ಪ್ರಕಾಶ್​ ರಾಜ್  
ದೇಶ

ಭಾರತದಲ್ಲಿ ಆಡಳಿತ ಬದಲಾವಣೆ ಬಾಂಗ್ಲಾ, ನೇಪಾಳದಂತಲ್ಲ ಸಂವಿಧಾನದ ಮೂಲಕವೇ ಸಾಧ್ಯ : ನಟ ಪ್ರಕಾಶ್ ರಾಜ್..Prakash Raj

  • ಭಾರತದಲ್ಲಿ ಆಡಳಿತ ಬದಲಾವಣೆ ಸಾಂವಿಧಾನಿಕವಾಗಿಯೇ ಆಗಬೇಕು, ಬಾಂಗ್ಲಾ, ನೇಪಾಳದಂತೆ ಅಸಾಧ್ಯ ಎಂದ ನಟ ಪ್ರಕಾಶ್ ರಾಜ್

  • ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನದ ವಿರುದ್ಧ ಪ್ರಕಾಶ್ ರಾಜ್ ಕಿಡಿ.

  • ಸಂವಿಧಾನವಿರುವ ಭಾರತದಲ್ಲಿ ನಮ್ಮ ಅಸ್ತ್ರವೇ ಹಕ್ಕುಗಳು ಎಂದ ನಟ.

ನವದೆಹಲಿ: 'ಭಾರತದ ಆಡಳಿತದಲ್ಲಿ ಬದಲಾವಣೆ ಸಾಂವಿಧಾನಿಕ ಮತ್ತು ಚುನಾವಣೆ ಮೂಲಕ ಆಗಬೇಕು. ಇಲ್ಲಿ ನೇಪಾಳ ಮತ್ತು ಬಾಂಗ್ಲಾದೇಶದಂತೆ ನಡೆಯೋದಿಲ್ಲ. ಮ್ಮಲ್ಲಿ ಅಂಬೇಡ್ಕರ್ ಇದ್ದಾರೆ. ನಮಗೆ ಗಾಂಧಿ ಇದ್ದಾರೆ. ನಮಗೆ ಭಗತ್ ಸಿಂಗ್ ಇದ್ದಾರೆ. ನಮಗೆ ಸಂವಿಧಾನವಿದೆ. ನಮಗೆ ಮತದಾನದ ಹಕ್ಕಿದೆ' ಎಂದು ತಿರಂಗಾ ಯಾತ್ರೆಗೂ ಮುನ್ನ ಕಾಕ್ರೋಚ್​ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್​ ದೀಪ್ಕೆ ಬಂಧನ ವಿರೋಧಿಸಿ ನಟ ಪ್ರಕಾಶ್ ರಾಜ್ ಹೇಳಿದರು.

ಶುಕ್ರವಾರ ಕನ್ನಾಟ್ ಪ್ಲೇಸ್ ಬಳಿ ನಿಗದಿಯಾಗಿದ್ದ ತಿರಂಗಾ ಯಾತ್ರೆಗೂ ಮುನ್ನ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಪೊಲೀಸರು ಬಂಧಿಸಿದರು. ಇದರ ವಿರುದ್ಧ ನಟ ಪ್ರಕಾಶ್ ರಾಜ್​ ಕಿಡಿಕಾರಿದರು.

ಪ್ರತಿಭಟನಾಕಾರರನ್ನು ಮೌನಗೊಳಿಸಲು ಕೇಂದ್ರ ಸರ್ಕಾರವು ಬಲಪ್ರಯೋಗಿಸುತ್ತಿದೆ ಮತ್ತು ಜನರೊಂದಿಗೆ ಮಾತುಕತೆ ನಡೆಸಲು ನಿರಾಕರಿಸುತ್ತಿರುವುದು ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಬೇಡಿಕೆಯನ್ನು ಮತ್ತಷ್ಟು ತೀವ್ರಗೊಳಿಸಿದೆ . ನೀವು ನಮ್ಮೊಂದಿಗೆ ಮಾತನಾಡುತ್ತಿಲ್ಲ, ಬದಲಿಗೆ ಬಲಪ್ರಯೋಗಿಸುತ್ತಿದ್ದೀರಿ ಎಂದು ಪ್ರಕಾಶ್​ ರಾಜ್​ ಕಿಡಿಕಾರಿದರು.

ಮುಂದುವರೆದು, 2024ರಲ್ಲಿ ಬಾಂಗ್ಲಾದೇಶ ಹಾಗೂ 2025ರಲ್ಲಿ ನೇಪಾಳದಲ್ಲಿ ಬೃಹತ್ ಪ್ರತಿಭಟನೆಗಳ ಮೂಲಕ ಸರ್ಕಾರಗಳು ಪದಚ್ಯುತಗೊಂಡಿದ್ದನ್ನು ಉಲ್ಲೇಖಿಸಿದ ಅವರು, 'ಭಾರತವನ್ನು ಆ ದೇಶಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ. ನಾವು ಆಡಳಿತವನ್ನು ಕೆಳಗಿಳಿಸಲು ಬಯಸುತ್ತೇವೆ. ನಾವು ಬಾಂಗ್ಲಾದೇಶವಲ್ಲ. ನಮ್ಮ ಬಳಿ ಅಂಬೇಡ್ಕರ್ ಇದ್ದಾರೆ. ನಮ್ಮ ಬಳಿ ಗಾಂಧೀಜಿ ಇದ್ದಾರೆ. ನಾವು ನೇಪಾಳ ಅಥವಾ ನಾವು ಬಾಂಗ್ಲಾದೇಶದವರಲ್ಲ ನಮ್ಮ ಬಳಿ ಭಗತ್ ಸಿಂಗ್ ಇದ್ದಾರೆ. ನಮ್ಮ ಬಳಿ ಸಂವಿಧಾನವಿದೆ. ನಮ್ಮ ಬಳಿ ಮತದಾನದ ಹಕ್ಕಿದೆ' ಎಂದು ಹೇಳಿದರು.

'ಹರ್ ಘರ್ ತ್ರಿರಂಗ' ಬಗ್ಗೆ ಪ್ರಶ್ನೆ

ತಿರಂಗಾ ಯಾತ್ರಾಗೂ ಮುನ್ನ ಅಭಿಜಿತ್​ ದೀಪ್ಕೆ ಮತ್ತು ನೇಹಾ ಬೋರಾರನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಮಾತನಾಡಿದ ಅವರು, ರಾಷ್ಟ್ರಧ್ವಜವನ್ನು ಪ್ರದರ್ಶಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಹುರಿದುಂಬಿಸಿದ್ದ ಅಭಿಯಾನವನ್ನು ನೆನಪಿಸಿದರು. ನಾನು ಮೋದಿಜಿಯನ್ನು ಕೇಳುತ್ತಿದ್ದೇನೆ, ನಿಮ್ಮ 'ಹರ್ ಘರ್ ತ್ರಿರಂಗ' ಗೆ ಏನಾಯಿತು. ನೀವೆ ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಪ್ರದರ್ಶಿಸಬೇಕು ಎಂದಿದ್ದಿರಿ. ಈಗೇನಾಯ್ತು.

ಹಾಯ್​ ಫ್ರೆಂಡ್ಸ್ ಯಾಕೆ ಈ ಕನ್ಫ್ಯೂಷನ್​. ಹರ್​ ಘರ್​ ತಿರಂಗಾ. ನೀವೆ ರಾಷ್ಟ್ರ ಪ್ರೇಮ ಪ್ರದರ್ಶಿಸಿ ಎಂದಿದ್ದು. ಅದರಂತೆ ತಿರಂಗಾ ಹಿಡಿದ ಯುವಕರನ್ನು ಬಂಧಿಸಿ, ಜೈಲಿಗಟ್ಟಿರುವುದು ಯಾಕೆ?. ಅವರ ವಿರುದ್ಧ ಕೇಸ್​ಗಳನ್ನು ಹಾಕುತ್ತಿರುವುದು ಯಾಕೆ?. ನಮ್ಮ ಗೊಂದಲಕ್ಕೆ ಕೊಂಚ ಸ್ಪಷ್ಟತೆ ಬೇಕು. ನೀವೇ ಹರ್​ ಘರ್ ತಿರಂಗಾ ಎಂದು ಈಗ ಬಂಧಿಸುತ್ತಿರುವುದು ಯಾಕೆ. ನಿಮ್ಮ ಬಿಜೆಪಿ ನಾಯಕರು ಇದರ ವಿರುದ್ಧ ನಿಂತಿರೋದ್ಯಾಕೆ. ಪ್ರತಿಭಟನೆ ನಡೆಸದೆ ಆಡಳಿತ ಬದಲಾವಣೆ ತರುವುದು ಹೇಗೆ?. ನಮ್ಮ ಮತ ನಮಗೆ ವಾಪಸ್ ಕೊಡಿ ಎಂದರು, (ಏಜೆನ್ಸೀಸ್).