ಸಿಎಂ ಮಮತಾ ಬ್ಯಾನರ್ಜಿ 
ದೇಶ

ಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿ ವಿರುದ್ಧ ಬಂಗಾಳಿಗಳು ಒಗ್ಗೂಡುವಂತೆ ಸಿಎಂ ಮಮತಾ ಬ್ಯಾನರ್ಜಿ ಕರೆ | CM Mamata Banerjee

ಕೋಲ್ಕತ್ತಾ: ಬಿಜೆಪಿಯೂ ರಾಜ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಅಗೌರವಿಸಿ, ವಿಭಜನೆ ಸೃಷ್ಟಿಸುವ ಮೂಲಕ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದ್ದು, ಅದರ ವಿರುದ್ಧ ರಾಜ್ಯದ ಎಲ್ಲಾ ಬಂಗಾಳಿ ಜನ ಒಗ್ಗೂಡುವಂತೆ ಸಿಎಂ ಮಮತಾ ಬ್ಯಾನರ್ಜಿ(CM Mamata Banerjee) ಕರೆ ನೀಡಿದ್ದಾರೆ.
ಶನಿವಾರ(ಏ. 04) ಮಾಲ್ಡಾದ ಮಾಣಿಕ್‌ಚಕ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಮಾಲ್ಡಾದಂತಹ ಪ್ರದೇಶಗಳಲ್ಲಿ ಬಿಜೆಪಿ ಧಾರ್ಮಿಕ ವಿಭಜನೆ ಸೃಷ್ಟಿಸುತ್ತಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಮತದಾರರು ಒಟ್ಟಾಗಬೇಕು ಎಂದು ಹೇಳಿದ್ದಾರೆ.
ರಾಜ್ಯದ ಜನ ಯೋಚಿಸಿ ಮತ ಚಲಾಯಿಸುವಂತೆ ಒತ್ತಾಯಿಸಿರುವ ಅವರು, ತೃಣಮೂಕ ಕಾಂಗ್ರೆಸ್ ಹೊರತುಪಡಿಸಿ ಇತರ ಪಕ್ಷಗಳನ್ನು ಬೆಂಬಲಿಸುವುದರಿಂದ ಬಿಜೆಪಿಗೆ ಪರೋಕ್ಷವಾಗಿ ಲಾಭವಾಗಬಹುದು ಎಂದು ಎಚ್ಚರಿಸಿದರು. ಬಿಜೆಪಿ-ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.
ಎನ್​​ಆರ್​ಸಿ ಅನುಷ್ಠಾನ ರಾಜ್ಯದಲ್ಲಿ ಬಂಧನ ಶಿಬಿರಗಳಿಗೆ ಕಾರಣವಾಗಬಹುದು. ಆದರೆ ನಮ್ಮ ಸರ್ಕಾರ ಅಂತ ಪಶ್ಚಿಮ ಬಂಗಾಳದ ಜನರ ಮೇಲೆ ಅದರ ಪ್ರಭಾವ ಬೀರಲು ಅನುಮತಿಸುವುದಿಲ್ಲ. ಆದರೆ ಬಿಜೆಪಿ ಬಂಗಾಳದಲ್ಲಿ ಬಂಗಾಳಿ ಸಂಪ್ರದಾಯವನ್ನು ನಿರ್ಲಕ್ಷಿಸಿ ತನ್ನದೇ ಆದ ವ್ಯಾಖ್ಯಾನವನ್ನು ಹೇರುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಂಗಾಳದಿಂದ ದುಡಿಯಲು ವಲಸೆ ಹೋದ ಬಂಗಾಳಿಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಅಂತಹವರು ರಾಜ್ಯಕ್ಕೆ ಹಿಂದುರುಗಿ ಮತದಾನದ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).