- ಸ್ವೀಡನ್ ಪ್ರಧಾನಮಂತ್ರಿಗೆ ಮಣಿಪುರದ ಪ್ರಸಿದ್ಧ ಲೋಕ್ತಕ್ ಲೋಟಸ್ ಟೀ ಕೊಟ್ಟ ಮೋದಿ.
- ಸಿಹಿ ನೀರಿನ ಸರೋವರದಲ್ಲಿ ಬೆಳೆಯಲಾಗುವ ಕಮಲದ ಹೂ, ಎಲೆಯಿಂದ ತಯಾರಿಸುವ ಚಹಾ ಇದು.
- ಮಹಿಳೆಯತ ಗುಂಪಿನಿಂದ ಅಭಿವೃದ್ಧಿಗೊಂಡಿರುವ ಲೋಕ್ತಕ್ ಲೋಟಸ್ ಚಹಾ ಮಾರಾಟ.
ಚಹಾದಲ್ಲಿ ನಾನಾ ವಿಧಗಳಿವೆ ನಮಗೆ ತಿಳಿದಿರೋದು ಕಡಿಮೆನೇ, ವೀಳ್ಯದೆಲೆ, ಊಲಾಂಗ್ ಚಹ, ಗಿಡಮೂಲಿಕೆ, ಲೆಮನ್, ಪುದೀನಾ ಹೀಗೆ ನಾನಾ ವಿಧದಲ್ಲಿ ಚಹಾ ತಯಾರಿಸಲಾಗುತ್ತದೆ. ಆದರೆ, ಇತ್ತೀಚಗೆ ಪ್ರಧಾನಿ ಮೋದಿಯವರು ಸ್ವೀಡನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರಿಗೆ ಮಣಿಪುರದ ಪ್ರಸಿದ್ಧ ಲೋಕ್ತಾಕ್ ಲೋಟಸ್ ಟೀ(ಕಮಲದ ಚಹಾ)ವನ್ನು ಉಡುಗೊರೆಯಾಗಿ ಕೊಟ್ಟರು.
ಗಮನಹರಿಸಬೇಕಾದ ವಿಚಾರ ಎಂದರೆ, ಈ ಕಮಲದ ಚಹಾ ಅಂದರೆ ಲೋಕ್ತಾಕ್ ಟೀನಲ್ಲಿರುವ ವಿಶೇಷತೆ ಏನು? ಅದು ವಿದೇಶದಲ್ಲಿರುವ ಪ್ರಧಾನಿಗೆ ಉಡುಗೊರೆಯಾಗಿ ನೀಡುವಷ್ಟು ಪ್ರಸಿದ್ಧತೆ ಇದೆಯೇ? ಇದರ ಹಿಂದಿರುವ ಪ್ರಸಿದ್ಧತೆ, ರೋಚಕ ಕತೆ ಏನು ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.
ಸಿಹಿ ನೀರಿನ ಸರೋವರ ಲೋಕ್ತಕ್
ಮಣಿಪುರದಲ್ಲಿರುವ ಲೋಕ್ತಕ್ ಸರೋವರ ಸಿಹಿ ನೀರಿನ ಸರೋವರ. ಇದು ಇಂಫಾಲ್ನಿಂದ 50ಕಿ.ಮೀ ದೂರದಲ್ಲಿರದೆ. ಇಲ್ಲಿ ನೈಸರ್ಗಿಕವಾಗಿ ತೇಲುವ ಸಸ್ಯಗಳು ಮತ್ತು ಮಣ್ಣಿ ಸಣ್ಣ ದ್ವೀಪಗಳಿಗೆ ಪ್ರಸಿದ್ಧಿ. ಇಲ್ಲಿ ಬೆಳೆಯುವ ಕಮಲದ ಹೂಗಳ ಮಧ್ಯೆ ಫೋಟೋ ಶೂಟ್ ಮಾಡಿಸಿಕೊಂಡು ಆನಂದಿಸಿರುವುದನ್ನು ಕಂಡಿದ್ದೇವೆ. ಆದರೆ, ಇದು ಆದಾಯದ ಆಧಾರ ಸ್ತಂಭ. ಹೌದು ಇಲ್ಲಿರುವ ಕಮಲದ ಹೂವನ್ನು ಚಹಾದೊಂದಿಗೆ ಬೆರಸಿ ಕುಡಿಯುವುದು ಆರೋಗ್ಯಕರ ಪೇಯ ಮತ್ತು ಇದು ಮಾರುಕಟ್ಟೆಯಲ್ಲಿಯೂ ಲಭ್ಯವಿದೆ.
ಪ್ರಧಾನಿ ಪ್ರವಾಸ ಹೀಗಿತ್ತು
ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ತಮ್ಮ ಐದು ರಾಷ್ಟ್ರಗಳ ಭೇಟಿಯನ್ನು ಮುಗಿಸಿದ್ದಾರೆ. ಈ ವೇಳೆ ವಿಶ್ವನಾಯಕರಿಗೆ ಭಾರತದ ಆಯಾ ರಾಜ್ಯದಲ್ಲಿರುವ ಪ್ರಸಿದ್ಧ ಕರಕುಶಲ, ಸಾಹಿತ್ಯ, ಆಹಾರವನ್ನು ಗಿಫ್ಟ್ ಆಗಿ ನೀಡಿದ್ದರು. ಅದೆಲ್ಲದರ ಮಧ್ಯೆ ಗಮನ ಸೆಳೆದಿದ್ದು ಲೋಕ್ತಾಕ್ ಚಹಾ ಪುಡಿಯನ್ನು ಸ್ವೀಡನ್ ಪ್ರಧಾನಿಗೆ ನೀಡಿದ್ದು. ಇದು ಕೇಳಿಸಿಕೊಳ್ಳಲು ಕ್ಷುಲ್ಲಕ ಉಡುಗೊರೆ ಆದರೆ, ಇದರ ಮಹತ್ವ ಮಾತ್ರ ಹೇಳತೀರದ್ದು.
ಲೋಕ್ತಕ್ ಲೋಟಸ್ ಚಹಾದ ವಿಶೇಷತೆ ಏನು?
ಲೋಕ್ತಾಕ್ ಲೋಟಸ್ ಚಹಾ ಈಶಾನ್ಯ ಭಾರತದ ಅತಿದೊಡ್ಡ ಸಿಹಿನೀರಿನ ಸರೋವರವಾದ ಲೋಕ್ತಾಕ್ ಸುತ್ತಲು ಬೆಳೆಯುತ್ತದೆ. ಇದು ಚಹಾಕ್ಕಿಂತ ಉತ್ತಮವಾದದ್ದು. ಇದನ್ನು ಮಣಿಪುರದ ಥಂಗಾ ಗ್ರಾಮದ ಮಹಿಳೆಯರ ಗುಂಪಿನಿಂದ ಅಭಿವೃದ್ಧಿ ಪಡಿಸಲಾದ ಲೋಕ್ತಾಕ್ ಲೋಟಸ್ ಚಹಾ ಆಗಿದೆ.
ಲೋಕ್ತಾಕ್ ಚಹಾ ತಯಾರಿ ಹೀಗಿರುತ್ತೆ
ಲೋಕ್ತಾಕ್ ಸರೋವರದಲ್ಲಿ ತೇಲುವ ಕಮಲದ ಎಲೆಯನ್ನು ಹಾಗೂ ಕಮಲವನ್ನು ಮಹಿಳೆಯರೇ ಗುಂಪಾಗಿ ಕೂತು ಮಾತನಾಡುತ್ತಾ, ಹಾಡು ಹಾಡುತ್ತಾ ಎಳೆಯಾಗಿ ಬಿಡಿಸಿ, ಅದಕ್ಕೊಂದಿಷ್ಟು ಚಹಾ ಸೇರಿಸಿ ತಯಾರಿಸಿ ಎಲೆಯಿಂದಲೇ ಪೊಟ್ಟಣ ಮಾಡಿ ಮಾರಿಕೊಳ್ಳುತ್ತಿದ್ದರು. ಈ ಪ್ರಕ್ರಿಯೆ ಜೂನ್ನಿಂದ ಆಗಸ್ಟ್ವರೆಗೂ ನಡೆಯಲಿದೆ. ಇಷ್ಟೇ ಅಲ್ಲ ಹಿಂದಿನ ಕಾಲದಲ್ಲಿ ಮಹಿಳೆಯರು ಇದೇ ವಿಧಾನವಾಗಿ ಚಹಾವನ್ನು ಕುಡಿಯುತ್ತಿದ್ದರು. ಇದು ಹಾಗೆಯೇ ವಾಡಿಕೆಯಾಗಿ ಮುಂದುವರೆಯಿತು ಎನ್ನಲಾಗಿದೆ. ಇದೊಂದು ಆರೋಗ್ಯಕರ ಹರ್ಬಲ್ ಚಹ ಎನ್ನಲಾಗಿದೆ.
ಆರೋಗ್ಯಕಾರಿ ಲೋಟಸ್ ಚಹಾ
ಲೋಕ್ತಕ್ ಲೋಟಸ್ ಚಹಾ ಸೂಕ್ಷ್ಮ ಪರಿಮಳ ಹೊಂದಿರುವ ಕಾರಣ ಇದನ್ನು ಕುದಿಸಿದ ನೀರಿನಲ್ಲಿ ಕುಡಿಯಬೇಕು. ಸಕ್ಕರೆ ಇಲ್ಲದೆ ನೀರನ್ನು ಕುಡಿದರೆ. ಇದರಲ್ಲಿರುವ ನಿಜವಾದ ಪರಿಮಳವನ್ನು ಸವಿಯಬಹುದು. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಉತ್ತಮವಾಗಿದೆ.
ಪ್ರಧಾನಿ ಮೋದಿಯವರು ಲೋಕ್ತಾಕ್ ಕಮಲದ ಚಹದ ಪುಡಿಯನ್ನು ರಾಜತಾಂತ್ರಿಕ ಉಡುಗೊರೆಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ, ಈಶಾನ್ಯ ಭಾರತದ ಸ್ಥಳೀಯ ಉತ್ಪನ್ನಗಳ ಪ್ರಾಮುಖ್ಯತೆಯನ್ನು ಹೆಚ್ಚಿಸುವುದು. ಅಲ್ಲಿನ ಮಹಿಳೆಯರ ಶ್ರಮವನ್ನು, ಜೀವವೈವಿಧ್ಯತೆಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ, (ಏಜೆನ್ಸೀಸ್).