CDS Anil Chauhan | ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್
ಹೈದರಬಾದ್: ಯುದ್ಧಗಳನ್ನು ಕೇವಲ ವಾಕ್ಚಾತುರ್ಯದಿಂದ ಗೆಲ್ಲಲು ಸಾಧ್ಯವಿಲ್ಲ, ಬದಲಿಗೆ ಸ್ಪಷ್ಟ, ಉದ್ದೇಶಪೂರ್ವಕ ಕ್ರಮಗಳಿಂದ ಜಯಿಸಬಹುದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್(CDS Anil Chauhan) ಶನಿವಾರ (ಡಿ.13) ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ನೀಡಿದ್ದಾರೆ.
ಈ ಬಗ್ಗೆ ದುಂಡಿಗಲ್‌ನ ವಾಯುಪಡೆ ಅಕಾಡೆಮಿಯಲ್ಲಿ ಶರತ್ಕಾಲದ ಸಂಯೋಜಿತ ಪದವಿ ಪರೇಡ್‌ನಲ್ಲಿ ಮಾತನಾಡಿದ ಚೌಹಾಣ್, ಸಿಡಿಎಸ್ ಪಾಕಿಸ್ತಾನದ ಖಾಲಿ ಮಾತುಗಳು ಮತ್ತು ಸಾಂಕೇತಿಕ ಸನ್ನೆಗಳನ್ನು ಖಂಡಿಸಿದ್ದು, ಯುದ್ಧಗಳನ್ನು ವಾಕ್ಚಾತುರ್ಯದಿಂದ ಗೆಲ್ಲಲು ಸಾಧ್ಯವಿಲ್ಲ. ಆದರೆ ಉದ್ದೇಶಪೂರ್ವಕ ಕ್ರಿಯೆಯಿಂದ ಗೆಲ್ಲಬಹುದು ಎಂದಿದ್ದಾರೆ. ಸೇನೆಯ ನಿಜವಾದ ಶಕ್ತಿ ಶಿಸ್ತು, ಯೋಜನೆ ಮತ್ತು ನಿರ್ಣಾಯಕ ಕ್ಷಣಗಳಲ್ಲಿ ತಗೆದುಕೊಳ್ಳುವ ನಿರ್ಧಾರಗಳ ಅನುಷ್ಠಾನದಿಂದ ಬರುತ್ತದೆ.
ಮುಂದುವರೆದು ಮಾತನಾಡಿದ ಚೌಹಾಣ್, ದುರ್ಬಲ ಸಂಸ್ಥೆಗಳು ಮತ್ತು ಪ್ರತಿಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆಯಿಂದ ಉಂಟಾಗುವ ಅಸ್ಥಿರತೆಯನ್ನು ಪ್ರಪಂಚದಾದ್ಯಂತ ಅನೇಕ ಪ್ರದೇಶಗಳಲ್ಲಿ ನೋಡುತ್ತಿವೆ. ಇಂತಹ ಸೂಕ್ಷ್ಮತೆಯು ಪಾಕ್ನಲ್ಲಿ ಕಾಣುತ್ತಿದೆ. ನೆರೆಯ ದೇಶವು ದೀರ್ಘಕಾಲದ ಸಂಘರ್ಷ ಮತ್ತು ಅಭದ್ರತೆಗೆ ಕಾರಣವಾಗುತ್ತದೆ. ನಮ್ಮ ಸುತ್ತಲೂ ನಾವು ಸಾಂಸ್ಥಿಕ ದುರ್ಬಲತೆ ಮತ್ತು ಪ್ರತಿಕ್ರಿಯಾತ್ಮಕ ಹೊಂದಾಣಿಕೆಗಳನ್ನು ಸೂಚಿಸುವ ಬೆಳವಣಿಗೆಗಳನ್ನು ಹೆಚ್ಚಾಗಿ ನೋಡುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಬಲವು ದೃಢವಾದ ಸಂಸ್ಥೆಗಳು, ಪ್ರಜಾಪ್ರಭುತ್ವ ಸ್ಥಿರತೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಅಚಲ ವೃತ್ತಿಪರತೆಯ ಮೇಲೆ ನಿಂತಿದೆ ಎಂದು ತಿಳಿಸಿದ್ದಾರೆ.
ಈ ಜಾಗತಿಕ ಚಿತ್ರಣವನ್ನು ವ್ಯತಿರಿಕ್ತವಾಗಿ ವಿವರಿಸಿದ ಜನರಲ್ ಚೌಹಾಣ್, ಭಾರತದ ಶಕ್ತಿಯು ಪ್ರಜಾಪ್ರಭುತ್ವ ಸ್ಥಿರತೆಯಲ್ಲಿದೆ. ಅಲ್ಲದೆ, ಸಶಸ್ತ್ರ ಪಡೆಗಳ ಅಚಲ ವೃತ್ತಿಪರತೆ ಮತ್ತು ಕರ್ತವ್ಯ ಬದ್ಧತೆಯನ್ನು ಅವರು ಶ್ಲಾಘಿಸಿದ್ದಾರೆ. ನಮ್ಮ ಸೇನೆಯು ರಾಷ್ಟ್ರೀಯ ಭದ್ರತೆಯ ಬೆನ್ನೆಲುಬು ಎಂದು ಬಣ್ಣಿಸಿದರು. ಭಾರತೀಯ ಸೇನೆಯ ವಿಶ್ವಾಸಾರ್ಹತೆಯು ಬಲವಾದ ಮೌಲ್ಯಗಳು ಮತ್ತು ಸಾಂಸ್ಥಿಕ ಶಿಸ್ತಿನಲ್ಲಿ ಬೇರೂರಿರುವಾಗ ಹೊಂದಿಕೊಳ್ಳುವ ಸಾಮರ್ಥ್ಯದಿಂದ ಬರುತ್ತದೆ ಎಂದಿದ್ದಾರೆ.
ಹೊಸದಾಗಿ ನಿಯೋಜಿತ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಚೌಹಾಣ್, ಆಪರೇಷನ್ ಸಿಂಧೂರ ನಡೆಯುತ್ತಿರುವ ನಿರ್ಣಾಯಕ ಸಮಯದಲ್ಲಿ ಇವರು ಸಶಸ್ತ್ರ ಪಡೆಗಳಿಗೆ ಸೇರುತ್ತಿದ್ದಾರೆ. ಪ್ರಸ್ತುತ ಭದ್ರತಾ ವಾತಾವರಣವು ಭಾರತದ ಮಿಲಿಟರಿ ನಾಯಕತ್ವದಿಂದ ನಿರಂತರ ಸಿದ್ಧತೆ ಮತ್ತು ವೃತ್ತಿಪರತೆಯನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂಧೂರ ನಡೆಯುತ್ತಿದೆ: ಸಿಡಿಎಸ್
ಆಪರೇಷನ್ ಸಿಂಧೂರ ನಡೆಯುತ್ತಿರುವಾಗ ನೀವು ಸೇನೆ ಪಡೆಗೆ ಸೇರುತ್ತಿದ್ದೀರಿ. ನಿಮ್ಮ ಹೆಗಲ ಮೇಲಿನ ಜವಾಬ್ದಾರಿ ತಕ್ಷಣ ಮತ್ತು ನೈಜವಾಗಿರುತ್ತದೆ ಎಂದು ಸಿಡಿಎಸ್ ತಿಳಿಸಿದ್ದಾರೆ.
ಆಧುನಿಕ ಮಿಲಿಟರಿ ಸೇವೆಯು ಬಿಕ್ಕಟ್ಟಿನ ಪ್ರತ್ಯೇಕ ಕ್ಷಣಗಳಿಂದ ವ್ಯಾಖ್ಯಾನಿಸಲ್ಪಡುವುದಿಲ್ಲ. ಬದಲಾಗಿ ನಿರಂತರ ಸನ್ನದ್ಧತೆಯಿಂದ ವ್ಯಾಖ್ಯಾನಿಸಲ್ಪಡುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಜಾಗರೂಕತೆ ಮತ್ತು ಚುರುಕುತನವು ಸಾಂದರ್ಭಿಕ ಪ್ರತಿಕ್ರಿಯೆಗಳಿಗಿಂತ ದೈನಂದಿನ ಅಭ್ಯಾಸಗಳಾಗಬೇಕು ಎಂದು ಸಿಡಿಎಸ್ ಹೇಳಿದ್ದಾರೆ,(ಏಜೆನ್ಸೀಸ್).