ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ 1983 ವಿನ್ನಿಂಗ್​ ಪಾರ್ಟಿ ಬಿಲ್​ 
ದೇಶ

ಅಂದು ದುಬಾರಿ ಮದ್ಯ, ಸಿಗರೇಟ್​ ಸೇದಿದ್ದು ನಿಜವೇ? 1983 ರ ವಿಶ್ವಕಪ್​ ವಿನ್ನಿಂಗ್​ ಪಾರ್ಟಿಯಲ್ಲಿ ನಡೆದಿದ್ದೇನು? ವೈರಲ್​ ಬಿಲ್​ನ ಅಸಲಿ ಸತ್ಯವೇನು? 1983 WorldCup Viral Bill

ಪ್ರಮುಖ ಮುಖ್ಯಾಂಶಗಳು

  • ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ 1983 ವಿನ್ನಿಂಗ್​ ಪಾರ್ಟಿ ಬಿಲ್​
  • ದುಬಾರಿ ಮದ್ಯ, ಇಂಪೋರ್ಟೆಡ್​ ಸಿಗರೇಟ್​ ಸೇರಿ ಮುಟನ್​, ಚಿಕನ್​ ತಿನ್ನಲಾಗಿದೆ ಎನ್ನುತ್ತಿರುವ ಬಿಲ್​
  • ಬಿಲ್​ ಪಾವತಿ ಮಾಡಿದ್ದಾಗಿ ಕಪಿಲ್​ ದೇವ್​ ಸಹಿ
  • ಅದರೆ ಇದೊಂದು ಸುಳ್ಳು ಬಿಲ್​ ಎಂದ ಕೀರ್ತಿ ಆಜಾದ್​
  • ನಾವು ಆ ಹೋಟೆಲ್​ನಲ್ಲಿ ತಂಗಿರಲಿಲ್ಲ; ಕಪಿಲ್​ ಸಹಿ ಸಹ ತಪ್ಪಾಗಿದೆ
  • ಇದೊಂದು ಕೃತಕ ಬುದ್ಧಿಮತ್ತೆ ನಿರ್ಮಿತ ಬಿಲ್​
ನವದೆಹಲಿ: ಇತ್ತೀಚಿಗೆ ಈ ಕೃತಕ ಬುದ್ದಿಮತ್ತೆ (AI) ಬಳಕೆ ಅಧಿಕವಾದ ದಿನದಿಂದ ಯಾವ ಮಾಹಿತಿ ನಿಜ? ಯಾವುದು ಸುಳ್ಳೆಂದು ತಿಳಿಯುವುದು ಕಷ್ಟಕರವಾಗುತ್ತಾ ಹೋಗುತ್ತಿದೆ ಎಂದರೆ ಸುಳ್ಳಲ್ಲ.
ಏಕೆಂದರೆ, ಕೆಲದಿನಗಳ ಹಿಂದೆ 1983 ರಲ್ಲಿ ಲಂಡನ್​ನಲ್ಲಿ ಚೊಚ್ಚಲ ವಿಶ್ವಕಪ್​ ಗೆದ್ದಿದ್ದ ಭಾರತ ತಂಡದ ಆಟಗಾರರು ಲಂಡನಿನ ಹೋಟೆಲ್​​ವೊಂದರಲ್ಲಿ ಮಾಡಿದ್ದ ಪಾರ್ಟಿ ಬಿಲ್​ (1983 WorldCup Viral Bill) ಸೋಷಿಯಲ್​ ಮೀಡಿಯಾನಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಈಗ ಈ ವೈರಲ್​ ಬಿಲ್​ ಕೃತಕ ನಿರ್ಮಿತ ಎಂಬ ಮಾಹಿತಿ ದೊರೆತಿದ್ದು, ಯಾವ ಮಾಹಿತಿಯನ್ನು ನಂಬಬೇಕು? ಯಾವುದನ್ನು ನಂಬಬಾರದು ಎಂಬ ಇಕ್ಕಟ್ಟಿನಲ್ಲಿ ಜನ ಸಿಲುಕಿರುವುದು ಸತ್ಯವಾಗಿದೆ.

ಬಿಲ್​ನಲ್ಲಿ ಏನೇನಿತ್ತು?

1983 ರಲ್ಲಿ ಕಪಿಲ್​ ದೇವ್​ ನೇತೃತ್ವದ ಭಾರತ ತಂಡ ದೈತ್ಯ ವೆಸ್ಟ್​ ಇಂಡೀಸ್​ ತಂಡವನ್ನು ಸೋಲಿಸಿ ಚೊಚ್ಚಲ ಏಕದಿನ ವಿಶ್ವಕಪ್​ನ್ನು ತನ್ನದಾಗಿಸಿಕೊಂಡಿತ್ತು.
ವೈರಲ್​ ಆಗುತ್ತಿರುವ ಬಿಲ್​ನಲ್ಲಿ ಗ್ರಾಸ್​ವೋವರ್​ ಎಂಬ ಹೋಟೆಲ್​ನಲ್ಲಿ ಟೀ ಇಂಡಿಯಾದ ಸದಸ್ಯರು, 25/6/1983 ರಂದು ದುಬಾರಿ ಮದ್ಯಗಳು, ಬಿಯರ್​ಗಳು, ಸಿಗರೇಟ್​ ಜೊತೆಗೆ ಮಟನ್​, ಚಿಕನ್​ ಹಾಗೂ ಸಮುದ್ರ ಜೀವಿಗಳನ್ನು ಸೇವಿಸಿದ್ದಾಗಿ ಹಾಗೂ ಇದರ ಬಿಲ್​ನ್ನು ತಂಡದ ನಾಯಕ ಕಪಿಲ್​ ದೇವ್​ ನೀಡಿರುವುದಾಗಿ ಪೋಸ್ಟ್​ವೊಂದು ಹಂಚಿಕೆಯಾಗುತ್ತಿದೆ.

ಇದು ಶುದ್ಧ ಸುಳ್ಳೆಂದ ಕೀರ್ತಿ ಆಜಾದ್​!

ಈ ಪೋಸ್ಟ್ ವೈರಲ್​ ಆಗುತ್ತಿರುವಂತೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ 1983 ಭಾರತದ ತಂಡದ ಆಟಗಾರ ಕೀರ್ತಿ ಆಜಾದ್​, ಈ ಬಿಲ್​ ಕೃತಕ ಬುದ್ಧಿಮತ್ತೆ ಸಹಾಯದಿಂದ ರಚಿತವಾಗಿದೆ, ಅಸಲಿಗೆ ನಾವು ಈ ಹೋಟೆಲ್​ನಲ್ಲಿ ವಾಸವೇ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಕಪಿಲ್​ ದೇವ್​ನ ಸಹಿ ಸಹ ತಪ್ಪಾಗಿದೆ ಎಂದು ಅವರು ಹೇಳಿದ್ದಾರೆ.
ನಾವು 25/06/1983 ರಂದು ವಿಶ್ವಕಪ್​ ಗೆದ್ದಿದ್ದವು ನಮ್ಮ ಪಾರ್ಟಿ ಮಾರನೇ ದಿನದವರೆಗೆ ನಡೆದಿತ್ತು. ಆದರೆ ನಾವು ಈ ಗ್ರಾಸ್​ವೋವರ್​ ಹೋಟೆಲ್​ನಲ್ಲಿ ಅಲ್ಲ, ವೆಸ್ಟ್‌ಮೋರ್‌ಲ್ಯಾಂಡ್ ಎಂಬ ಹೋಟೆಲ್​ನಲ್ಲಿ ತಂಗಿದ್ದವೆಂದು ಕೀರ್ತಿ ಹೇಳಿದ್ದಾರೆ, (ಏಜನ್ಸೀಸ್​).