ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬುಧವಾ ಭೀಕರ ಕುಸಿತ ಕಂಡುಬಂದಿದೆ. ಬುಧಾವರ ಬೆಳಗ್ಗೆ ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದ ಹಿನ್ನೆಲೆ, ಕಚ್ಚಾ ತೈಲ ಬೆಲೆಗಳಲ್ಲಿನ ಹೆಚ್ಚಳ ಮತ್ತು ವಿದೇಶಿ ನಿಧಿಯ ನಿರಂತರ ಹೊರಹರಿವಿನ ಮಧ್ಯೆ ಷೇರು ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್(Sensex points) ಸುಮಾರು 1,000 ಪಾಯಿಂಟ್‌ಗಳ ಕುಸಿತ ಕಂಡಿದೆ.
ಬುಧವಾರ ಬೆಳಿಗ್ಗೆ 11:15ರ ಸುಮಾರಿಗೆ, ಸೆನ್ಸೆಕ್ಸ್ 73,697 ಕ್ಕೆ ವಹಿವಾಟು ನಡೆಸುತ್ತಿತ್ತು, ಇದು ಹಿಂದಿನ 74,649.84 ಕ್ಕಿಂತ ಸುಮಾರು 1,000 ಪಾಯಿಂಟ್‌ಗಳ ಕುಸಿತ ಕಂಡಿದೆ. ನಿಫ್ಟಿ 50 ಸೂಚ್ಯಂಕದಲ್ಲೂ 177.40 ಅಂಕಗಳ ಕುಸಿತದೊಂದಿಗೆ 23,302.50 ಅಂಶಗಳಿಗೆ ತಲುಪಿದೆ.
ಬಿಎಸ್‌ಇಯ 30 ಷೇರು ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 699.74 ಪಾಯಿಂಟ್‌ಗಳ ಕುಸಿತದೊಂದಿಗೆ 73,959.48 ಕ್ಕೆ ತಲುಪಿದೆ. ಸೆನ್ಸೆಕ್ಸ್‌ನ 30 ಕಂಪನಿಗಳಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಐಟಿಸಿ ಮತ್ತು ಎಟರ್ನಲ್ ಆರಂಭಿಕ ವಹಿವಾಟಿನಲ್ಲಿ ದೊಡ್ಡ ಹಿನ್ನಡೆ ಅನುಭವಿಸಿವೆ.
ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?
ಅಮೆರಿಕ ಇರಾನ್ ಕೇಶ್ಮೆ ದ್ವೀಪದ ಮೇಲೆ ದಾಳಿ ಮಾಡಿದ ಬಳಿಕ ಪ್ರತಿಯಾಗಿ ಇರಾನ್ ಕುವೈತ್ ಮತ್ತು ಬಹ್ರೇನ್ ಕಡೆಗೆ ಕ್ಷಿಪಣಿಗಳನ್ನು ಹಾರಿಸಿದ ನಂತರ ಷೇರು ಮಾರುಕಟ್ಟೆ ಕುಸಿತ ಕಂಡುಬಂದಿದೆ. ಇದು ಯುಎಸ್-ಇಸ್ರೇಲ್ ಜೊತೆಗಿನ ಯುದ್ಧವನ್ನು ಪುನರಾರಂಭಿಸುವ ಭಯವನ್ನು ಹುಟ್ಟುಹಾಕಿದೆ.
ಪ್ರಸ್ತುತ ಕದನ ವಿರಾಮದ ಅಡಿಯಲ್ಲಿ ಶಾಶ್ವತ ಶಾಂತಿ ಒಪ್ಪಂದಕ್ಕೆ ಅಮೆರಿಕ & ಇರಾನ್ ಎರಡೂ ದೇಶಗಳು ಮುಂದಾಗಿದ್ದರೂ, ಪರಸ್ಪರ ಷರತ್ತುಗಳಲ್ಲಿ ಹಿಂದೆ ಸರಿಯದ ಕಾರಣ ಹಲವು ಮಾತುಕತೆಗಳು ವಿಫಲಗೊಂಡಿವೆ.
ಇನ್ನೂ ಪಶ್ಚಿಮ ಏಷ್ಯಾದಲ್ಲಿ ಮುಂದುವರೆದ ಸಂಘರ್ಷದಿಂದ ಮತ್ತೆ ಬ್ರೆಂಟ್ ಕಚ್ಚಾ ತೈಲದ ಬೆಲೆಯನ್ನು 97 ಡಾಲರ್‌ಗೆ ತಲುಪಿದೆ, ಇದು ಇಂಧನ ಆಘಾತದಿಂದ ಭಾರತಕ್ಕೆ ಯಾವುದೇ ವಿಶ್ರಾಂತಿ ಇಲ್ಲ ಎಂದು ಸೂಚಿಸುತ್ತದೆ ಎನ್ನಲಾಗಿದೆ. ಅಲ್ಲದೇ ಡಾಲರ್ ವಿರುದ್ಧ ರೂಪಾಯಿ 95.26 ಕ್ಕೆ ಇಳಿದಿದೆ. ರೂಪಾಯಿಯಲ್ಲಿನ ನಿರಂತರ ಕುಸಿತವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಆದರೆ ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆ ಮತ್ತು ನಿರಂತರ FPI ಹೊರಹರಿವು ಕಳವಳಕಾರಿ ಎನ್ನಲಾಗಿದೆ (ಏಜೆನ್ಸೀಸ್).