ವಾಟ್ಸಾಪ್‌ನಿಂದ ಹೊಸ ಲಾಕ್‌ಡೌನ್ ಮೋಡ್ ಜಾರಿ..! ಸೈಬರ್ ವಂಚಕರಿಗೆ ಶಾಕ್ ನೀಡಲು ಬಂದಿದೆ ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್ 
ದೇಶ

ವಾಟ್ಸಾಪ್‌ನಿಂದ ಹೊಸ ಲಾಕ್‌ಡೌನ್ ಮೋಡ್ ಜಾರಿ..! ಸೈಬರ್ ವಂಚಕರಿಗೆ ಶಾಕ್ ನೀಡಲು ಬಂದಿದೆ ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್ | WhatsApp Safety

ನವದೆಹಲಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ದಾಳಿಗಳು, ಸ್ಪೈವೇರ್ ಭೀತಿ ಮತ್ತು ವಂಚನೆಯ ಕರೆಗಳನ್ನು ತಡೆಯಲು ಮೆಟಾ ಒಡೆತನದ ವಾಟ್ಸಾಪ್(WhatsApp Safety) ಹೊಸದೊಂದು ಕವಚವನ್ನು ಬಿಡುಗಡೆ ಮಾಡಿದೆ. ಇದನ್ನು ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್ ಎಂದು ಹೆಸರಿಸಲಾಗಿದ್ದು, ಇದು ಬಳಕೆದಾರರ ಅಕೌಂಟ್‌ಗೆ ಅತೀವ ಭದ್ರತೆ ನೀಡುವ ಲಾಕ್‌ಡೌನ್ ಮೋಡ್​ನಂತೆ ಕಾರ್ಯನಿರ್ವಹಿಸಲಿದೆ.

ಏನಿದು ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್..?

ಸಾಮಾನ್ಯವಾಗಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಗುರಿಯಾಗಿಸಿ ನಡೆಯುವ ಅತ್ಯಾಧುನಿಕ ಸೈಬರ್ ದಾಳಿಗಳನ್ನು ತಡೆಯಲು ಈ ಫೀಚರ್ ರೂಪಿಸಲಾಗಿದೆ. ಆದರೆ, ಇದು ಸಾಮಾನ್ಯ ಬಳಕೆದಾರರಿಗೂ ಲಭ್ಯವಿರುತ್ತದೆ. ಇದನ್ನು ಆನ್ ಮಾಡಿದಾಗ, ವಾಟ್ಸಾಪ್ ತನ್ನ ಅತ್ಯಂತ ಕಠಿಣವಾದ ಪ್ರೈವೆಸಿ ನಿಯಮಗಳನ್ನು ಆಟೋಮ್ಯಾಟಿಕ್ ಆಗಿ ಅನ್ವಯಿಸುತ್ತದೆ.

ಇದರಲ್ಲಿರುವ ಪ್ರಮುಖ ರಕ್ಷಣಾ ಕ್ರಮಗಳು

ಅಪರಿಚಿತರ ಮೀಡಿಯಾ ಫೈಲ್ ಬ್ಲಾಕ್

ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಅಪರಿಚಿತ ಸಂಖ್ಯೆಗಳಿಂದ ಬರುವ ಫೋಟೋ, ವಿಡಿಯೋ ಅಥವಾ ಯಾವುದೇ ಅಟ್ಯಾಚ್‌ಮೆಂಟ್‌ಗಳನ್ನು ವಾಟ್ಸಾಪ್ ತಾನಾಗಿಯೇ ಬ್ಲಾಕ್ ಮಾಡುತ್ತದೆ. ಇದರಿಂದ ಮಾಲ್‌ವೇರ್ ಹರಡುವ ಭೀತಿ ಇರುವುದಿಲ್ಲ.

ಅಪರಿಚಿತ ಕರೆಗಳ ಮ್ಯೂಟ್

ಹೊಸ ಸಂಖ್ಯೆಗಳಿಂದ ಬರುವ ಕರೆಗಳು ನಿಮಗೆ ಕಿರಿಕಿರಿ ಮಾಡುವುದಿಲ್ಲ, ಅವುಗಳು ಸೈಲೆನ್ಸ್ ಆಗಿರುತ್ತವೆ.

ಲಿಂಕ್ ಪ್ರಿವ್ಯೂ ಸ್ಥಗಿತ

ಚಾಟ್‌ನಲ್ಲಿ ಬರುವ ಲಿಂಕ್‌ಗಳ ಪ್ರಿವ್ಯೂ ಆಫ್ ಆಗುತ್ತದೆ. ಇದರಿಂದ ಅಪಾಯಕಾರಿ ವೆಬ್‌ಸೈಟ್‌ಗಳ ಟ್ರ್ಯಾಕಿಂಗ್ ತಪ್ಪಿಸಬಹುದು.

ಹೈ ವಾಲ್ಯೂಮ್ ಮೆಸೇಜ್ ಕಂಟ್ರೋಲ್

ಅಪರಿಚಿತ ಖಾತೆಗಳಿಂದ ಅತಿಯಾಗಿ ಬರುವ ಮೆಸೇಜ್‌ಗಳನ್ನು ವಾಟ್ಸಾಪ್ ತಡೆಗಟ್ಟುತ್ತದೆ.

ಹೆಚ್ಚುವರಿ ಗೌಪ್ಯತೆ

ನಿಮ್ಮ ಪ್ರೊಫೈಲ್ ಫೋಟೋ, ಅಬೌಟ್ ಮತ್ತು ಲಾಸ್ಟ್ ಸೀನ್ ಮಾಹಿತಿ ಕೇವಲ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಮಾತ್ರ ಕಾಣಿಸುತ್ತದೆ.

ಆಕ್ಟಿವೇಟ್ ಮಾಡುವುದು ಹೇಗೆ..?

ಬಳಕೆದಾರರು ಈ ಕೆಳಗಿನ ಹಂತಗಳ ಮೂಲಕ ಈ ಭದ್ರತೆಯನ್ನು ಪಡೆದುಕೊಳ್ಳಬಹುದು:
ವಾಟ್ಸಾಪ್ Settings ಗೆ ಹೋಗಿ.
Privacy ಮೇಲೆ ಕ್ಲಿಕ್ ಮಾಡಿ.
ಅಲ್ಲಿರುವ Advanced ಆಯ್ಕೆಯನ್ನು ಆರಿಸಿ.
Strict Account Settings ಬಟನ್ ಅನ್ನು ಟಾಗಲ್ ಮಾಡಿ,(ಏಜೆನ್ಸೀಸ್).