ನವದೆಹಲಿ: ಅಪ್ರಾಪ್ತರು ಸಾಮಾಜಿಕ ಜಾಲತಾಣ ಖಾತೆ ತೆರೆ ಯಲು ಅವಕಾಶ ನೀಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಪ್ರಾಪ್ತರ ಸಾಮಾಜಿಕ ಜಾಲತಾಣ ಬಳಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿಯಮ ರೂಪಿಸಬೇಕು ಎಂದು ಸೂಚಿಸಿದೆ.
ಅಪ್ರಾಪ್ತರು ಸಾಮಾಜಿಕ ಜಾಲತಾಣ ಹಾಗೂ ಇತರ ಡಿಜಿಟಲ್ ವೇದಿಕೆಗಳನ್ನು ಬಳಸುವುದರ ವಿರುದ್ಧ ಸೂಕ್ತ ರಕ್ಷಣಾ ಕ್ರಮ ಕೋರಿ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ ್ರ್ ಅಲಯನ್ಸ್’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸಿಜೆಐ ಸೂರ್ಯ ಕಾಂತ್, ನ್ಯಾ.ಜೋಯ್ಮಲ್ಯ ಬಾಗ್ಚಿ, ನ್ಯಾ.ವಿ. ಮೋಹನಾ ಅವರ ಪೀಠ ನಡೆಸಿತು.
ವಿಚಾರಣೆ ವೇಳೆ ಮೇಲ್ನೋಟಕ್ಕೆ ಈ ಸಮಸ್ಯೆ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023ರ (ಡಿಪಿಡಿಪಿ ಕಾಯ್ದೆ) ವ್ಯಾಪ್ತಿಗೆ ಬರುವಂತೆ ತೋರುತ್ತಿದೆ. ನಿಬಂಧನೆಗಳ ವ್ಯಾಪ್ತಿಗೆ ಬರುತ್ತದೆಯೇ ಎಂದು ಪರಿಶೀಲಿಸಲು ಬಯಸುತ್ತೇನೆ. ಇಲ್ಲದಿದ್ದರೆ ಇದು ನಿಜವಾದ ಕುಂದುಕೊರತೆ. ಅಪ್ರಾಪ್ತರ ಖಾತೆ ಗಳಿಗೆ ಪಾಲಕರ ಸಮ್ಮತಿ ಕಡ್ಡಾಯವಾಗುವಂತೆ ಬೇರೆ ಕಾನೂನಿ ನಲ್ಲಿ ಡಿಪಿಡಿಪಿ ಕಾಯ್ದೆ ಅಳವಡಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳೊಂದಿಗೆ ಅಪ್ರಾಪ್ತರು ಮಾಡಿ ಕೊಂಡ ಒಪ್ಪಂದಗಳು ಆರಂಭದಿಂದಲೇ ಅಮಾನ್ಯ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಸಾಮಾಜಿಕ ಜಾಲತಾಣಗಳು 12-15 ವರ್ಷದ ಅಪ್ರಾಪ್ತರಿಗೆ ಖಾತೆ ತೆರೆಯಲು ಅವಕಾಶ ನೀಡುತ್ತಿರುವುದಕ್ಕೆ ನ್ಯಾ.ಬಾಗ್ಚಿ ಬೇಸರ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳು ಕಾನೂನು ಪಾಲಿಸುವಂತೆ ಮಧ್ಯ ವರ್ತಿ ನಿಯಮಗಳಡಿ ಸರ್ಕಾರ ನಿರ್ದೇಶನ ನೀಡಬೇಕೆಂದರು. ಸಮಸ್ಯೆ ಪರಿಹರಿಸದಿದ್ದರೆ ಈ ಬಗ್ಗೆ ನ್ಯಾಯಾಲಯ ನಿರ್ದೇಶನ ನೀಡಬಹುದೆಂದು ಸಿಜೆಐ ಹೇಳಿದರು.