Weight loss 
ದೇಶ

8 ತಿಂಗಳಲ್ಲಿ 31 ಕೆಜಿ ತೂಕ ಇಳಿಕೆ: ಫಿಟ್‌ನೆಸ್ ತರಬೇತುದಾರ್ತಿಯ ಯಶಸ್ಸಿನ 3 ಸೂತ್ರಗಳು ಇಲ್ಲಿವೆ! | Weight loss

ನವದೆಹಲಿ: ತೂಕ ಇಳಿಸಿಕೊಳ್ಳುವುದು ಎಂದರೆ ಕೇವಲ ಕಠಿಣ ವ್ಯಾಯಾಮ ಮಾತ್ರವಲ್ಲ, ಅದು ಸರಿಯಾದ ಮನಸ್ಥಿತಿ ಮತ್ತು ಜೀವನಶೈಲಿಯ ಬದಲಾವಣೆಯೂ ಹೌದು. ಯಾವುದೇ ಮಾತ್ರೆ ಅಥವಾ ಶಾರ್ಟ್‌ಕಟ್ ಬಳಸದೆ ಕೇವಲ 8 ತಿಂಗಳಲ್ಲಿ 31 ಕೆಜಿ ತೂಕ ಇಳಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ ಫಿಟ್‌ನೆಸ್ ತರಬೇತುದಾರ್ತಿ ಟಾರ್ನ್ ಕೌರ್. ಇತ್ತೀಚೆಗೆ ಅವರು ತಮ್ಮ ಯಶಸ್ಸಿನ ಹಿಂದಿನ ಮೂರು ಮುಖ್ಯ ಬದಲಾವಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತೂಕ ಇಳಿಕೆಗೆ 3 ಪ್ರಮುಖ ಬದಲಾವಣೆಗಳು

'ಪರಿಪೂರ್ಣತೆ'ಯ ಹಠ ಬಿಡುವುದು (All or Nothing Mindset): ತೂಕ ಇಳಿಸುವ ಭರದಲ್ಲಿ ನಾವು ಆರಂಭದಲ್ಲಿ ಎಲ್ಲವನ್ನೂ ಪರ್ಫೆಕ್ಟ್ ಆಗಿ ಮಾಡಲು ಹೋಗುತ್ತೇವೆ. ಒಮ್ಮೆ ಸಣ್ಣ ತಪ್ಪು ಮಾಡಿದರೂ (ಉದಾಹರಣೆಗೆ ಜಂಕ್ ಫುಡ್ ತಿನ್ನುವುದು) ಇಡೀ ಪ್ರಯತ್ನವನ್ನೇ ಕೈಬಿಡುತ್ತೇವೆ. ಟಾರ್ನ್ ಕೌರ್ ಪ್ರಕಾರ, "ನಾನು ಪರಿಪೂರ್ಣತೆಗಾಗಿ ಕಾಯುವುದನ್ನು ನಿಲ್ಲಿಸಿ, ಆಗಾಗ ಆಗುವ ಸಣ್ಣ ತಪ್ಪುಗಳನ್ನು ಒಪ್ಪಿಕೊಂಡು ಪ್ರಯಾಣ ಮುಂದುವರಿಸಿದೆ" ಎಂದಿದ್ದಾರೆ.
ಶಾರ್ಟ್‌ಕಟ್ ಆಸೆ ಬಿಡುವುದು (Timeline): ತೂಕವು ರಾತ್ರೋರಾತ್ರಿ ಇಳಿಯುವುದಿಲ್ಲ. ಶೀಘ್ರವಾಗಿ ತೂಕ ಇಳಿಸುವ 'ಕ್ವಿಕ್ ಫಿಕ್ಸ್' ವಿಧಾನಗಳು ಕೇವಲ ತಾತ್ಕಾಲಿಕ. ಸುಸ್ಥಿರ ಬದಲಾವಣೆಗಾಗಿ ತಾಳ್ಮೆ ಮತ್ತು ಸತತ ಪ್ರಯತ್ನ ಅಗತ್ಯ ಎಂಬುದನ್ನು ಅವರು ಕಂಡುಕೊಂಡರು.
ನೆಪಗಳನ್ನು ನಿಲ್ಲಿಸುವುದು (Excuses): ಸಮಯವಿಲ್ಲ ಎನ್ನುವುದು ಕೇವಲ ನೆಪ ಅಷ್ಟೇ. ಕೆಲಸದ ಒತ್ತಡ, ಮಕ್ಕಳ ಜವಾಬ್ದಾರಿ ಮತ್ತು ಹಬ್ಬ ಹರಿದಿನಗಳ ನಡುವೆಯೂ ಫಿಟ್‌ನೆಸ್‌ಗೆ ಆದ್ಯತೆ ನೀಡಬಹುದು. ಇದು ನಮ್ಮ ಆದ್ಯತೆಗಳ ಮೇಲಿರುತ್ತದೆಯೇ ಹೊರತು ಸಮಯದ ಮೇಲಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬದಲಾದ ಆಹಾರ ಪದ್ಧತಿ

10 ಪ್ರಮುಖ ಆಹಾರ ಬದಲಾವಣೆಗಳು (Food Swaps) ಆಹಾರವನ್ನು ತ್ಯಜಿಸುವ ಬದಲು, ಆರೋಗ್ಯಕರ ಆಯ್ಕೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಟಾರ್ನ್ ಕೌರ್ ಸೂಚಿಸಿದ ಕೆಲವು ಬದಲಾವಣೆಗಳು ಇಲ್ಲಿವೆ:
ಮೊದಲಿನ ಆಯ್ಕೆ                                             ಆರೋಗ್ಯಕರ ಬದಲಾವಣೆ
ಸಕ್ಕರೆ ಮತ್ತು ಹಾಲಿನ ಟೀ                                           ಬ್ಲ್ಯಾಕ್ ಕಾಫಿ
ಸಂಸ್ಕರಿಸಿದ ಜ್ಯೂಸ್‌ಗಳು                                       ಎಲೆಕ್ಟ್ರೋಲೈಟ್‌ಗಳು
ವೈಟ್ ರೈಸ್                                              ಕ್ವಿನೋವಾ ಅಥವಾ ಹೂಕೋಸಿನ ಅನ್ನ
ಪ್ಯಾಕೆಟ್ ಚಿಪ್ಸ್                                            ತರಕಾರಿ ಸ್ಟಿಕ್ಸ್ + ಗ್ರೀಕ್ ಯೋಗರ್ಟ್
ಐಸ್ ಕ್ರೀಮ್                                               ಗ್ರೀಕ್ ಯೋಗರ್ಟ್ + ಫ್ರೋಜನ್ ಬೆರ್ರಿಗಳು
ವೈಟ್ ಬ್ರೆಡ್                                               ಹೋಲ್ ಗ್ರೇನ್ ಅಥವಾ ಸೀಡೆಡ್ ಬ್ರೆಡ್
ಮಿಲ್ಕ್ ಚಾಕೊಲೇಟ್                                                ಡಾರ್ಕ್ ಚಾಕೊಲೇಟ್
ಕರಿದ ತಿಂಡಿಗಳು                                                  ಬೇಕ್ ಮಾಡಿದ ವೆಜ್ ಚಿಪ್ಸ್
ಸಕ್ಕರೆಯ ಬಿಸ್ಕತ್ತುಗಳು                                          ಬಾದಾಮಿ ಹಿಟ್ಟಿನ ಕುಕೀಸ್
ಫಾಸ್ಟ್ ಫುಡ್ ಬರ್ಗರ್                                   ಮನೆಯಲ್ಲೇ ತಯಾರಿಸಿದ ವೆಜ್ ಬರ್ಗರ್
ಟಾರ್ನ್ ಕೌರ್ ಅವರು ತಮ್ಮ ತೂಕ ಇಳಿಕೆಯ ಪ್ರಯಾಣದಲ್ಲಿ ಅನುಸರಿಸಿದ ಕೆಲವು ವಿಚಿತ್ರವಾದರೂ ಪರಿಣಾಮಕಾರಿ ಅಭ್ಯಾಸಗಳು ಇಲ್ಲಿವೆ.

ತೂಕ ಇಳಿಕೆಗೆ 'ವಿಚಿತ್ರ' ಸೂತ್ರಗಳು

ಕಣ್ಣಿನಿಂದ ದೂರ: ಇಷ್ಟವಾದ ತಿಂಡಿಗಳನ್ನು ಕಣ್ಣಿಗೆ ಕಾಣದಂತೆ ಇಡುವುದು, ಇದರಿಂದ ಅನಗತ್ಯವಾಗಿ ತಿನ್ನುವುದು ತಪ್ಪುತ್ತದೆ.
ಚೂಯಿಂಗ್ ಗಮ್ ಬಳಕೆ: ಹಸಿವಾದಾಗ ಅಥವಾ ಸಿಹಿ ತಿನ್ನಬೇಕೆನಿಸಿದಾಗ ಮಿಂಟ್ ಗಮ್ ಬಳಸುವುದು ಮೆದುಳಿಗೆ ಹಸಿವಿನ ಸಂಕೇತ ತಲುಪದಂತೆ ತಡೆಯುತ್ತದೆ.
ಪೂರ್ವ ಯೋಜನೆ: ಅತಿಯಾದ ಆಹಾರ ಸೇವನೆಯ ಮುನ್ನವೇ ಅದನ್ನು ಆ್ಯಪ್‌ನಲ್ಲಿ ದಾಖಲಿಸಿ, ಎಷ್ಟು ತಿನ್ನಬೇಕೆಂದು ನಿಯಂತ್ರಣ ಸಾಧಿಸುವುದು.
ಗಟ್ಟಿಯಾಗಿ ಹೇಳುವುದು: ಊಟ ಮುಗಿದ ತಕ್ಷಣ "ನನ್ನ ಹೊಟ್ಟೆ ತುಂಬಿದೆ" ಎಂದು ಜೋರಾಗಿ ಹೇಳುವುದು ಮೆದುಳಿಗೆ ತಿನ್ನುವುದನ್ನು ನಿಲ್ಲಿಸಲು ಸಂಕೇತ ನೀಡುತ್ತದೆ.
ಬಿಗಿಯಾದ ಉಡುಪು: ಸಡಿಲವಾದ ಬಟ್ಟೆಗಳಿಗಿಂತ ಫಿಟ್ಟಿಂಗ್ ಬಟ್ಟೆಗಳನ್ನು ಧರಿಸುವುದು ಮಿತವಾಗಿ ತಿನ್ನಲು ನೆನಪಿಸುತ್ತದೆ.
ತ್ಯಜಿಸುವ ಗುಣ: ಹೋಟೆಲ್‌ಗಳಲ್ಲಿ ಬ್ರೆಡ್ ಬಾಸ್ಕೆಟ್‌ನಿಂದ ದೂರವಿರುವುದು ಮತ್ತು ಗುರಿಗೆ ಅಡ್ಡಿಯಾಗುವ ಉಳಿದ ಆಹಾರವನ್ನು ಧೈರ್ಯವಾಗಿ ಬಿಸಾಡುವುದು ಇವರ ಯಶಸ್ಸಿನ ಗುಟ್ಟು.
ತೂಕ ಇಳಿಕೆಯು ಕೇವಲ ಶಾರೀರಿಕ ಬದಲಾವಣೆಯಲ್ಲ, ಅದು ಮಾನಸಿಕ ದೃಢತೆಯ ಪರೀಕ್ಷೆಯೂ ಹೌದು. ಶಿಸ್ತು ಮತ್ತು ಸ್ಥಿರತೆ ಇದ್ದರೆ ಯಾರು ಬೇಕಾದರೂ ತಮ್ಮ ಗುರಿಯನ್ನು ತಲುಪಬಹುದು ಎಂಬುದು ಟಾರ್ನ್ ಕೌರ್ ಅವರ ಕಿವಿಮಾತು, (ಏಜೆನ್ಸೀಸ್​).