Rahul Gandhi with pet dog Noorie  
ದೇಶ

ಅಮ್ಮನ ಫೇವರಿಟ್​ ಶ್ವಾನದ ಜೊತೆಗೆ ಕಾಣಿಸಿಕೊಂಡ ರಾಹುಲ್​ ಗಾಂಧಿ; ಪ್ರಾಣಿಗಳ ಬಗ್ಗೆ ಹೇಳಿದ್ದಿಷ್ಟು..Rahul Gandhi with pet dog Noorie

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು  ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಬಲು ಇಷ್ಟದ ನೂರಿ ಹೆಸರಿನ ನಾಯಿಯೊಂದಿಗೆ ಕಾಣಿಸಿಕೊಂಡು, ಮೂಕ ಪ್ರಾಣಿಗಳ ರಕ್ಷಣೆ, ಸುರಕ್ಷತೆ ಬಗ್ಗೆ ವಿಡಿಯೋ ಹಂಚಿಕೊಂಡಿರುವುದು ಸದ್ಯ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಜೆನ್​ಜಿಗಳಂತೆ ಆಸ್ಕ್​ಮಿ ಎನಿಥಿಂಗ್​ ಟಾಸ್ಕ್​ ಕೊಟ್ಟಿರುವ ಅವರು, ತಮಗೆ ಬಂದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸಿದ್ದಾರೆ. ಇನ್​ಸ್ಟಾ ಬಳಕೆದಾರರೊಬ್ಬರು, ನೀವೊಬ್ಬ ನಾಯಿಯ ಪೋಷಕರಾಗಿ ನಿಮಗೆ ಹೆಚ್ಚು ಇಷ್ಟವಾಗುವ ವಿಚಾರವೇನು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರಾಗಾ ಉತ್ತರಿಸಿದ್ದು ಹೀಗೆ..

ರಾಹುಲ್​ ಗಾಂಧಿ ಹೇಳಿದ್ದೇನು?

ನಾನು ನೂರಿಗೆ ಪೋಷಕನಲ್ಲ. ನಾನು ಎಲ್ಲ ಪ್ರಾಣಿಗಳನ್ನು ಇಷ್ಟಪಡುತ್ತೇನೆ. ಎಲ್ಲ ಪ್ರಾಣಿ ಜೊತೆ ಸ್ಪೇಸ್ ಹಂಚಿಕೊಳ್ಳುತ್ತೇನೆ. ನಮ್ಮೊಂದಿಗೆ ಇದ್ದಾರೆ ಎಂದರೆ ಅವರು ನಮ್ಮ  ಪ್ರೀತಿ  ಮತ್ತು ವಾತ್ಸಲ್ಯಕ್ಕೆ ಅರ್ಹರು ಎಂದು ನಾನು ಭಾವಿಸುತ್ತೇನೆ ಎಂದರು,. ಅದರತ್ತ ನೋಡಿದ ಅವರು, ನೂರಿ ನೀನು ನನ್ನ ಮಾತನ್ನು ಒಪ್ಪುತ್ತೀಯಾ ಎಂದು ಕೇಳಿದರು. 
ನೂರಿ ನನ್ನ ಅಮ್ಮನ ಶ್ವಾನ, . ನಾನು ಅವಳನ್ನು ವೀಡಿಯೊದಲ್ಲಿ ಹಾಕಿದ್ದಕ್ಕೆ ನನ್ನ ಅಮ್ಮ ತುಂಬಾ ಕೋಪಗೊಳ್ಳಬಹುದು. ಇರಲಿ ನಾನದನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ  ನೂರಿ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಶ್ವಾನಕ್ಕೆ ಮೈಕ್ ಹಾಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನೂರಿ ಯಾವ ತಳಿಯ ನಾಯಿ

ನೂರಿ ಜ್ಯಾಕ್​ ರೆಸಲ್​​​ ಟೆರಿಯರ್​ ನಾಯಿಯಾಗಿದ್ದು ಇದನ್ನು ರಾಹುಲ್​ ಗಾಂಧಿ ಅವರು ತಮ್ಮ ಅಮ್ಮನ ಹುಟ್ಟುಹಬ್ಬದ ದಿನ ಉಡುಗೊರೆಯಾಗಿ ಗೋವಾದಿಂದ ತರಿಸಿಕೊಟ್ಟಿದ್ದರು.  ಭೂಮಿ ಮೇಲಿನ ಪ್ರತಿಯೊಂದು ನಾಯಿಯು ಎಲ್ಲ ಪ್ರೀತಿ, ಗೌರವ ಹಾಗೂ ವಾತ್ಸಲ್ಯಕ್ಕೆ ಅರ್ಹವಾಗಿದೆ ಎಂದು ಕೊನೆಯಲ್ಲಿ ರಾಹುಲ್​ ಗಾಂಧಿಯವರು ಧನ್ಯವಾದ ಹೇಳಿದರು, (ಏಜೆನ್ಸೀಸ್).