- ಡಿಸೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಜೋಡಿಯ ಸಾವು
- ಕೇರಳ ಮತ್ತು ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಶವ ಪತ್ತೆ
- ವಧು ಸಾವಿನ ಬಳಿಕ ವರ ಆತ್ಮಹತ್ಯೆ ಮಾಡಿಕೊಂಡ ಶಂಕೆ
ಕೊಚ್ಚಿ: ಡಿಸೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಜೋಡಿಯೊಂದು ಹೊಸ ಜೀವನಕ್ಕೆ ಕಾಲಿಡುವ ಮುನ್ನವೇ ದುರಂತ ಅಂತ್ಯ ಕಂಡಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಕಾಸರಗೋಡಿನ ಪೂಚಕ್ಕಾಡ್ ಮೂಲದ ಪಿ.ಅನುಶ್ರೀ (25) ಮತ್ತು ಕಣ್ಣೂರಿನ ಇರಿಟ್ಟಿ ಮೂಲದ ವಿ.ಅಮಲ್ (26) ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿಸೆಂಬರ್‌ನಲ್ಲಿ ಮದುವೆಯಾಗಲು ರೇಡಿಯಾಗಿದ್ದರು. ಇಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದು, ಅನುಶ್ರೀ ಕರ್ನಾಟಕದ ಹುಣಸೂರಿನ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಅಮಲ್ ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ವಧುವಿನ ಸಾವಿನ ಸುದ್ದಿ ಕೇಳಿ ವರ ಆತ್ಮಹತ್ಯೆ?
ಇನ್ನು, ಅನುಶ್ರೀ ಹುಣಸೂರಿನಲ್ಲಿ ತಂಗಿದ್ದ ವಸತಿಗೃಹದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಈ ವಿಚಾರ ತಿಳಿದ ಬಳಿಕ ಅಮಲ್ ಎರ್ನಾಕುಲಂನ ಲಾಡ್ಜ್‌ವೊಂದಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಮಲ್ ತನ್ನ ಸ್ನೇಹಿತನ ಜತೆ ವಾಸವಾಗಿದ್ದರು. ಆದರೆ ಇಬ್ಬರ ಸಾವಿಗೂ ನಿಖರ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ
ಎರ್ನಾಕುಲಂ ಉತ್ತರ ಪೊಲೀಸರು ತಿಳಿಸಿದ್ದಾರೆ.
ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ
ಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಮತ್ತು ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಅನುಶ್ರೀ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕಾಸರಗೋಡಿನ ಮನೆಗೆ ಕೊಂಡೊಯ್ದು ಬುಧವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಮಲ್ ಅವರ ಮರಣೋತ್ತರ ಪರೀಕ್ಷೆ ಗುರುವಾರ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವನದ ಬಗ್ಗೆ ನೂರಾರು ಕನಸು ಕಂಡಿದ್ದ ಜೋಡಿಯ ದಿಢೀರ್ ಸಾವು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಘಾತ ಮೂಡಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣದ ಸಂಪೂರ್ಣ ಸತ್ಯ ತನಿಖೆಯಿಂದ ಹೊರಬರಬೇಕಿದೆ, (ಏಜೆನ್ಸೀಸ್).