ದೇಶ

'ಪಶ್ಚಿಮ ಬಂಗಾಳ ಅಲ್ಲ ಪಶ್ಚಿಮ ಬಂಗಾ'; ರಾಜ್ಯದ ಹೆಸರು ಮರುನಾಮಕರಣದ ಬಗ್ಗೆ ಬಿಜೆಪಿ ಅಧ್ಯಕ್ಷ ಹೇಳಿದ್ದಿಷ್ಟು..West Bengal

  • ಪಶ್ಚಿಮ ಬಂಗಾಳ ಅಲ್ಲ ಪಶ್ಚಿಮ ಬಂಗಾಳದ 'ಪಶ್ಚಿಮ ಬಂಗಾ' ಎಂದು ಮರು ನಾಮಕರಣ

  • ರಾಜ್ಯದ ಹೆಸರು ಮರು ನಾಮಕರಣ ಬಗ್ಗೆ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮಾತು

  • 'ಪಶ್ಚಿಮ ಬಂಗಾ' ಮರುನಾಮಕರಣ ಮಸೂದೆಯನ್ನು ಶೀಘ್ರದಲ್ಲೇ ವಿಧಾಸನಸಭೆಯಲ್ಲಿ ಮಂಡನೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ಬದಲಾಯಿಸುವ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಈ ಬಗ್ಗೆ ಮಾತನಾಡಿದ್ದು, ಶೀರ್ಘ್ರವೇ ಹೆಸರು ಬದಲಾವಣೆ ಬಗ್ಗೆ ಮಸೂದೆ ಮಂಡಿಸಲಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ

'ಪಶ್ಚಿಮ ಬಂಗಾ' ಎಂದು ಮರು ನಾಮಕರಣ ಮಾಡುವ ಮಸೂದೆಯನ್ನು ರಾಜ್ಯ ಬಿಜೆಪಿ ಸರ್ಕಾರ ಶೀಘ್ರದಲ್ಲೇ ವಿಧಾಸನಸಭೆಯಲ್ಲಿ ಮಂಡಿಸುತ್ತದೆ ಎಂದು ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮತ್ತೆ ಬುಧವಾರ ಪುನರುಚ್ಚರಿಸಿದರು.

ಪಶ್ಚಿಮ ಬಂಗಾಳ ಅಲ್ಲ ಬಂಗಾ

ವಾರಣಾಸಿಯಲ್ಲಿ ಪಶ್ಚಿಮ ಬಂಗಾ ಭವನ ನಿರ್ಮಾಣದ ಪ್ರಸ್ತಾವನೆಯ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ನೀವು ಇನ್ನುಮುಂದೆ ಪಶ್ಚಿಮ ಬಂಗಾಳ ಅಥವಾ ಬಾಂಗ್ಲಾ ಎಂದು ಕರೆಯುಬೇಕಾಗಿಲ್ಲ. ಶೀಘ್ರದಲ್ಲೇ ವಿಧಾನಸಭೆಯಲ್ಲಿ ಪಶ್ಚಿಮಾ ಬಂಗಾ ಎಂದು ಮರುನಾಮಕರಣ ಮಾಡುವ ಮಸೂದೆಯನ್ನು ರಾಜ್ಯ ಸರ್ಕಾರ ಮಂಡಿಸಲಿದೆ. ರಾಜ್ಯದ ಇತಿಹಾಸಕ್ಕೆ ಅನುಗುಣವಾಗಿ ಪಶ್ಚಿಮ ಬಂಗಾ ಎಂದು ಮರು ನಾಮಕರಣ ಮಾಡಲಾಗುತ್ತದೆ' ಎಂದು ಅವರು ಸ್ಪಷ್ಟನೆ ಕೊಟ್ಟಿದ್ದರು.

ಎಷ್ಟು ಸರಿ ಹೇಳೋದು

ಬುಧವಾರವೂ ಹೆಸರು ಬದಲಾವಣೆ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು, 'ನಿಮಗೆ ಎಷ್ಟು ಬಾರಿ ಹೇಳೋದು ಸಹೋದರ, ಪಶ್ಚಿಮ ಬಂಗಾಳ ಅಲ್ಲ. 'ಪಶ್ಚಿಮ್ ಬಂಗಾ' ಆಗುತ್ತದೆ. ಪಶ್ಚಿಮ ಬಂಗಾಳ, ಬಾಂಗ್ಲಾ ಎಂದು ಇನ್ನು ಮುಂದೆ ಬಳಸಲಾಗುವುದಿಲ್ಲ. ಶೀಘ್ರವೇ ಮಸೂದೆ ಮಂಡನೆಯಾಗುತ್ತದೆ' ಎಂದು ಮತ್ತೆ ಸ್ಪಷ್ಟನೆ ಕೊಟ್ಟರು.

90ರ ಕಾಲದಿಂದಲೂ ಹೆಸರು ಬದಲಿಸುವ ಕ್ಯಾತೆ

ಪಶ್ಚಿಮ ಬಂಗಾಳವನ್ನು ಮರು ನಾಮಕರಣ ಮಾಡುವ ಹಿಂದೆ ಸುದೀರ್ಘ ಇತಿಹಾಸವಿದೆ. ಇದು ಇಂದು ನಿನ್ನಯ ಚರ್ಚೆಯಲ್ಲ. ಜ್ಯೋತಿ ಬಸು ನೇತೃತ್ವದ ಎಡರಂಗ ಸರ್ಕಾರ 1999ರಲ್ಲಿ ಪಶ್ಚಿಮ ಬಂಗಾ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯ ನಿರ್ಣಯವನ್ನು ಮಂಡಿಸಿತ್ತು. ನಂತರ ಕೇಂದ್ರದ ಮುಂದಿಟ್ಟಿತ್ತು. ಆದರೆ ಅನುಮೋದನೆ ಪಡೆಯಲು ವಿಫಲವಾಯಿತು.

2011ರಲ್ಲಿ ಅಧಿಕಾರ ಅಧಿಕಾರದ ಗದ್ದುಗೆ ಏರಿದ ತೃಣಮೂಲ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ಇದೇ ವಿಚಾರ ಮುನ್ನೆಲೆಗೆ ಬಂದಿತ್ತು. ಪಶ್ಚಿಮ ಬಂಗಾ ಎಂದು ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾಪವನ್ನು ಬಿಜೆಪಿ ಸರ್ಕಾರದ ಮುಂದಿಟ್ಟು. ಆದರೆ, ಅಂದು ಕೇಂದ್ರ ತಿರಸ್ಕರಿಸಿತ್ತು.

ಅಂದು ಪ್ರಸ್ತಾವನೆ ಅಂಗೀಕರಿಸಿರಲಿಲ್ಲ

2016ರಲ್ಲಿ ಮತ್ತೆ ಟಿಎಂಸಿ ಸರ್ಕಾರ ಪಶ್ಚಿಮದ ಜೊತೆಗೆ ಬಂಗಾಳಿಯಲ್ಲಿ ಬಾಂಗ್ಲಾ , ಇಂಗ್ಲಿಷ್​ನಲ್ಲಿ ಬಂಗಾಳ ಯಾವುದಾದರು ಹೆಸರನ್ನು ಇಡುವಂತೆ ಪ್ರಸ್ತಾವವಿಟ್ಟಿತ್ತು. ಜುಲೈ 2018 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯು ಬಾಂಗ್ಲಾ ಎಂದಿಡಲು ಪ್ರಸ್ತಾವನೆ ಅಂಗೀಕರಿಸಿ ಕೇಂದ್ರಕ್ಕೆ ಅನುಮೋದನೆಗಾಗಿ ಕಳುಹಿಸಿತು. ಅಂದು ಸಹ ಕೇಂದ್ರದಿಂದ ಪ್ರಸ್ತಾವನೆ ತಿರಸ್ಕೃತಗೊಂಡಿತ್ತು.

'ಬಾಂಗ್ಲಾ' ಮತ್ತು ಬಾಂಗ್ಲಾದೇಶದ ನಡುವಿನ ಹೋಲಿಕೆಯ ಹೆಸರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಗೊಂದಲಕ್ಕೆ ಅಥವಾ ಮುಜುಗರಕ್ಕೆ ಕಾರಣವಾಗಬಹುದು ಎನ್ನುವ ಕಾರಣಕ್ಕೆ ಕೇಂದ್ರವು ಪ್ರಸ್ತಾವನೆಯನ್ನು ರಿಜೆಕ್ಟ್​ ಮಾಡಿತ್ತು ಎನ್ನುವ ಮಾತಿದೆ. ಜೊತೆಗೆ ಇದೇ ನೆಪದಲ್ಲಿ ಸಾಂವಿಧಾನಿಕ ತಿದ್ದುಪಡಿಯ ಅಗತ್ಯವನ್ನು ಅಂದು ಕೇಂದ್ರ ಉಲ್ಲೇಖಿಸಿತ್ತು ಎನ್ನಲಾಗಿದೆ, (ಏಜೆನ್ಸೀಸ್).