ಇಂದೋರ್‌ನಲ್ಲಿ ಪೊಲೀಸರಿಂದಲೇ ದರೋಡೆ
- ಇಂದೋರ್‌ನಲ್ಲಿ ಪೊಲೀಸರಿಂದಲೇ ದರೋಡೆ
- ಉದ್ಯಮಿಯ ಮನೆಯಲ್ಲಿ ಚಿನ್ನಾಭರಣ ಕದ್ದ ಖಾಕಿ ಪಡೆ
- ವಿಚಾರಣೆ ಹೆಸರಲ್ಲಿ ಮನೆ ಬಾಗಿಲು ಮುರಿದ ಪೊಲೀಸರು
ಇಂದೋರ್: ಪೊಲೀಸರೆಂದರೆ ಭಯ ಅಲ್ಲ ಭರವಸೆ, ಅವರು ನಮ್ಮಂತೆಯೆ ಮನುಷ್ಯರೆ, ಅವರು ಇರುವುದು ಸಾರ್ವಜನಿಕರ ರಕ್ಷಣೆಗೆ ಎಂದು ಬಹತೇಕ ಎಲ್ಲಾ ರಾಜ್ಯದ ಪೊಲೀಸರ ಮತ್ತು ಗೃಹ ಮಂತ್ರಿಗಳ ಬಾಯಿಂದ ಕೇಳಿರುತ್ತೇವೆ.
ಆದರೆ ಕಳ್ಳರನ್ನು ಹಿಡಿಯಬೇಕಾದ ಈ ಪೊಲೀಸರೆ ಖುದ್ದು ಕಳ್ಳತನ(Police Theft)ಕ್ಕೆ ಇಳಿದರೆ ಜನ ಏನು ಮಾಡಬೇಕು? ಈಗ ಸದ್ಯ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ.
ಮನೆಯ ಬಾಗಿಲು ಮುರಿದು ಚಿನ್ನಾಭರಣ ಲೂಟಿ!
ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಐದು ಜನ ಪೊಲೀಸರು, ಉದ್ಯಮಿಯೊಬ್ಬನ ಮನೆಗೆ ಕನ್ನ ಹಾಕಿದ್ದು, ಸರಿಸುಮಾರು 35 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆಂದು ತಿಳಿದು ಬಂದಿದೆ.
ಕಳ್ಳತನಕ್ಕೆ ತೊಡಗಿದ್ದ ಈ ಖಾಕಿಗಲ ಕೈ ಚಳಕವು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮಾರಾನಲ್ಲಿ ಸೆರೆಯಾಗಿದೆ. ಕಳ್ಳತನದಲ್ಲಿ ಭಾಗಿಯಾಗಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಅಮರೇಂದ್ರ ಸಿಂಗ್, ಸಬ್-ಇನ್ಸ್ಪೆಕ್ಟರ್ ಸಂಜಯ್ ಬಿಷ್ಣೋಯ್, ಹೆಡ್ ಕಾನ್ಸ್ಟೇಬಲ್ಗಳಾದ ಪ್ರವೀಣ್ ಬದೋರಿಯಾ, ದಿನೇಶ್ ಜಾಟ್, ರವೀಂದ್ರ ಖುಶ್ವಾ ಎಂದು ಗುರುತಿಸಲಾಗಿದೆ.
ದಾಳಿಯ ನೆಪದಲ್ಲಿ ಕಳ್ಳತನ
ಈ ಮನೆಯು ಚಿನ್ನದ ವ್ಯಾಪಾರಿ ಗೌರವ್ ಜೈನ್ ಎಂಬುವವರಿಗೆ ಸೇರಿದ್ದಾಗಿದೆ. ಅವರ ಪ್ರಕಾರ ಪೊಲೀಸರು ಯಾವುದೇ ವಾರೆಂಟ್ ಇಲ್ಲದೆ ಮನೆಯನ್ನು ಕಳ್ಳರಂತೆ ಪ್ರವೇಶಿಸಿದ್ದಾರೆ. ಅವರ ಬಳಿಯಿದ್ದ ಮಾಸ್ಟರ್ ಕೀಯಿಂದ ಬೀಗವನ್ನು ಮುರಿದಿದ್ದು, ವಿಚಾರಣೆಯ ನಡೆಸಿ ಹೋದಾಗ ಮನೆಯಲಿದ್ದ 36 ಲಕ್ಷ ಮೌಲ್ಯದ ಚಿನ್ನಾಭರಣ ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರಿಂದ ಪೊಲೀಸರ ಮೇಲೆ ಕ್ರಮ
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಬ್-ಇನ್ಸ್ಪೆಕ್ಟರ್ನನ್ನು ಬೆರೆಕಡೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಕಳ್ಳತನ ಮಾಡಿದ್ದಾರೆ ಅಥವಾ ಇಲ್ಲವೇ ಎಂದು ಇನ್ನೂ ಇಲಾಖೆ ಸ್ಪಷ್ಟ ಪಡಿಸಿಲ್ಲ, (ಏಜನ್ಸೀಸ್).