IndVsNz 
ದೇಶ

ಬೌಲಿಂಗ್​ ವೈಫಲ್ಯಕ್ಕೆ ಬೆಲೆತೆತ್ತ ಭಾರತ..ಟೀಮ್​ ಇಂಡಿಯಾ ಪಾಲಿಗೆ ಮತ್ತೆ ವಿಲನ್​ ಆದ ಮಿಚೆಲ್​ | IndVsNz

ರಾಜ್​ಕೋಟ್​: ಆಲ್​ರೌಂಡರ್ ಡ್ಯಾರಿಲ್ ಮಿಚೆಲ್ ಅದ್ಭುತ ಶತಕ, ವಿಲ್​ ಯಂಗ್ ಅರ್ಧಶತಕದ ಬಲದಿಂದ ಇಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡ ಏಳು ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ 1-1 ಸರಣಿ ಸಮಬಲ ಸಾಧಿಸಿದೆ.
ಭಾರತ ತಂಡ ನೀಡಿದ್ದ 285 ರನ್​ಗಳ ಸ್ಫರ್ಧಾತ್ಮಕ ಬೆನ್ನತ್ತಿದ ನ್ಯೂಜಿಲೆಂಡ್​ ತಂಡ 46 ರನ್​ ಗಳಿಸುವಷ್ಟರಲ್ಲಿ 2 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಜೊತೆಯಾದ ಮಿಚೆಲ್​ ಮತ್ತು ಯಂಗ್​ ಜೋಡಿ 162 ರನ್​ಗಳ ಜೊತೆಯಾಟ ನಡೆಸುವ ಮೂಲಕ ಭಾರತದ ಬೌಲರ್​ಗಳ ತಾಳ್ಮೆ ಪರೀಕ್ಷಿಸಿದರು. ಅಂತಿಮವಾಗಿ ಯಂಗ್​ 87 ರನ್​ಗಳಿಗೆ ವಿಕೆಟ್​ ಒಪ್ಪಿಸುವ ಮೂಲಕ ಈ ಪಾಲುದಾರಿಕೆಗೆ ತೆರೆಬಿತ್ತು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ಗ್ಲೇನ್​ ಪಿಲಿಪ್ಸ್ 25 ಎಸೆತಗಳಲ್ಲಿ 32 ರನ್​ ಬಾರಿಸಿ ಸರಣಿ ಸಮಬಲಗೊಳಿಸಿದರು. ಭಾರತ ತಂಡದ ಪರ ಹರ್ಷಿತ್​ ರಾಣಾ, ಪ್ರಸಿದ್ಧ ಕೃಷ್ಣ, ಕುಲ್ದೀಪ್ ಯಾದವ್​ ತಲಾ ಒಂದೊಂದು ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್

ಟಾಸ್​ ಗೆದ್ದ ಕಿವೀಸ್​ ಭಾರತ ತಂಡಕ್ಕೆ ಬ್ಯಾಟಿಂಗ್​ಗೆ ಆಹ್ವಾನಿಸಿತು ಆರಂಭಿಕ ಆಟಗಾರರಾದ ರೋಹಿತ್​ ಶರ್ಮಾ, ನಾಯಕ ಶುಭಮಾನ್​ ಗಿಲ್​ ಉತ್ತಮ ಆರಂಭ ನೀಡಿದರೂ ಆ ಜೊತೆಯಾಟವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ರೋಹಿತ್​ 24 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರೆ, ಒನ್​ಡೌನ್​ ಆಗಿ ಬಂದ ಕಿಂಗ್ ಕೊಹ್ಲಿ​ ಬಾರಿಸಿದ್ದು 23 ರನ್​. ಕಳೆದ ಪಂದ್ಯದ ಕಮ್​ ಬ್ಯಾಕ್​ ಹೀರೋ ಅಯ್ಯರ್​ 8 ರನ್​ಗೆ ಪೆವಿಲಿಯನ್​ ಸೇರಿಕೊಂಡರು.
ಒಂದೆಡೆ ವಿಕೆಟ್​ ಬಿದ್ದರು ಕೂಡ ನಾಯಕ ಗಿಲ್​ ಇನ್ನೊಂದು ಬದಿಯಲ್ಲಿ ರನ್​ ಗತಿಗೆ ವೇಗ ನೀಡಿದರು, ಇತ್ತ ಕನ್ನಡಿಗ ಕೆ ಎಲ್​ ರಾಹುಲ್​ ಕೂಡ ಮೊದ ಮೊದಲು ಸ್ಟ್ರೈಕ್​ ರೊಟೇಟ್​ಗೆ ಆದ್ಯತೆ ನೀಡಿ, ಇನ್ನಿಂಗ್ಸ್ ಕೊನೆಯಲ್ಲಿ ಸ್ಫೋಟಕ ಆಟದ ಮೂಲಕ ಶತಕ ಬಾರಿಸಿ ತಂಡ 285 ರನ್​ ಗಳ ಗುರಿ ನೀಡಲು ಕಾರಣರಾದರು. ನ್ಯೂಜಿಲೆಂಡ್​ ಪರ ಕ್ಲರ್ಕ್​ 3 ವಿಕೆಟ್​ ಪಡೆದು ಮಿಂಚಿದರು.