Gold Rates: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿಯಲು ಪ್ರಾರಂಭಿಸಿವೆ. ಇನ್ನು, ಮದುವೆ ಮತ್ತು ಶುಭ ಕಾರ್ಯಗಳ ಬಿಜಿಯಲ್ಲಿರುವ ಗ್ರಾಹಕರ ಖರೀದಿಗೆ ಇದೇ ಸೂಕ್ತ ಸಮಯವಾಗಿದ್ದರೂ ಈ ವರ್ಷ ಚಿನ್ನ ಕೊಳ್ಳುವಿಕೆಯನ್ನು ಮರೆತುಬಿಡಿ ಎಂಬ ಪ್ರಧಾನಿ ಮೋದಿ ಅವರ ಮಾತು ಸದ್ಯ ಖರೀದಾರರನ್ನು ಸಂಪೂರ್ಣವಾಗಿ ಕಟ್ಟಿಹಾಕಿದೆ. ಮತ್ತೊಂದೆಡೆ, ಸತತ ಎರಡನೇ ದಿನವೂ ಬೆಲೆಗಳು ಕುಸಿದಿವೆ.
ಮಂಗಳವಾರ ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ 1800 ರೂ. ಕುಸಿದರೆ, 22 ಕ್ಯಾರೆಟ್ 1650 ರೂ. ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿತ ಕಂಡಿದ್ದು, ಒಂದು ಔನ್ಸ್ 40 ಡಾಲರ್ ಇಳಿಕೆಯಾಗಿದೆ. ಇದರೊಂದಿಗೆ, ಹಲವು ದಿನಗಳ ಬಳಿಕ ಒಂದು ಔನ್ಸ್ ಚಿನ್ನದ 3,976 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಗಣನೀಯವಾಗಿ ಇಳಿದಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ
- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,40,280 ರೂ.ಗಳಿದ್ದರೆ, 22 ಕ್ಯಾರೆಟ್ 1,28,600 ರೂ.ಗಳಷ್ಟಿದೆ.
- ಮುಂಬೈ, ಬೆಂಗಳೂರು, ಕೋಲ್ಕತ ಮತ್ತು ಚೆನ್ನೈ ನಗರಗಳಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,45,080 ರೂ. ಆಗಿದ್ದರೆ, 22 ಕ್ಯಾರೆಟ್ ಬೆಲೆ 1,32,990 ರೂ.ಗೆ ತಲುಪಿದೆ
- ಇನ್ನು, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,40,130 ರೂ. ಆಗಿದ್ದು, 22 ಕ್ಯಾರೆಟ್ ದರ 1,28,450 ರೂ. ತಲುಪಿದೆ.
ಬೆಳ್ಳಿ 5000 ರೂ. ಕುಸಿತ
ಬೆಳ್ಳಿ ಬೆಲೆಗಳನ್ನು ನೋಡಿದರೆ, ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ದರ 2,35,000 ರೂ. ಆಗಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿಯ ದರ 2,44,900 ರೂ. ಇನ್ನು, ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಕೆಜಿ ಬೆಳ್ಳಿಯ ಬೆಲೆ 2,49,900 ರೂ.ಗೆ ತಲುಪಿದೆ.
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿನ ಬದಲಾವಣೆಗಳು. ಚಿನ್ನ-ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಹೀಗಾಗಿ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿ.