ಬಸವಕಲ್ಯಾಣ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಫ್ಟಿಕೆ ಮತ್ತು ಎಚ್2ಎಸ್ ವೈಲ್ಸ್ ಪರೀಕ್ಷೆ ಮಾಡುವ ತರಬೇತಿ ನೀಡಲಾಯಿತು. ತಾಪಂ ಇಒ ರಮೇಶ ಸೆಲ್ಫಿ ಇದ್ದರು.
- ಇಒ ರಮೇಶ ಸೆಲ್ಫಿ ಸೂಚನೆ
- ಬಸವಕಲ್ಯಾಣದಲ್ಲಿ ತರಬೇತಿ
ಬಸವಕಲ್ಯಾಣ: ಒಂದು ಗ್ರಾಮಕ್ಕೆ ಕನಿಷ್ಠ 2ರಂತೆ ನೀರಿನ ಮಾದರಿ ಗ್ರಾಪಂ ಮಟ್ಟದಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ಸಿಬ್ಬಂದಿಗೆ ತಾಪಂ ಇಒ ರಮೇಶ ಸೆಲ್ಫಿ ಸೂಚಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಫ್ಟಿಕೆ ಮತ್ತು ಎಚ್ 2ಎಸ್ ವೈಲ್ಸ್ ಪರೀೆ ಮಾಡುವ ತರಬೇತಿ ಮತ್ತು ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ ಎಲ್ಲ ಕುಡಿಯುವ ನೀರಿನ ಮೂಲಗಳು, ಅಂಗನವಾಡಿ ಕೇಂದ್ರ ಮತ್ತು ಶಾಲೆಗಳಿಗೆ ಪೂರೈಸುವ ನೀರು ಜಲ ಸಂಗ್ರಹಾಗಾರಗಳು ಈ ಮಹತ್ವದ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಹರ್ ರ್ ಜಲ್ ಘೋಷಣೆಯಾಗಿರುವ ಪ್ರಮಾಣಿಕೃತ ಗ್ರಾಮಗಳಿಗೆ ಸರಬರಾಜು ಆಗುವ ನೀರಿನ ಮಾದರಿಗಳ ಗುಣಮಟ್ಟವು ಸರಿ ಇರುವುದನ್ನು ಖಚಿತ ಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದ್ದರಿಂದ ನೀರಿನ ಗುಣಮಟ್ಟದ ಪರೀೆಗಳನ್ನು ಕೈಗೊಳ್ಳಲು ಗ್ರಾಪಂ ಮಟ್ಟದಲ್ಲಿ ಜೂ.10ರವರೆಗೆ ತಮ್ಮ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮ, ಜನವಸತಿ ಪ್ರದೇಶದ ನೀರಿನ ಮೂಲ ಮಾದರಿಗಳನ್ನು ಸಂಗ್ರಹಿಸಿ ಗ್ರಾಪಂ ಮಟ್ಟದಲ್ಲಿ ಉಪಯೋಗಿಸಿ ಗುಣಮಟ್ಟದ ಪರೀೆಗಳನ್ನು ಕೈಗೊಳ್ಳಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪೂಜಾ ಹಾಗೂ ಹರ್ಷವರ್ಧನ ತರಬೇತಿ ನೀಡಿದರು. ತಾಪಂನ ಮಹ್ಮದ್ ಸಲೀಂ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.