The Jackfruit Capital Of India 
ದೇಶ

ಹಲಸಿನ ಹಣ್ಣಿನ ರಾಜಧಾನಿ ಯಾವ್ದು ಗೊತ್ತಾ?: ಬೇಸಿಗೆಯಲ್ಲಿ ಮಾತ್ರವಲ್ಲ ವರ್ಷದ 12 ತಿಂಗಳು ಹಣ್ಣನ್ನು ಸವಿಯೋಕೆ ಇಲ್ಲಿ ಮಾತ್ರ ಸಾಧ್ಯ..Panruti

ಪ್ರಮುಖ ಮುಖ್ಯಾಂಶಗಳು

  • ಭಾರತದ ಹಲಸಿನ ಹಣ್ಣಿನ ರಾಜಧಾನಿ ಯಾವುದು ಗೊತ್ತಾ?
  • ವರ್ಷವಿಡೀ ಈ ಗ್ರಾಮದಲ್ಲಿ ಹಲಸಿನ ಹಣ್ಣನ್ನು ಬೆಳೆಯಲಾಗುತ್ತದೆ
  • ತಮಿಳುನಾಡಿನ ಪನ್ರುತಿ ಪಟ್ಟಣದ ಜನರಿಗೆ ಹಲಸಿನ ಕೃಷಿಯೇ ಆದಾಯ
The Jackfruit Capital Of India
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗದಲ್ಲಿ ಬೇಸಿಗೆಗಾಗಿ ಕಾಯುತ್ತಾರೆ ಎಂದರೆ ಅದು ಈ ರಸಭರಿತ ಹಣ್ಣಿಗಾಗಿ ಮಾತ್ರ. ಹೌದು ಮಾವು ಮತ್ತು ಹಲಸು ಎಂದರೆ, ಇಲ್ಲಿನ ಜನರಿಗೆ ಅಚ್ಚುಮೆಚ್ಚು ಒಂದೊಂದು ಪ್ರಾಂತ್ಯದಲ್ಲಿಯೂ ಒಂದೊಂದು ತಳಿಯನ್ನು ಕಾಣಬಹುದು. ಇನ್ನು ಹಲಸಿನಿಂದ ತಯಾರಿಸಲಾಗುವ ಕೇಸರಿಬಾತು, ಚಿಪ್ಸ್​​​, ಹಲಸಿನ ಪಲ್ಯ, ಕಾಯಿಯನ್ನು ಉಪ್ಪಲ್ಲಿ ನೆನಸಿ ಮಾಡುವ ಪಲ್ಯ, ಸಾರು, ಹಪ್ಪಳ, ಸಂಡಿಗೆ ಅಬ್ಬಬ್ಬಾ ಒಂದಾ ಎರಡಾ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ ಈ ಹಲಸು. ಇಷ್ಟೆಲ್ಲ ನೆಚ್ಚಿಕೊಳ್ಳುವ ಹಲಸನ್ನು ಹೆಚ್ಚಾಗಿ ಎಲ್ಲಿ ಬೆಳೆಯೋದು ಗೊತ್ತಾ? ಇದರ ರಾಜಧಾನಿ ಯಾವುದು ಗೊತ್ತಾ. ಈ ಬಗ್ಗೆ ಇಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಬೆಳೆಯೋದ್ರಲ್ಲಿ ಕರ್ನಾಟಕ ಫೇಮಸ್ಸು, ಮಾವಿಗೆ ಉತ್ತರ ಪ್ರದೇಶ, ಕೇಸರಿ ಬೆಳೆಯುವುದರಲ್ಲಿ ಕಾಶ್ಮೀರ ಫೇಮಸ್​​. ಹಾಗೆಯೇ ಹಲಸಿನ ಹಣ್ಣಿನ ವಿವಿಧ ತಳಿ ಬೆಳೆಯೋದರಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಗ್ರಾಮ ಹೆಸರುವಾಸಿಯಾಗಿದೆ. ಇಲ್ಲಿನಿಂದ ದೇಶ ವಿದೇಶಕ್ಕೂ ಹಣ್ಣನು ರವಾನೆ ಮಾಡಲಾಗುತ್ತದೆ. ಇಲ್ಲಿನ ಹಲಸು ರೈತರ ಬದುಕಿಗೆ ಆದಾಯದ ಆಧಾರ ಸ್ತಂಭವಾಗಿದೆ.
ಕಡಲೂರಿನ ಹಲಸು ಇಷ್ಟವಾಗೋದು ಯಾಕೆ?
ಕಡಲೂರಿನ ಪನ್ರುತಿಯಲ್ಲಿ ಬೆಳೆಯುವ ಹಲಸು ರಸಭರಿತವಾದದ್ದು. ಇಲ್ಲಿ ದೊಡ್ಡ ಪ್ರಮಾಣದ ಹಲಸಿನ ಕೃಷಿ ಇದೆ. 800 ಎಕರೆ ವ್ಯಾಪ್ತಿಯಲ್ಲಿ ಹಲಸಿನ ಕೃಷಿ ಮಾಡಲಾಗುತ್ತಿದೆ. ಇಲ್ಲಿನ ಹಲಸಿನ ಹಣ್ಣುಗಳು ತೀರ ವಿಭಿನ್ನ. ದಪ್ಪನೆಯ ತಿರುಳು, ಸುವಾಸನೆ ಭರಿತ ಹಣ್ಣು ಸಿಗುವುದರಿಂದ ಇಲ್ಲಿನ ಹಣ್ಣು ಹೆಸರುವಾಸಿ.

ಪನ್ರುತಿಯಲ್ಲಿ ಹಲಸಿನ ಹಣ್ಣು ಹೆಚ್ಚಾಗಿ ಬೆಳೆಯೋದು ಏಕೆ?

ಇಷ್ಟೇ ಅಲ್ಲ ಇಲ್ಲಿ ಬೆಳೆಯುವ ಹಲಸಿನ ಹಣ್ಣು ತನ್ನದೇ ಆದ ಗುಣಮಟ್ಟಕ್ಕೆ ಕೇಂದ್ರದಿಂದ ಜಿಐ ಟ್ಯಾಗ್​ ಪಡೆದುಕೊಂಡಿದೆ. ಇಲ್ಲಿನ ಪ್ರತಿ ಹಲಸಿನಲ್ಲಿ ಪರಿಮಳಯುಕ್ತ ಹಾಗೂ ರಸಭರಿತ ಹಣ್ಣು ಇರಲಿದೆ.ಇಲ್ಲಿ ಹಲಸಿನ ಕೃಷಿಗೆ ಯಾವುದೇ ರಾಸಾಯನಿಕ ಸಿಂಪಡಿಸೋದಿಲ್ಲ. ನೈಸರ್ಗಿಕ ಸಿಹಿ ಇರಲಿದ್ದು, ಸುವಾಸನೆ ಭರಿತ ದೊಡ್ಡದಾದ ಹಣ್ಣುಗಳು ಇರುತ್ತವೆ.

ಪನ್ರುತಿ ಹಲಸು ಫೇಮಸ್ ಯಾಕೆ?

ಕೇರಳ, ಕರ್ನಾಟಕ, ಅಸ್ಸಾಂ ಸೇರಿದಂತೆ ಹಲವು ಕಡೆ ಹಲಸು ಬೆಳೆಯಲಾಗುತ್ತದೆ. ಆದರೆ ಪನ್ರುತಿಯಲ್ಲಿ ಇದು ಒಂದು ವರ್ಷದ ಕೃಷಿ. ಇಲ್ಲಿ ಋತುವಿಗೆ 150 ರಿಂದ 502 ಹಣ್ಣು ಸಿಗುತ್ತದೆ. ವಾರ್ಷಿಕ 45 ಸಾವಿರ ಮೆಟ್ರಿಕ್​ ಹಣ್ಣುಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಈ ಜಿಲ್ಲೆಗೆ ಇದೆ.
ಪನ್ರುತಿಯಲ್ಲಿ ಸಿಗುವ ಪ್ರತಿ ಹಕಸಿನ ಹಣ್ಣಿನ ಗಾತ್ರ 7 ಕೆಜಿಯಿಂದ 40ರವರೆಗೂತೂಗುತ್ತದೆ. 1906ರಲ್ಲಿ ಪ್ರಕಟವಾದ ಗೆಜೆಟಿಯರ್​ ವರದಿ ಪ್ರಕಾರ ಪನುತಿಯಲ್ಲಿ ಕೆಂಪು ಭೂಮಿಯು ಗೋಡಂಬಿ ಬಮತ್ತು ಹಲಸಿನ ಹಣ್ಣು ಬೆಳೆದು ವ್ಯಾಪಾರ ಕಂಡುಕೊಂಡಿತು ಎನ್ನುವುದನ್ನು ಉಲ್ಲೇಖಿಸಿತ್ತು, (ಏಜೆನ್ಸೀಸ್).