ರಣವೀರ್ ಸಚ್‌ದೇವ್ 
ದೇಶ

ಈ ಪುಟ್ಟ ಪೋರನ ಮುಂದೆ ಟೆಕ್​ ದೈತ್ಯರೇ ಗಪ್​ಚುಪ್​! ಅಷ್ಟಕ್ಕೂ ಯಾರೀ ರಣವೀರ್​ ಸಚ್​ದೇವ್? ​ಈತನ ಸಾಧನೆ ಏನು? | Ranveer Sachdeva

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್​ ಶೃಂಗಸಭೆ
  • ಈ ಶೃಂಗಸಭೆಯಲ್ಲಿ ಟೆಕ್​ ದೈತ್ಯರನ್ನೇ ಬೆರಗಾಗಿಸಿದ 8 ವರ್ಷದ ಪೋರ
  • ಯಾರು ಈ ರಣವೀರ್​ ಸಚ್​ದೇವ? ಈತನ ಸಾಧನೆಯೇನು?
ನವದೆಹಲಿ: ಪ್ರಸ್ತುತ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಜಗತ್ತಿನ ಅನೇಕ ಪ್ರಮುಖ ನಾಯಕರು, ಟೆಕ್​ ದೈತ್ಯ ಸಂಸ್ಥೆಗಳ ಸಿಇಒಗಳು ಮತ್ತು ಗಣ್ಯರು ಭಾಗಿಯಾಗಿದ್ದಾರೆ. ಈ ಶೃಂಗಸಭೆಯಲ್ಲಿ 8 ವರ್ಷದ ರಣವೀರ್ ಸಚ್‌ದೇವ್​ ಎಂಬ ಪುಟ್ಟ ಪೋರನ ಎಲ್ಲರ ಗಮನ ಸೆಳೆದಿದ್ದು, ಈತನ ಸಾಧನೆ ಮತ್ತು ಗುರಿಯನ್ನು ನೋಡಿ ಟೆಕ್​ ದೈತ್ಯರೇ ಒಂದು ನಿಮಿಷ ಹುಬ್ಬೇರಿಸಿದ್ದಾರೆ.

ಅತ್ಯಂತ ಕಿರಿಯ ಭಾಷಣಕಾರ

ಈ ಶೃಂಗಸಭೆಯಲ್ಲಿ ಅತ್ಯಂತ ಕಿರಿಯ ಮುಖ್ಯ ಭಾಷಣಕಾರ ಎಂಬ ಹೆಗ್ಗಳಿಕೆಗೆ ರಣವೀರ್​ ಪಾತ್ರನಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಕೋಡಿಂಗ್ ಕಲಿತ ರಣವೀರ್, ದೇಶದ ಅತ್ಯಂತ ಕಿರಿಯ ತಂತ್ರಜ್ಞಾನ ಉತ್ಸಾಹಿ ಮತ್ತು ಯುವ ಕೋಡರ್ ಎಂದು ಖ್ಯಾತಿ ಗಳಿಸಿದ್ದಾನೆ. ಕೇವಲ 8 ವರ್ಷ ವಯಸ್ಸಿಗೆ ಈ ಸಾಧನೆಗೈದ ರಣವೀರ್ ಸಚ್‌ದೇವ ಭಾರತದ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಮಹತ್ತರ ಕನಸನ್ನು ಹೊಂದಿದ್ದಾನೆ. 

ಈತನಿಗೆ ಸುಂದರ್ ಪಿಚೈ, ಸ್ಯಾಮ್ ಆಲ್ಟ್‌ಮನ್ ಫಿದಾ!

ರಣವೀರ್ ತಮ್ಮ ಪ್ರತಿಭೆಯಿಂದ ತಂತ್ರಜ್ಞಾನ ಜಗತ್ತಿನ ಅನೇಕ ಟೆಕ್ ದೈತ್ಯರನ್ನು ಭೇಟಿ ಮಾಡಿದ್ದಾರೆ. ಈ ಶೃಂಗಸಭೆಯ ಸಮಯದಲ್ಲಿ, ಅವರು ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಸ್ಯಾಮ್ ಆಲ್ಟ್‌ಮನ್ ಅವರನ್ನು ಭೇಟಿಯಾದರು. 

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಗಿ

ರಣವೀರ್ ಇದೇ ಮೊದಲು ದೊಡ್ಡ ವೇದಿಕೆಯನ್ನು ಹತ್ತಿಲ್ಲ. ಈ ಹಿಂದೆಯೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಜಿನೀವಾದಲ್ಲಿ ನಡೆದ ಎಐ ಫಾರ್ ಗುಡ್ ಶೃಂಗಸಭೆಯಲ್ಲಿ ಅವರು, ಮಾರ್ಕ್ ಬೆನಿಯೋಫ್ ಮತ್ತು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡೋರೀನ್ ಬೊಗ್ಡಾನ್-ಮಾರ್ಟಿನ್​ರನ್ನು ಭೇಟಿಯಾದರು. 2024ರಲ್ಲಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಮತ್ತು 2023ರಲ್ಲಿ ನವದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಅವರನ್ನು ನೇರವಾಗಿ ಭೇಟಿಯಾಗಿದ್ದಾರೆ. 
3ನೇ ​​ವಯಸ್ಸಿನಿಂದಲೂ ಕೋಡಿಂಗ್ ಕಲಿಕೆ
ರಣವೀರ್ ಬಾಲ್ಯದಿಂದಲೂ ತಂತ್ರಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರು ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ರಣವೀರ್​ 3ನೇ ವಯಸ್ಸಿನಲ್ಲಿ ಕೋಡಿಂಗ್ ಕಲಿಯಲು ಪ್ರಾರಂಭಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಸಣ್ಣ ಡಿಜಿಟಲ್ ಯೋಜನೆಗಳನ್ನು ರಚಿಸಲು ಪ್ರಾರಂಭಿಸಿದರು. ಲೈವ್ ಸೆಷನ್‌ನಲ್ಲಿ ತಮ್ಮ ಕೋಡಿಂಗ್ ಕೌಶಲ್ಯವನ್ನು ಎಲ್ಲರ ಮುಂದೆ ಪ್ರದರ್ಶಿಸಿದರು. 2022ರ ಗ್ಲೋಬಲ್ ರೀಡಿಂಗ್ ಚಾಲೆಂಜ್‌ನಲ್ಲಿ ಸೂಪರ್ ಪ್ರೆಸೆಂಟರ್ ಆಗಿ ಚಿನ್ನದ ಪದಕವನ್ನು ಪಡೆದಿದ್ದಾರೆ. 6 ವರ್ಷ ವಯಸ್ಸಿನಲ್ಲಿ, ತಂತ್ರಜ್ಞಾನ ಮತ್ತು ನಾವೀನ್ಯತೆ ಬಗ್ಗೆ ಮಾತನಾಡುವ ಅತ್ಯಂತ ಕಿರಿಯ TEDx ಭಾಷಣಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಣವೀರ್ ಹೇಳಿದ್ದೇನು?

"ನಾನು ಭಾರತದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸುವ ಅತ್ಯಂತ ಕಿರಿಯ ವ್ಯಕ್ತಿ. ನಾವು ಪ್ರಾಚೀನ ಭಾರತೀಯ ತತ್ವಶಾಸ್ತ್ರವನ್ನು ಆಧುನಿಕ ಟೆಕ್ನಾಲಜಿಯೊಂದಿಗೆ ಹೇಗೆ ಸಂಯೋಜಿಸುತ್ತಿದ್ದೇವೆ ಎಂಬುದರ ಕುರಿತು ಮಾತನಾಡುತ್ತೇನೆ. ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಲು ಇತರ ದೇಶಗಳು ಬಳಸುತ್ತಿರುವ ವಿಭಿನ್ನ ವಿಧಾನಗಳನ್ನು ಸಹ ನಾನು ಚರ್ಚಿಸುತ್ತೇನೆ. ಭಾರತವು ಎಐ ಅನ್ನು ಹೇಗೆ ನಿರ್ಮಿಸುತ್ತಿದೆ ಎಂಬುದರ ಬಗ್ಗೆಯೂ ನಾನು ಮಾತನಾಡುತ್ತೇನೆ ಎಂದರು.
ಇತ್ತೀಚೆಗೆ ಬಿಡುಗಡೆಯಾದ ನನ್ನ ಭಾರತೀಯ ಎಐ ಮಾದರಿ ಬಳಕೆಯ ಪ್ರಕರಣವನ್ನು ಸಹ ನಾನು ಹಂಚಿಕೊಳ್ಳುತ್ತೇನೆ. ಕೃತಕ ಬುದ್ಧಿಮತ್ತೆ ಸಾಕ್ಷರತೆಯು ಭಾರತದ ಜಿಡಿಪಿಗೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ನಾನಿಲ್ಲಿ ವಿವರಿಸುತ್ತೇನೆ" ಎಂದು ಹೇಳಿದರು. ಇದು ಶೃಂಗಸಭೆಗೆ ಆಗಮಿಸಿದ್ದ ಅನೇಕ ಟೆಕ್​ ದೈತ್ಯರನ್ನು ಚಪ್ಪಾಳೆ ತಟ್ಟುವಂತೆ ಮಾಡಿತು,(ಏಜೆನ್ಸೀಸ್).