ನವದೆಹಲಿ: ದೇಶದಲ್ಲಿ ಏರುತ್ತಿರುವ ಹಣದುಬ್ಬರದಿಂದ ನಿರುದ್ಯೋಗ ಮತ್ತು ಆರ್ಥಿಕತೆ ಕುಸಿಯುತ್ತಿದ್ದು, ಜನರು ಕಷ್ಟಪಡುತ್ತಿದ್ದರೆ, ಆಡಳಿತರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ವಿಪಕ್ಷಗಳಿಂದ ನಾಯಕರ ಖರೀದಿಯನ್ನು ಮಾಡುತ್ತಿದೆ ಎಂದು ಶನಿವಾರ(ಜೂ. 20) ಕಾಂಗ್ರೆಸ್(Congress) ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಜನರು ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆದರೆ ಬಿಜೆಪಿ ಇತರ ಪಕ್ಷಗಳ ನಾಯಕರನ್ನು ಖರೀದಿ ಮಾಡಿ ಕರೆತರುವ ಮೂಲಕ ತನ್ನ ರಾಜಕೀಯ ಸ್ಥಾನವನ್ನು ಬಲಪಡಿಸುವತ್ತ ಗಮನಹರಿಸಿದೆ ಎಂದು ಕಿಡಿಕಾರಿದ್ದಾರೆ.
ಹಣದುಬ್ಬರ ಹೆಚ್ಚಿರುವುದರಿಂದ ಉಳಿತಾಯ ವೇಗವಾಗಿ ಕ್ಷೀಣಿಸುತ್ತಿದೆ. ಕೈಗೆಟುಕುವಿಕೆಯಲ್ಲಿನ ಕೊರತೆ, ಆಕಾಂಕ್ಷೆಗಳಿಗೆ ದ್ರೋಹ, ಅಸಮಾನತೆ, ಜಾಗತಿಕ ವಿಶ್ವಾಸಾರ್ಹತೆಯ ಕುಸಿತ, ಯುವಜನರ ಆಕ್ರೋಶದ ಮಹಾಪೂರ. ಮೋದಿ ಸರ್ಕಾರದ ಆರ್ಥಿಕತೆಯ ದುರುಪಯೋಗದ ಭಾರದಿಂದ ಮನೆಗಳು ನಾಶವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 16 ತಿಂಗಳಲ್ಲೇ ಗರಿಷ್ಠ ಚಿಲ್ಲರೆ ಹಣದುಬ್ಬರ ದಾಖಲಾಗಿದೆ. ಆಹಾರ ಹಣದುಬ್ಬರ - 4.78%, ಟೊಮೆಟೊಗಳು ತಟ್ಟೆಗಳಿಂದ ಕಣ್ಮರೆಯಾಗಿವೆ. ವೈದ್ಯಕೀಯ ಹಣದುಬ್ಬರ 15% ಕ್ಕಿಂತ ಹೆಚ್ಚಾಗಿದೆ. ರೂಪಾಯಿ ಗುಂಡಿಗೆ ಇಳಿಯುತ್ತಿದೆ. ವಿದೇಶಿ ಹೂಡಿಕೆದಾರರು ನಮ್ಮನ್ನು ದೂರವಿಡುತ್ತಿದ್ದಾರೆ. ಯುವಕರಿಗೆ ಉದ್ಯೋಗವಿಲ್ಲ, ನಿರುದ್ಯೋಗ ಹೆಚ್ಚಾಗಿದೆ ಎಂದಿದ್ದಾರೆ.
ಇಷ್ಟೆಲ್ಲಾ ದೇಶದಲ್ಲಿ ಆಗುತ್ತಿದ್ರೂ, ಬಿಜೆಪಿ ಇತರ ಪಕ್ಷಗಳಿಂದ ಶಾಪಿಂಗ್ ಮಾಡುವಲ್ಲಿ ನಿರತವಾಗಿದೆ, ಆದರೆ ಎಎಎಂ ಆದ್ಮಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ (ಏಜೆನ್ಸೀಸ್).