7 ನಿಮಿಷಗಳ ಕ್ಯಾನ್ಸರ್ ಇಂಜೆಕ್ಷನ್
- 7 ನಿಮಿಷಗಳ ಕ್ಯಾನ್ಸರ್ ಇಂಜೆಕ್ಷನ್
- ರೋಚೆ ಫಾರ್ಮಾ ಇಂಡಿಯಾ ಸಂಸ್ಥೆಯಿಂದ 'ಟೆಸೆಂಟ್ರಿಕ್' ಇಮ್ಯುನೊಥೆರಪಿ ಇಂಜೆಕ್ಷನ್ ಮಾರುಕಟ್ಟೆಗೆ
- ಇದರ ಒಂದು ಡೋಸ್ ಬೆಲೆ ಲಕ್ಷಗಟ್ಟಲೇ
- ಶ್ವಾಸಕೋಶದ ಕ್ಯಾನ್ಸರ್‌ಗೆ ಹೆಚ್ಚು ಉಪಯುಕ್ತ
Cancer Injection: ಕ್ಯಾನ್ಸರ್ ಎಂಬ ಸದ್ದಿಲ್ಲದ, ಮಾರಣಾಂತಿಕ ಖಾಯಿಲೆಯನ್ನು ಗುಣಪಡಿಸುವ 7 ನಿಮಿಷಗಳ ಇಂಜೆಕ್ಷನ್ವೊಂದು ಭಾರತಕ್ಕೆ ಲಗ್ಗೆಯಿಟ್ಟಿದ್ದು, ಇದರ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಕೇಳಿದರೆ ಖಂಡಿತ ನಿಮ್ಮ ಹುಬ್ಬೇರುತ್ತದೆ.
ಕ್ಯಾನ್ಸರ್ ಅಂದಾಕ್ಷಣ ರೋಗಿಗಳಿಗೆ ಮೊದಲಿಗೆ ನೆನಪಾಗುವುದೇ ಕೀಮೋಥೆರಪಿ ಎಂಬ ನೋವಿನ ಚಿಕಿತ್ಸೆ. ಬ್ಲಡ್, ಬೋನ್, ಸ್ಕಿನ್, ಶ್ವಾಸಕೋಶ ಹೀಗೆ ನಾನಾ ರೀತಿಯ ಕ್ಯಾನ್ಸರ್ ರೋಗಗಳಿಂದ ಬಳಲುವ ಅದೆಷ್ಟೋ ಸಂಖ್ಯೆಯ ಭಾರತೀಯರಿಗೆ ಈ ಒಂದು ಇಂಜೆಕ್ಷನ್ ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಹೊಸ ಟೆಕ್ನಾಲಜಿ ಈಗ ಲಭ್ಯವಾಗಿದೆ. ಪ್ರಮುಖ ಔಷಧ ಸಂಸ್ಥೆಯಾದ ರೋಚೆ ಫಾರ್ಮಾ ಇಂಡಿಯಾ, "ಟೆಸೆಂಟ್ರಿಕ್" ಎಂಬ ಹೊಸ ಇಮ್ಯುನೊಥೆರಪಿ ಇಂಜೆಕ್ಷನ್ ಅನ್ನು ಜನರ ಮುಂದಿಟ್ಟಿದೆ.
ಕೇವಲ 7 ನಿಮಿಷಗಳಲ್ಲಿ ಇದನ್ನು ಪೂರ್ಣಗೊಳಿಸಬಹುದು ಮತ್ತು ಕೂಡಲೇ ಕೆಲಸ ಮಾಡಲು ಪ್ರಾರಂಭಿಸುವ ಒಂದು ವಿಶೇಷ ಇಂಜೆಕ್ಷನ್ ಆಗಿದೆ. ಈ ಇಂಜೆಕ್ಷನ್ ಚಿಕಿತ್ಸೆಯ ಸಮಯವನ್ನು ಕಡಿತಗೊಳಿಸಲಿದ್ದು, ಶ್ವಾಸಕೋಶದ ಕ್ಯಾನ್ಸರ್ (NSCLC) ರೋಗಿಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಇದರ ವಿಶೇಷತೆ ಏನೆಂದರೆ, ಚಿಕಿತ್ಸೆಯ ಸಮಯವನ್ನು ಇಳಿಸುವುದರ ಜೊತೆಗೆ ರೋಗಿಗಳು ಆಸ್ಪತ್ರೆಗಳಲ್ಲಿ ಹೆಚ್ಚು ಸಮಯ ಉಳಿಯುವ ಅನಿವಾರ್ಯತೆಯನ್ನು ಕಡಿಮೆ ಮಾಡಲಿದೆ.
ಕೆಲಸ ಹೇಗೆ?
ಈ ಇಂಜೆಕ್ಷನ್ 'ಅಟೆಜೋಲಿಜುಮಾಬ್' ಎಂಬ ಇಮ್ಯುನೊಥೆರಪಿ ಔಷಧವನ್ನು ಬಳಸುತ್ತದೆ. ಇದು ನಿಯಮಿತ ಕಿಮೊಥೆರಪಿಯಂತೆ ಕ್ಯಾನ್ಸರ್ ಕೋಶಗಳ ಮೇಲೆ ಕೆಲಸ ಮಾಡುವುದಿಲ್ಲ. ಬದಲಿಗೆ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ನಾಶ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಕೋಶಗಳು ಸಾಮಾನ್ಯವಾಗಿ ಪಿಡಿ-11 (PD-L1) ಎಂಬ ಪ್ರೋಟೀನ್ ಮೂಲಕ ರೋಗನಿರೋಧಕ ವ್ಯವಸ್ಥೆಯಿಂದ ಅಡಗಿಕೊಳ್ಳುತ್ತವೆ. ಟೆಸೆಂಟ್ರಿಕ್ ಆ ಪ್ರೋಟೀನ್ ಅನ್ನು ನಿರ್ಬಂಧಿಸುತ್ತದೆ.
ಇದು ಮೆಡಿಸಿನ್ ಕ್ಯಾನ್ಸರ್ ಕೋಶಗಳನ್ನು ಸುಲಭವಾಗಿ ಗುರುತಿಸಲು ಮತ್ತು ದಾಳಿ ಮಾಡಲು ಅನುಕೂಲ ಮಾಡಿಕೊಡುತ್ತದೆ. ಕೀಮೋಥೆರಪಿ ಔಷಧಿಗಳು ಆರೋಗ್ಯಕರ ಕೋಶಗಳ ಜೊತೆಗೆ ಕ್ಯಾನ್ಸರ್ ಕೋಶಗಳ ಮೇಲೂ ದಾಳಿ ಮಾಡುತ್ತವೆ. ಆದರೆ, ಈ ಇಂಜೆಕ್ಷನ್ ಕೇವಲ ಕ್ಯಾನ್ಸರ್ ಕೋಶಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತದೆ.
ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
7 ನಿಮಿಷಗಳ ಇಂಜೆಕ್ಷನ್ ಕೆಲಸವೇನೋ ಅದ್ಭುತ. ಆದ್ರೆ, ಇದರ ಬೆಲೆ ಕೇಳಿದ್ರೆ ತಲೆ ತೀರುಗೋದು ಖಂಡಿತ. ಕಾರಣ, ಈ ಔಷಧಿ ಸಾಮಾನ್ಯ ಜನರ ಕೈಗೆಟುಕುವಂತಿಲ್ಲ. ಇದರ ಒಂದು ಡೋಸ್‌ಗೆ 3.7 ಲಕ್ಷ ರೂ. ಖರ್ಚು ತಗುಲಲಿದೆ. ಅನೇಕ ರೋಗಿಗಳಿಗೆ 6 ಡೋಸ್‌ಗಳ ಅವಶ್ಯಕತೆ ಇರಬಹುದು. ಶ್ರೀಮಂತ ರೋಗಿಗಳಿಗೆ ಇದು ದೊಡ್ಡದಲ್ಲ ಅನಿಸಿದರೂ, ಮಿಡಲ್ ಕ್ಲಾಸ್ ಮತ್ತು ಬಡ ವರ್ಗದ ಜನರಿಗಂತು ಅಕ್ಷರಶಃ ಕಷ್ಟಸಾಧ್ಯವೇ.
ಯಾರಿಗೆಲ್ಲ ಪ್ರಯೋಜನ?
ವೈದ್ಯರ ಪ್ರಕಾರ, ಈ ಔಷಧಿಯನ್ನು ಎಲ್ಲಾ ರೋಗಿಗಳಿಗೆ ಕೊಡುವಂತದ್ದಲ್ಲ. ರೋಗಿಯ ಗೆಡ್ಡೆಯನ್ನು ಮೊದಲು PD-L1 ಪ್ರೋಟೀನ್ ಮಟ್ಟಕ್ಕಾಗಿ ಪರೀಕ್ಷೆ ಮಾಡಲಾಗುತ್ತದೆ. ಈ ಪ್ರೋಟೀನ್‌ನ ಹೆಚ್ಚಿನ ಮಟ್ಟವನ್ನು ಹೊಂದಿರುವ ರೋಗಿಗಳು ಈ ಚಿಕಿತ್ಸೆಗೆ ಒಳಪಡುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ರೋಗಿಯ ಆರೋಗ್ಯ ಸ್ಥಿತಿ ಮತ್ತು ಕ್ಯಾನ್ಸರ್‌ನ ಹಂತದ ಆಧಾರದ ಮೇಲೆ ವೈದ್ಯರು ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ,(ಏಜೆನ್ಸೀಸ್).