ರಾಜಕೀಯ ಏನೇ ಇರಲಿ, ದೇಶದ ಮಾನ ಕಳೆಯಬೇಡಿ : ಶರದ್​ ಪವಾರ್​ 
ದೇಶ

ರಾಜಕೀಯ ಏನೇ ಇರಲಿ, ದೇಶದ ಮಾನ ಕಳೆಯಬೇಡಿ! ಮೋದಿ ಪ್ರವಾಸಕ್ಕೆ ಮೆಚ್ಚುಗೆ; ವಿರೋಧ ಪಕ್ಷಗಳಿಗೆ ಶರದ್​ ಪವಾರ್​ ಖಡಕ್​ ಎಚ್ಚರಿಕೆ! Sharad Pawar on Modi Foreign Tour

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ವಿದೇಶ ಪ್ರವಾಸಕ್ಕೆ ವಿರೋಧ ಪಕ್ಷಗಳ ವಿರೋಧ
  • ರಾಜಕೀಯ ಏನೇ ಇರಲಿ, ದೇಶದ ಮಾನ ಕಳೆಯಬೇಡಿ : ಶರದ್​ ಪವಾರ್​
  • ಪ್ರಧಾನಿ ದೇಶದಲ್ಲಿರಬೇಕು: ಸಂಜಯ್​ ರಾವತ್​
ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸವನ್ನು ಕಾಂಗ್ರೆಸ್​ ಪಕ್ಷ ಟೀಕಿಸುತ್ತಿರುವುದಕ್ಕೆ ವಿರೋಧ ವ್ಯಕ್ತ ಪಡಿಸಿರುವ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (NCP) ದ ನಾಯಕ ಶರದ್​ ಪವಾರ್ (Sharad Pawar on Modi Foreign Tour)​, ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳು ರಾಷ್ಟ್ರೀಯ (ಭಾರತದ) ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಬಾರದೆಂದು ಹೇಳಿದ್ದಾರೆ.

ರಾಜಕೀಯಕ್ಕಿಂತ ರಾಷ್ಟ್ರೀಯತೆಗೆ ಆದ್ಯತೆ!

ಮಂಗಳವಾರ (ಮೇ.19) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪವಾರ್​, ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ದೇಶದ ಗೌರವನ್ನು ಹಾಳು ಮಾಡುವ ರೇಖೆಯನ್ನು ಯಾವುದೇ ಪಕ್ಷ ದಾಟಬಾರದೆಂದು ಹೇಳಿದರು.
ಪ್ರಧಾನಿ ಮೋದಿ ಭಾರತದ ಹೊರಗೆ ದೇಶದ ಪ್ರತಿಷ್ಠೆಯನ್ನು ರಕ್ಷಿಸಲು ಕೆಲಸ ಮಾಡುತ್ತಿದ್ದಾರೆ. ನಮಗೆ ವಿಭಿನ್ನ ರಾಜಕೀಯ ದೃಷ್ಟಿಕೋನಗಳಿರಬಹುದು, ಆದರೆ ರಾಷ್ಟ್ರದ ಗೌರವದ ವಿಷಯಕ್ಕೆ ಬಂದಾಗ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ತರಬಾರದು ಎಂದು ಪವಾರ್ ಹೇಳಿದ್ದಾರೆ.

ಪ್ರಧಾನಿಗಳ ಪ್ರವಾಸವನ್ನು ಪ್ರಶ್ನಿಸಿದ ಕಾಂಗ್ರೆಸ್​

ದೇಶ ಈಗ ಬಿಕ್ಕಟ್ಟಿನ ಸಮಯದಲ್ಲಿದೆ, ಜನ ಎಲ್ಲಿಗೆ ಸಹ ಪ್ರಯಾಣಿಸಬೇಡಿ ಎಂದು ಹೇಳಿ ಪ್ರಧಾನಿಗಳು ಐದು ದೇಶಗಳ ಪ್ರವಾಸಕ್ಕೆ ಹೊರಟಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ವಿರೋಧ ವ್ಯಕ್ತ ಪಡಿಸಿದ್ದರು.
ಮುಂದಿನ ದಿನಗಳಲ್ಲಿ ದೇಶ ಎದುರಿಸಲಿರುವ ಆರ್ಥಿಕ ಆಘಾತವನ್ನು ಅಂಬಾನಿ, ಅದಾನಿಗಳಲ್ಲ, ಬದಲಿಗೆ ಭಾರತದ ಸಾಮಾನ್ಯ ಪ್ರಜೆ ಅನುಭವಿಸಲಿದ್ದಾನೆ ಎಂದು ರಾಹುಲ್​ ಹೇಳಿದ್ದರು.

ಈ ಸಂದರ್ಭದಲ್ಲಿ ದೇಶ ಸುತ್ತುವುದು ಬೇಕೆ? ರಾವತ್​

ದೇಶ ಈಗ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕಿದೆ. ಪ್ರಧಾನಿಯಾದವರು ದೇಶದ ಜನರ ಜೊತೆ ನಿಲ್ಲಬೇಕು. ಆದರೆ ನಮ್ಮ ಮೋದಿ ಸಾಹೇಬರು, ವಿದೇಶ ಪ್ರವಾಸದಲ್ಲಿ ಮಗ್ನರಾಗಿದ್ದಾರೆ. ಅವರಿಗೆ ತಾವು ತೆರಳುವ ದೇಶದ ಅತ್ಯುನ್ನತ ಪ್ರಶಸ್ತಿ ಪಡೆಯುವ ಹಪಹಪಿಯೇ ಅಧಿಕವಾಗಿದೆ ಎಂದು ಶಿವಸೇನೆ (ಉದ್ಧವ್​ ಬಣ) ಸಂಸದ ಸಂಜಯ್​ ರಾವತ್​ ಟೀಕಿಸಿದ್ದಾರೆ, (ಏಜನ್ಸೀಸ್​).