ನವೆಂಬರ್ 17ರಂದು ದುಬೈನಲ್ಲಿ ನಡೆದ ಏರ್ ಶೋನಲ್ಲಿ ರಷ್ಯಾದ(Russia) ಸುಖೋಯ್ SU-57E 
ದೇಶ

ನಿಮಗೆ ಏನು ಬೇಕಾದರೂ ನೀಡುತ್ತೇವೆ: ಭಾರತಕ್ಕೆ 5ನೇ ತಲೆಮಾರಿನ ಯುದ್ಧವಿಮಾನದ ತಂತ್ರಜ್ಞಾನ ನೀಡಿದ ರಷ್ಯಾ | Russia

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಭಾರತದ ವಾಯು ಶಕ್ತಿಯ ಭವಿಷ್ಯವನ್ನು ಪುನರ್​​ರೂಪಿಸಲು ಸಿದ್ದವಾಗಿದೆ. ಅಲ್ಲದೆ, ಭವಿಷ್ಯದ ಯುದ್ಧ ವಿಮಾನಗಳ ಅವಶ್ಯಕತೆಗಳನ್ನು ಪೂರೈಸಲು ರಷ್ಯಾವು(Russia) ಭಾರತಕ್ಕೆ ಹೊಸ ಐದನೇ ತಲೆಮಾರಿನ Su-57 ಸ್ಟೆಲ್ತ್ ಫೈಟರ್ ಜೆಟ್‌ಗೆ ತಂತ್ರಜ್ಞಾನವನ್ನು ನೀಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾ ಸರ್ಕಾರಿ ಸ್ವಾಮ್ಯದ ರಕ್ಷಣಾ ಸಮೂಹ ರೋಸ್ಟೆಕ್‌ನ ಸಿಇಒ ಸೆರ್ಗೆಯ್ ಚೆಮೆಜೋವ್, ಆರಂಭದಲ್ಲಿ ರಷ್ಯಾದಲ್ಲಿ ಉತ್ಪಾದಿಸಲಾದ ಸು -57 ಯುದ್ಧವಿಮಾನಗಳನ್ನು ಪೂರೈಸುವ ಪ್ರಸ್ತಾವನೆ ಇದೆ ಎಂದು ತಿಳಿದು ಬಂದಿತ್ತು. ಇದರ ಜತೆಗೆ, ಉತ್ಪಾದನೆಯನ್ನು ಹಲವು ಹಂತಗಳಲ್ಲಿ ಭಾರತಕ್ಕೆ ಸ್ಥಳಾಂತರಿಸಲಾಗುವುದು ಎಂದಿದ್ದಾರೆ.
ರಷ್ಯಾ ತನ್ನ ಸಿಂಗಲ್-ಎಂಜಿನ್ ಸ್ಟೆಲ್ತ್ ಫೈಟರ್ ವಿಮಾನವಾದ Su-75 ಚೆಕ್‌ಮೇಟ್ ಅನ್ನು ಭಾರತಕ್ಕೂ ನೀಡಬಹುದು.
ಮುಂದುವರೆದು ಮಾತನಾಡಿದ ಚೆಮೆಜೋವ್, ಎಂಜಿನ್‌ಗಳು, ಸಂವೇದಕಗಳು, ಸ್ಟೆಲ್ತ್ ಸಾಮಗ್ರಿಗಳ ತಯಾರಿಕೆ ಸೇರಿದಂತೆ ಸಂಪೂರ್ಣ ಐದನೇ ತಲೆಮಾರಿನ ಎಲ್ಲ ವ್ಯವಸ್ಥೆಯನ್ನು ಭಾರತಕ್ಕೆ ಕೊಡಲು ಮಾಸ್ಕೋ ಸಿದ್ಧವಾಗಿದೆ. ಅಲ್ಲದೆ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದ ಕಡೆಯಿಂದ ಯಾವುದೇ ಬೇಡಿಕೆಯು ಸ್ವೀಕಾರಾರ್ಹ ಎಂದು ತಿಳಿಸಿದ್ದಾರೆ.
ಭಾರತ ಮತ್ತು ರಷ್ಯಾ ಹಲವು ವರ್ಷಗಳಿಂದ ಪಾಲುದಾರರಾಗಿದ್ದಾರೆ. ಇಂಡಿಯಾ ನಿರ್ಬಂಧಗಳ ಅಡಿಯಲ್ಲಿದ್ದಾಗಲೂ, ನಾವು ಭಾರತದ ಭದ್ರತೆಯನ್ನು ಕಾಪಾಡಲು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದೇವೆ. ಇಂದು, ಹಿಂದಿನ ವರ್ಷಗಳಂತೆಯೇ ನಾವು ಅದೇ ವಿಧಾನವನ್ನು ಮುಂದುವರಿಸುತ್ತೇವೆ. ಭಾರತಕ್ಕೆ ಅಗತ್ಯವಿರುವ ಯಾವುದೇ ಮಿಲಿಟರಿ ಉಪಕರಣಗಳನ್ನು ಪೂರೈಸುತ್ತೇವೆ ಮತ್ತು ಸಹಕಾರವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಪರಸ್ಪರ ಹಿತಾಸಕ್ತಿಗಳನ್ನು ಬೆಂಬಲಿಸುತ್ತೇವೆ  ಎಂದು ರೋಸ್ಟೆಕ್ ಸಿಇಒ ಹೇಳಿದ್ದಾರೆ.
ಹೆಚ್ಚಿನ S-400 ವ್ಯವಸ್ಥೆಗಳು ಅಥವಾ Su-57 ಗಾಗಿ ಸಂಭಾವ್ಯ ವಿನಂತಿಗಳ ಬಗ್ಗೆ ಕೇಳಿದಾಗ, ನಾವು ಭಾರತದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದೇವೆ. ಅಲ್ಲದೆ, ನಾವು ಭಾರತಕ್ಕೆ ಏನು ಬೇಕಾದರೂ ಕೊಡುತ್ತೇವೆ ಎಂದು ರೋಸ್ಟೆಕ್ ಸಿಇಒ ಎಂದಿದ್ದಾರೆ.

ಭಾರತಕ್ಕೆ ಪುಟಿನ್ ಭೇಟಿ

ರಷ್ಯಾ ಅಧ್ಯಕ್ಷ ಪುಟಿನ್ ಡಿಸೆಂಬರ್‌ನಲ್ಲಿ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಪುಟಿನ್​ ಕೊನೆಯ ಬಾರಿಗೆ 2021 ರ ಡಿಸೆಂಬರ್‌ನಲ್ಲಿ 21 ನೇ ಆವೃತ್ತಿಯ ಸಭೆಗೆ ಹಾಜರಾಗಲು ಭಾರತಕ್ಕೆ ಭೇಟಿ ನೀಡಿದ್ದರು. ರಷ್ಯಾದ ನಾಯಕ ರಕ್ಷಣಾ ಕ್ಷೇತ್ರದಾದ್ಯಂತ ಚರ್ಚೆ ನಡೆಸುವ ನಿರೀಕ್ಷೆಯಿದ್ದು, ಇದಕ್ಕಾಗಿ ರಾಜತಾಂತ್ರಿಕ ಅಡಿಪಾಯ ಹಾಕುವ ಕೆಲಸ ಈಗಾಗಲೇ ನಡೆಯುತ್ತಿದೆ,(ಏಜೆನ್ಸೀಸ್).