ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್
- ಭಾರತ-ಅಮೆರಿಕಾ ನಡುವೆ ನಡೆದ ಮಹತ್ವದ ವ್ಯಾಪಾರ ಒಪ್ಪಂದ
- ಅಮೆರಿಕಾದಿಂದ ಭಾರತ ಪಡೆದ ಅತ್ಯುತ್ತಮ ಒಪ್ಪಂದ-ಗೋಯಲ್
- ಟ್ರಂಪ್ ಜೊತೆಗಿನ ಪ್ರಧಾನಿ ಮೋದಿಯವರ ಬಾಂಧವ್ಯದಿಂದ ಒಪ್ಪಂದ
ನವದೆಹಲಿ: ಭಾರತ-ಅಮೆರಿಕಾ ನಡುವೆ ನಡೆದ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್(Piyush Goyal), ನೆರೆಹೊರೆಯವರಿಗೆ ಮತ್ತು ನಮ್ಮ ಜೊತೆ ಸ್ಪರ್ಧಿಸುವ ದೇಶಗಳಿಗೆ ಹೋಲಿಸಿದ್ರೆ ನಮ್ಮದೇ ನಮ್ಮದೇ ಅತ್ಯತ್ತುಮ ವ್ಯಾಪಾರ ಒಪ್ಪಂದ ಎಂದು ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಭಾರತ ಪಡೆದ ಅತ್ಯುತ್ತಮ ಒಪ್ಪಂದವಾಗಿದೆ. ನಮ್ಮ ದೇಶದ ಜನರ ಉಜ್ವಲ ಭವಿಷ್ಯಕ್ಕಾಗಿ ಸಕಾರಾತ್ಮಕ ಸಂಕೇತಗಳನ್ನು ತರುತ್ತದೆ. ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಬಾಂಧವ್ಯವನ್ನು ಬಳಸಿಕೊಂಡು ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕಾದ ಜೊತೆಗಿನ ಈ ಒಪ್ಪಂದ ನಮ್ಮ ನೆರೆಹೊರೆಯವರು ಮತ್ತು ನಮ್ಮೊಂದಿಗೆ ಸ್ಪರ್ಧಿಸುವ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತವು ಪಡೆದ ಅತ್ಯುತ್ತಮ ಒಪ್ಪಂದವಾಗಿದೆ. ಈ ಮೂಲಕ ಪ್ರಧಾನಿ ಮೋದಿಯವರು ನಮ್ಮ ರೈತರು, ಪಶುಸಂಗೋಪನೆಯಲ್ಲಿ ತೊಡಗಿರುವ ನಮ್ಮ ಸಹೋದರ ಸಹೋದರಿಯರ ಮತ್ತು ಡೈರಿ ವಲಯದ ಕಲ್ಯಾಣಕ್ಕಾಗಿ ಹೇಗೆ ನಿರಂತರವಾಗಿ ಕಾಳಜಿ ವಹಿಸುತ್ತಾರೆ ಎಂಬುದು ಇಂದು ನಮಗೆಲ್ಲಾ ತಿಳಿದಿದೆ.
ಈ ಒಪ್ಪಂದವು ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡುವ ಮೀನುಗಾರರು ಈ ಒಪ್ಪಂದದ ನಂತರ ಹಬ್ಬವನ್ನು ಆಚರಿಸುತ್ತಾರೆ ಎಂದಿರುವ ಅವರು, ರೈತರು, ಎಂಎಸ್‌ಎಂಇಗಳು, ಉದ್ಯಮಿಗಳು ಹಾಗೂ ಕೌಶಲ್ಯಪೂರ್ಣ ಕೆಲಸಗಾರರಿಗೆ ಅಭೂತಪೂರ್ವವಾದ ಅವಕಾಶಗಳನ್ನು ಮಾಡಿಕೊಡುತ್ತದೆ. ಇದು ಕೇವಲ ವ್ಯಾಪಾರ ಒಪ್ಪಂದವಲ್ಲ. ಭಾರತ-ಅಮೆರಿಕಾ ಸಂಬಂಧಗಳನ್ನು ಪುನರ್ರೂಪಿಸುವ ಮತ್ತು 2047ರ ವಿಕ್ಷಿತ್ ಭಾರತದ ಕಡೆಗಿನ ನಮ್ಮ ಪ್ರಯಾಣವನ್ನು ವೇಗಗೊಳಿಸುವ ಐತಿಹಾಸಿಕ ತಿರುವು ಎಂದು ಪ್ರಶಂಸಿಸಿದ್ದಾರೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ
ಭಾರತ ಮತ್ತು ಅಮೆರಿಕ ಸೋಮವಾರ ಒಂದು ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಒಂದು ವರ್ಷ ಪೂರ್ತಿ ನಡೆದ ಬಿಸಿ ಸುಂಕ ವಿವಾದವನ್ನು ಕೊನೆಗೊಳಿಸಿದೆ. ಸೋಮವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ರಫ್ತುಗಳ ಮೇಲಿನ ಪರಸ್ಪರ ಸುಂಕಗಳನ್ನು ಹಿಂದಿನ 25% ರಿಂದ 18% ಕ್ಕೆ ಇಳಿಸುವುದಾಗಿ ಘೋಷಿಸಿದ್ದರು (ಏಜೆನ್ಸೀಸ್).