ಟಿಸಿಎಸ್ ತೆರಿಗೆ ಹಣ ಪಡೆಯುವ ಪ್ರಕ್ರಿಯೆ
- ಹೊಸ ಕಾರು ಖರೀದಿಗೆ ಪಾವತಿಸಿದ ತೆರಿಗೆಯನ್ನು ಈಗ ಹಿಂಪಡೆಯುವುದು ಇನ್ನೂ ಸುಲಭ
- 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಕಾರನ್ನು ಖರೀದಿಸಿದರೆ ಈ ಶೇ.1ರಷ್ಟು ಟಿಸಿಎಸ್ ತೆರಿಗೆಯನ್ನು ಹಿಂಪಡೆಯಿರಿ
- ನೀವೇ ಕಟ್ಟಿದ ಹಣವನ್ನು ಸರ್ಕಾರಕ್ಕೆ ಕೊಡದೆ ನಿಮ್ಮ ಖಾತೆಗೆ ವಾಪಾಸ್ ಪಡೆಯಲು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ
TCS Tax: ನೀವು ಪ್ರಸಕ್ತ ವರ್ಷದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಕಾರನ್ನು ಖರೀದಿ ಮಾಡಿದ್ದರೆ ಅಥವಾ ಕೊಳ್ಳುವ ಪ್ಲ್ಯಾನ್ ಇದ್ದರೆ, ಖಂಡಿತ ಈ ಶೇ.1ರಷ್ಟು ಟಿಸಿಎಸ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ಶೋರೂಂನಲ್ಲಿ ಲಕ್ಸುರಿ ಕಾರು ಖರೀದಿಸಿದ ಬಳಿಕ ಬಿಲ್‌ನಲ್ಲಿ ಇನ್ನೂ ಒಂದು ಪರ್ಸೆಂಟ್ ಟಿಸಿಎಸ್ ಇರುವುದನ್ನು ಎಂದಾದರೂ ಗಮನಿಸಿದ್ದೀರಾ?
ಹೊಸ ಕಾರನ್ನು ಖರೀದಿಸುವ ಸಮಯದಲ್ಲಿ ನೀವು ಪಾವತಿಸಿದ ಶೇ.1ರಷ್ಟು ಟಿಸಿಎಸ್ ಅನ್ನು ನಿಮ್ಮ ಹೆಸರಿನಲ್ಲಿ ಸರ್ಕಾರದಲ್ಲಿ ತೆರಿಗೆ ಕ್ರೆಡಿಟ್ ಆಗಿ ರಿಜಿಸ್ಟರ್ ಆಗಿರುತ್ತದೆ. ಅದೇನೆಂದರೆ, ಇದು ಹೆಚ್ಚುವರಿ ತೆರಿಗೆಯಲ್ಲ ಎಂಬುದು ನೆನಪಿರಲಿ. ಐಟಿಆರ್ ಸಲ್ಲಿಸುವಾಗ ನೀವು ಆದಾಯ ತೆರಿಗೆಯಲ್ಲಿ ಇದನ್ನು ಸೇರಿಸಿ ಹಣ ಹಿಂಪಡೆಯುಬಹುದು. ಪಾವತಿಸಿದ ಟಿಸಿಎಸ್ ನಿಮ್ಮ ತೆರಿಗೆ ಬಾಧ್ಯತೆಗಿಂತ ಹೆಚ್ಚಿದ್ದರೆ, ನೀವು ಉಳಿದ ಮೊತ್ತವನ್ನು ಮರುಪಾವತಿಯಾಗಿ ಪಡೆಯಬಹುದಾಗಿದೆ. ಆದರೆ, ಅನೇಕರಿಗೆ ಇದು ತಿಳಿದಿಲ್ಲ ಮತ್ತು ಸಾವಿರಾರು ರೂಪಾಯಿ ತೆರಿಗೆ ಹಣವನ್ನು ಕ್ಲೈಮ್ ಮಾಡದೆ ಸುಖಾಸುಮ್ಮನೆ ಸರ್ಕಾರದ ಪಾಲಾಗಿಸುತ್ತಾರೆ.
ಏನಿದು 1% TCS?
ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಆಯಾ ಕಾರು ಸಂಸ್ಥೆಯ ಡೀಲರ್ಗಳು ಎಕ್ಸ್ ಶೋ ರೂಂ ಬೆಲೆ 10 ಲಕ್ಷ ರೂ. ಮೇಲ್ಪಟ್ಟಿರುವ ಹೊಸ ಕಾರನ್ನು ಖರೀದಿಸುವ ಗ್ರಾಹಕರಿಂದ ಶೇ.1ರಷ್ಟು ಟಿಸಿಎಸ್ ಅನ್ನು ತೆರಿಗೆಯಾಗಿ ಪಡೆಯುತ್ತಾರೆ. ಅದೇ ಕಾರಿನ ಎಕ್ಸ್ ಶೋ ರೂಂ ಬೆಲೆ 20 ಲಕ್ಷ ರೂ. ಆಗಿದ್ದರೆ, ಅದಕ್ಕೂ ಶೇ.1ರಷ್ಟು ಟಿಸಿಎಸ್ ಕಟ್ ಆಗುತ್ತದೆ. ಈ ಮೊತ್ತವನ್ನು ವಿತರಕರು ಆದಾಯ ತೆರಿಗೆ ಇಲಾಖೆಗೆ ಕಳುಹಿಸಿ, ಖರೀದಿದಾರರ ಪ್ಯಾನ್ ಕಾರ್ಡ್‌ಗೆ ಜೋಡಣೆ ಮಾಡಿರುತ್ತಾರೆ.
ಟಿಸಿಎಸ್ ಏಕೆ?
ಹೆಚ್ಚಿನ ಮೌಲ್ಯದ ಖರೀದಿಗಳನ್ನು ಟ್ರ್ಯಾಕ್ ಮಾಡುವುದು ತೆರಿಗೆದಾರರ ವಿವರಗಳನ್ನು ಸ್ಪಾಟ್ನಲ್ಲಿ ರಿಜಿಸ್ಟರ್ ಮಾಡಲಾಗುತ್ತದೆ. ಇದು ತೆರಿಗೆ ವಂಚನೆಗೆ ಬ್ರೇಕ್ ಹಾಕುತ್ತದೆ. ಟಿಸಿಎಸ್ ಶಾಶ್ವತ ತೆರಿಗೆ ಅಲ್ಲ ಎಂಬುದು ನಿಮಗೆ ನೆನಪಿರಲಿ. ನೀವು ಕಟ್ಟಿದ ಈ ತೆರಿಗೆಯನ್ನು ಹಣದ ರೂಪದಲ್ಲಿ ಐಟಿಆರ್ ಮೂಲಕ ವಾಪಾಸ್ ಪಡೆಯಲು ಅವಕಾಶವಿದೆ. ಆದ್ರೆ, ಬಹುತೇಕ ಗ್ರಾಹಕರು ತಾವೇ ಕಟ್ಟಿದ ಹಣವನ್ನು ಹಿಂಪಡೆಯಲು ಮರೆಯುತ್ತಾರೆ.
ಟಿಸಿಎಸ್ ಕ್ಲೈಮ್ ಹೇಗೆ?
ಒಮ್ಮೆ ಟಿಸಿಎಸ್ ಅನ್ನು ಕ್ರೆಡಿಟ್ ಮಾಡಿದ ನಂತರ, ಸಂಪೂರ್ಣ ಪ್ರಕ್ರಿಯೆಯು ವಾರ್ಷಿಕ ಮಾಹಿತಿ ಹೇಳಿಕೆಯಲ್ಲಿ (AIS) ಅಂದರೆ ಫಾರ್ಮ್ 26ASನಲ್ಲಿ ಗೋಚರಿಸುತ್ತದೆ. ಐಟಿಆರ್ ಸಲ್ಲಿಸುವಾಗ ಈ ಮೊತ್ತವನ್ನು 'ತೆರಿಗೆಗಳು ಪಾವತಿಸಲಾಗಿದೆ' ವಿಭಾಗದಲ್ಲಿ ಕ್ಲೈಮ್ ಮಾಡಬೇಕು. ಆದಾಯ ತೆರಿಗೆ ಪೋರ್ಟಲ್ ಆಟೋಮೆಟಿಕ್ ಆಗಿ ನಿಮ್ಮ ಅಂತಿಮ ತೆರಿಗೆಯನ್ನು ಸರಿಹೊಂದಿಸುತ್ತದೆ.
ಅಗತ್ಯ ದಾಖಲೆಗಳು ಏನು?
ಟಿಸಿಎಸ್ ಕ್ಲೈಮ್ ಮಾಡಲು, ಈ ಕೆಳಗಿನ ದಾಖಲೆಗಳನ್ನು ಮುಂಚಿತವಾಗಿಯೇ ರೆಡಿ ಇಟ್ಟುಕೊಳ್ಳಿ:
- ಕಾರು ಖರೀದಿ ಸರಕುಪಟ್ಟಿ (ಟಿಸಿಎಸ್ ವಿವರ)
- ಫಾರ್ಮ್ 27ಡಿ (ವಿತರಕರು ಕೊಟ್ಟ ಟಿಸಿಎಸ್ ಸರ್ಟಿಫಿಕೆಟ್)
- ಕಾರು ಖರೀದಿಯ ಸಮಯದಲ್ಲಿ ಬಳಸಲಾದ ಪ್ಯಾನ್ ಕಾರ್ಡ್ಟಿ
- ಸಿಎಸ್ ಕ್ರೆಡಿಟ್ ಕಾಣಿಸಿಕೊಳ್ಳುವ ಫಾರ್ಮ್ 26AS
- ಐಟಿಆರ್ ಸಲ್ಲಿಸುವ ಮೊದಲು, ಟಿಸಿಎಸ್ ಕ್ರೆಡಿಟ್ ಅನ್ನು ಫಾರ್ಮ್ 26ASನಲ್ಲಿ ಸರಿಯಾಗಿ ಸೇರಿಸಲಾಗಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ತುಂಬಾ ಮುಖ್ಯ.
ತೆರಿಗೆ ಹೊಂದಾಣಿಕೆ
ಒಟ್ಟು ಆದಾಯ ತೆರಿಗೆ: 20,000 ರೂ.
20,000 - 12,000 = 8,000 ರೂ.
ಅಲ್ಲಿಗೆ ನಿಮ್ಮೆ ಖಾತೆಗೆ ಜಮೆ ಆಗುವ ಮೊತ್ತ 8 ಸಾವಿರ ರೂ.
ಭಾಗಶಃ ಮರುಪಾವತಿ
ಅಂತಿಮ ತೆರಿಗೆ ಬಾಕಿ: 8,000 ರೂ.
20,000- 8,000 =12,000 ರೀಫಂಡ್
ಪೂರ್ಣ ಮರುಪಾವತಿ:
25,000 –0 = 25,000 ಕಂಪ್ಲೀಟ್ ರೀಫಂಡ್
ಲೆಕ್ಕಾಚಾರ ಹೇಗೆ?
- TCS = ಕಾರಿನ ಎಕ್ಸ್ ಶೋ ರೂಂ ಬೆಲೆ × ಶೇ.1ರಷ್ಟು
- ಮರುಪಾವತಿ = ಟಿಸಿಎಸ್ - ಅಂತಿಮ ಆದಾಯ ತೆರಿಗೆ (ಟಿಸಿಎಸ್ ಹೆಚ್ಚಿದ್ದರೆ ಪಾವತಿಸಬೇಕಾದ ಹೆಚ್ಚುವರಿ ತೆರಿಗೆ = ಅಂತಿಮ ಆದಾಯ ತೆರಿಗೆ - ಟಿಸಿಎಸ್ (ತೆರಿಗೆ ಬಾಕಿ ಹೆಚ್ಚಿದ್ದರೆ)
ರೀಫಂಡ್ ಸಿಗೋದು ಯಾವಾಗ?
ಮರುಪಾವತಿಯು ನಿಮ್ಮ ಒಟ್ಟು ಆದಾಯ ತೆರಿಗೆಯ ಮೇಲೆ ಆಧಾರಿತ. ಟಿಸಿಎಸ್ ತೆರಿಗೆಯು ಅಧಿಕವಾಗಿದ್ದರೆ, ಉಳಿದ ಮೊತ್ತವನ್ನು ರೀಫಂಡ್ ಆಗುತ್ತದೆ. ಟಿಸಿಎಸ್ ಟ್ಯಾಕ್ಸ್ ಕಡಿಮೆಯಿದ್ದರೆ, ಟಿಸಿಎಸ್ ಅನ್ನು ಸರಿಹೊಂದಿಸಬೇಕು ಮತ್ತು ಉಳಿದ ತೆರಿಗೆಯನ್ನು ಮಾತ್ರ ಕಟ್ಟಬೇಕು. ಯಾವುದೇ ತೆರಿಗೆ ಇಲ್ಲದಿದ್ದರೆ, ನೀವು ಪೇಮೆಂಟ್ ಮಾಡಿದ ಟಿಸಿಎಸ್ನ ಶೇ.100ರಷ್ಟು ಮರುಪಾವತಿಯನ್ನು ಪಡೆಯಬಹುದು.
ಅನೇಕ ಜನರು ಮಾಡುವ ಮಿಸ್ಟೇಕ್ಗಳಿವು
ತಜ್ಞರ ಪ್ರಕಾರ, ಅನೇಕರು ಈ ಕ್ರೆಡಿಟ್ ಅನ್ನು ಕಳೆದುಕೊಳ್ಳಲು ಮುಖ್ಯ ಕಾರಣಗಳು ಹೀಗಿವೆ.
ಡೀಲರ್‌ನಿಂದ ಫಾರ್ಮ್ 27D ಪಡೆಯಲು ವಿಫಲ
- ಟಿಸಿಎಸ್ ಕ್ರೆಡಿಟ್ ಅನ್ನು ಫಾರ್ಮ್ 26AS ನಲ್ಲಿ ರಿಜಿಸ್ಟರ್ ಮಾಡಿಸಿರುವ ಬಗ್ಗೆ ಪರಿಶೀಲಿಸಲು ವಿಫಲ
- ಐಟಿಆರ್ ಸಲ್ಲಿಸುವಾಗ 'ತೆರಿಗೆಗಳು ಪಾವತಿಸಲಾಗಿದೆ' ವಿಭಾಗದಲ್ಲಿ ಟಿಸಿಎಸ್ ವಿವರಗಳನ್ನು ಎಂಟ್ರಿ ಮಾಡಲು ವಿಫಲ
- ಟಿಸಿಎಸ್ ನಿಮ್ಮ ಪ್ಯಾನ್ ಕಾರ್ಡ್ ಜತೆಗೆ ಆದಾಯ ತೆರಿಗೆ ಇಲಾಖೆಯ ದಾಖಲೆಗಳಲ್ಲಿದೆ. ಆದ್ದರಿಂದ, ನೀವು ಐಟಿಆರ್ ಸಲ್ಲಿಸುವ ಮೊದಲು ಫಾರ್ಮ್ 26AS ಅನ್ನು ಪರಿಶೀಲಿಸಿದರೆ, ಸುಲಭವಾಗಿ ತೆರಿಗೆ ಕ್ರೆಡಿಟ್ ಪಡೆಯಬಹುದು ಅಥವಾ ನೀವು ಅರ್ಹತೆ ಪಡೆದಿರುವ ರೀಫಂಡ್ ಮೊತ್ತವನ್ನು ಸ್ವೀಕರಿಸಬಹುದು,(ಏಜೆನ್ಸೀಸ್).