ಸಿಎಂ ಮಮತಾ ಬ್ಯಾನರ್ಜಿ ಮತ್ತು ಅಮಿತ್ ಶಾ  
ದೇಶ

ಗೃಹ ಸಚಿವರಾಗಿ ಯಾವ ಭಾಷೆ ಬಳಸ್ತೀರಿ; ಅಮಿತ್ ಶಾ ವಿರುದ್ಧ ಕೇಸ್ ದಾಖಲಿಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಗುಡುಗು | CM Mamata Banerjee

ಕೋಲ್ಕತ್ತಾ: ಮೇ 04ರ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದ ಹಿಂಸಾಚಾರವನ್ನು ನಡೆಸಿರುವ ಟಿಎಂಸಿ ಕಾರ್ಯಕರ್ತರನ್ನು ಒಬ್ಬೊರನ್ನು ಹಿಡಿದು ತೆಲೆ ಕಳೆಗೆ ಮಾಡಿ ನೇತಾಕಿ ಶಿಕ್ಷಿಸಲಾಗುವುದು ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಮಮತಾ ಬ್ಯಾನರ್ಜಿ(CM Mamata Banerjee), ಗೃಹ ಸಚಿವರಾಗಿ ಯಾವ ಭಾಷೆ ಬಳಸ್ತೀರಿ, ನಿಮ್ಮ ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ.
ಹೂಗ್ಲಿಯಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಅಮಿತ್ ಶಾ ಅವರ ಹಿಂಸಾತ್ಮಕ ಹೇಳಿಕೆಗಳಿಗಾಗಿ ನಾವು ಕಾನೂನು ಮೊಕದ್ದಮೆ ಹೂಡಲಿದ್ದೇವೆ. ಗೃಹ ಸಚಿವರಾಗಿ ಅವರು ಅಂತಹ ಹೇಳಿಕೆಗಳನ್ನು ನೀಡುವಂತಿಲ್ಲ. ಒಬ್ಬ ಗೃಹ ಸಚಿವರು ಯಾವ ರೀತಿಯ ಭಾಷೆಯನ್ನು ಬಳಸುತ್ತಿದ್ದಾರೆ? ಚುನಾವಣೆಯ ನಂತರ ಜನರನ್ನು ತಲೆಕೆಳಗಾಗಿ ನೇತುಹಾಕುತ್ತೀರಿ ಎಂದು ಹೇಳುವುದು ಸ್ವೀಕಾರಾರ್ಹವಲ್ಲ. ಈ ಮನಸ್ಥಿತಿಯಿಂದ ನೀವು ಎಂದಿಗೂ ಬಂಗಾಳವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಹೇಳಿದ್ದೇನು?

ಎರಡನೇ ಹಂತದ ಚುನಾವಣೆಯ ಪ್ರಚಾರದ ಭಾಗವಾಗಿ ಬಿರ್ಭುಮ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನು ಮಾತನಾಡಿರುವ ಅಮಿತ್ ಶಾ, ಟಿಎಂಸಿಯ ಗೂಂಡಾಗಳು ಇನ್ನು ಮುಂದೆ ತಮ್ಮ ಬಾಂಬ್ ಸ್ಫೋಟಗಳಿಂದ ಬಂಗಾಳದ ಜನರನ್ನು ಭಯಪಡಿಸಲು ಸಾಧ್ಯವಾಗುವುದಿಲ್ಲ. ಬಂಗಾಳದ ಜನರು ಬಾಂಬ್‌ಗಳಿಗೆ ಮತಪತ್ರಗಳಿಂದ ಉತ್ತರ ನೀಡುತ್ತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದ್ದರು.
ಮುಂದುವರೆದು, ಜನರು ಮಮತಾ ಸರ್ಕಾರಕ್ಕೆ ವಿದಾಯ ಹೇಳಲಿ. ನಂತರ ಬಿಜೆಪಿ ಆಡಳಿತ ಕಟ್-ಮನಿ ಪ್ರವರ್ತಕರನ್ನು ತಲೆಕೆಳಗಾಗಿ ನೇತುಹಾಕುವ ಕೆಲಸವನ್ನು ಕೈಗೆತ್ತಿಕೊಳ್ಳುತ್ತದೆ ಎಂದು ಅಬ್ಬರಿಸಿದ್ದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ(ಏ. 23) ಮುಗಿದಿದ್ದು, ಶೇ. 91.78 ರಷ್ಟು ಮತದಾನವಾಗಿದೆ. ಎರಡನೇ ಹಂತದ ಮತದಾನ ಏಪ್ರಿಲ್ 29 ರಂದು ನಡೆಯಲಿದ್ದು, ಮೇ 4 ರಂದು ಪಂಚ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).