ, 'ವರ್ವ್'ನಂತಹ ಜನಪ್ರಿಯ ಮ್ಯಾಗ್ಜೀನ್ಗಳಲ್ಲಿ ಕೆಲಸ ಮಾಡಿದ್ದಾರೆ. ಮೆಥಡ್ ಗ್ಯಾಲರಿಯೊಂದಿಗೆ 'ಯು ಕ್ಯಾಂಟ್ ಮಿಸ್ ದಿಸ್' (2023), ಇಂಡಿಯಾ ಆರ್ಟ್ ಫೇರ್ ಯಂಗ್ ಕಲೆಕ್ಟರ್ ಪ್ರೋಗ್ರಾಂನ ಭಾಗವಾಗಿ 'ಯು ಕ್ಯಾಂಟ್ ಮಿಸ್ ದಿಸ್' (2023), ದಿ ಕ್ವಾರಮ್ ಕ್ಲಬ್‌ನಲ್ಲಿ 'ದಿ ಇಲ್ಯೂಸರಿ ವರ್ಲ್ಡ್' (2019), ಇಂಡಿಯಾ ಡಿಸೈನ್ ಐಡಿ, ಕೆ2 ಇಂಡಿಯಾ (2018) ರಲ್ಲಿ 'ದಿ ಇಲ್ಯೂಸರಿ ವರ್ಲ್ಡ್' (2019) ಮುಂತಾದ ಪ್ರದರ್ಶನಗಳಲ್ಲಿ ತಮ್ಮ ಫೋಟೋಗ್ರಾಫ್ಗಳನ್ನು ಪ್ರದರ್ಶಿಸಿದ್ದಾರೆ.
ಪ್ರಸ್ತುತ, ಐ-ಪಾರ್ಲಿಮೆಂಟ್‌ನಲ್ಲಿ 'ದಿ ಜರ್ನಲ್'ನ ಪ್ರಧಾನ ಸಂಪಾದಕಿಯಾಗಿರುವ ಅವಿವಾ, ವರ್ವ್ ಮ್ಯಾಗಜೀನ್ ಇಂಡಿಯಾ ಮತ್ತು ಕ್ರಿಯೇಟಿವ್ ಇಮೇಜ್ ಮ್ಯಾಗಜೀನ್‌ನಲ್ಲಿ ಇಂಟರ್ನ್‌ಶಿಪ್‌ಗಳನ್ನು ಸಹ ಪೂರ್ಣಗೊಳಿಸಿದ್ದಾರೆ.
ರೈಹಾನ್ ವಾದ್ರಾ ಹಿನ್ನೆಲೆ ಏನು?
ಅಂದಹಾಗೆ, ರೈಹಾನ್ ವಾದ್ರಾ ಓರ್ವ ವಿಸ್ಯುವಲ್ ಆರ್ಟಿಸ್ಟ್. ಕಳೆದ ಹತ್ತು ವರ್ಷದಿಂದಲೂ ತಮ್ಮ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತನ್ನು ಸೆರೆಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಆರ್ಟ್ ಗ್ಯಾಲರಿ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ರೈಹಾನ್ ಅವರು ವನ್ಯಜೀವಿಗಳನ್ನು, ಬೀದಿ ಬದಿಯಲ್ಲಿ ಕಾಣ ಸಿಗುವ ಅಪರೂಪದ ಕ್ಷಣಗಳನ್ನು ಮತ್ತು ಕಮರ್ಷಿಯಲ್ ಫೋಟೋಗ್ರಫಿಯನ್ನು ಮಾಡುತ್ತಾರೆ,(ಏಜೆನ್ಸೀಸ್).