Assams Jorhat | ಅಸ್ಸಾಂನ ಜೋರ್ಹತ್ ಜಿಲ್ಲೆಯ ದೂರದ ಭತ್ತದ ಗದ್ದೆಯಲ್ಲಿ ಅಪಘಾತಕ್ಕೀಡಾದ ವಿಮಾನ ( ಕೃಪೆ- X/@INDIAHISTORYPIC) 
ದೇಶ

ಐವರನ್ನು ಬಲಿ ಪಡೆದಿದ್ದ ಜೋರ್ಹತ್ ವಿಮಾನ ದುರಂತ; ಸಾವನ್ನೇ ಗೆದ್ದಿದ್ದ ಭಾರತದ ಪ್ರಧಾನಿ!.. ನಗುತ್ತಾ ಹೊರಬಂದು ಹೇಳಿದ್ದೇನು ಗೊತ್ತಾ..? | Assams Jorhat

ಪುಣೆ: ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದು, ಅವರ ಅಗಲಿಕೆಯಿಂದಾಗಿ ಇಡೀ ದೇಶವೇ ಆಘಾತದಲ್ಲಿದೆ.
ರಾಜಕೀಯ ವ್ಯಕ್ತಿಯೊಬ್ಬರು ವಿಮಾನ ಅಪಘಾತದಲ್ಲಿ ನಿಧನರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ, ವಿಜಯ್ ರೂಪಾನಿ ಮತ್ತು ವೈಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಹಲವಾರು ನಾಯಕರು ಇದೇ ರೀತಿಯ ಘಟನೆಗಳಿಂದಾಗಿ ಪ್ರಾಣ ಕಳೆದುಕೊಂಡರು. ಅಪಘಾತಗಳಲ್ಲಿ ಬದುಕುಳಿದ ಅಪರೂಪದ ಸಂದರ್ಭಗಳೂ ಇದ್ದು, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಸಾವನ್ನೇ ಜಯಿಸಿದ್ದ ಅದೃಷ್ಟವಂತರು.

ಪವಾಡಸದೃಶವಾಗಿ ಪಾರು

1977 ರ ನವೆಂಬರ್ 4 ರಂದು ಮೊರಾರ್ಜಿ ದೇಸಾಯಿ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಅಸ್ಸಾಂನ ಜೋರ್ಹತ್ ಜಿಲ್ಲೆಯ ದೂರದ ಭತ್ತದ ಗದ್ದೆಯಲ್ಲಿ ಅಪಘಾತಕ್ಕೀಡಾಗಿಯಿತು, ಈ ದುರಂತದಲ್ಲಿ ಪವಾಡಸದೃಶವೆಂಬತೆ ಸಾವಿನ ದವಡೆಯಿಂದ ಪಾರಾದರು.
ರಷ್ಯಾ ನಿರ್ಮಿತ ಟುಪೋಲೆವ್ Tu-124 ವಿಮಾನವು ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ಜೋರ್ಹತ್‌ಗೆ ಈಶಾನ್ಯಕ್ಕೆ ಅಧಿಕೃತ ಭೇಟಿಗಾಗಿ ಹೊರಟಿತ್ತು. ಸಂಜೆ ವಿಮಾನ ಇಳಿಯಲು ಸಿದ್ಧವಾಗುತ್ತಿದ್ದಂತೆ, ಅದು ಇದ್ದಕ್ಕಿದ್ದಂತೆ ಕೆಳಗೆ ಇಳಿಯುವ ಬದಲು ಎತ್ತರವನ್ನು ಪಡೆಯಿತು. ರನ್‌ವೇ ಲೈಟ್​ ಸಮಸ್ಯೆಯಿಂದ ಮಸುಕಾಗಿದ್ದವು, ವಿಮಾನವು ರನ್‌ವೇಯನ್ನು ಮೀರಿಸಿ ವಾಯುನೆಲೆಯಿಂದ ದೂರದಲ್ಲಿ ಅಪ್ಪಳಿಸಿತು.
ಅಪಘಾತದಲ್ಲಿ ವಿಮಾನದ ಕಾಕ್‌ಪಿಟ್ ಉಳಿದ ಭಾಗದಿಂದ ಬೇರ್ಪಟ್ಟಿತು. ಇಬ್ಬರು ಪೈಲಟ್‌ಗಳು ಮತ್ತು ಮೂವರು ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿದರು, ಇದು ಸೇವೆಯಲ್ಲಿರುವ ಭಾರತೀಯ ಪ್ರಧಾನಿಯನ್ನು ಒಳಗೊಂಡ ಅತ್ಯಂತ ಗಂಭೀರ ವಾಯುಯಾನ ದುರಂತಗಳಲ್ಲಿ ಒಂದಾಗಿದೆ.
ಆ ಸಮಯದಲ್ಲಿ 81 ವರ್ಷ ವಯಸ್ಸಿನ ಮೊರಾರ್ಜಿ ದೇಸಾಯಿ ಅವರನ್ನು ವಿಮಾನದಿಂದ ಹೊರತೆಗೆದು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ವಿಮಾನ ಪತನಗೊಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಉಂಟಾದ ಅವ್ಯವಸ್ಥೆ ಮತ್ತು ಬೆಂಕಿಯ ಹೊರತಾಗಿಯೂ ದೇಸಾಯಿಯವರು ವಿಚಲಿತರಾಗದೆ ಶಾಂತ ಚಿತ್ತರಾಗಿದ್ದರು. ಆ ವಿಮಾನ ದುರಂತದಲ್ಲಿ ಕಾಂಗ್ರೆಸ್ ನಾಯಕ ಪಿ ಕೆ ತುಂಗನ್, ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿ, ದೇಸಾಯಿ ಅವರ ಪುತ್ರ ಕಾಂತಿಭಾಯಿ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತ ನಾರಾಯಣ್ ದೇಸಾಯಿ ಕೂಡ ಇದ್ದರು.
 ಘಟನೆಯ ಬಳಿಕ ಮೊರಾರ್ಜಿ ದೇಸಾಯಿ ಮೊದಲು ಗಾಯಾಳುಗಳುಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಎನ್ನಲಾಗಿದ್ದು, ಭದ್ರತಾ ಕಾರಣಗಳಿಗಾಗಿ ಅವರನ್ನು ಹತ್ತಿರದ ಮನೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನವು ತನ್ನ ಮೊದಲ ಪ್ರಯತ್ನದಲ್ಲಿಯೇ ಲ್ಯಾಂಡಿಂಗ್ ಸ್ಟ್ರಿಪ್ ತಪ್ಪಿಸಿಕೊಂಡಿದೆ. ಮತ್ತೆ ಇಳಿಯಲು ಪ್ರಯತ್ನಿಸುವಾಗ, ಎತ್ತರದ ಮರಕ್ಕೆ ಡಿಕ್ಕಿ ಹೊಡೆದು ಮಾರಕ ಅಪಘಾತಕ್ಕೆ ಕಾರಣವಾಯಿತು(ಏಜೆನ್ಸೀಸ್​).