India win’| ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಹರ್ಷಿತ್ ರಾಣಾ 
ದೇಶ

ವಿರಾಟ್, ಕುಲದೀಪ್ ಆರ್ಭಟಕ್ಕೆ ನಲುಗಿದ ಹರಿಣಗಳು; ಭಾರತಕ್ಕೆ 17 ರನ್​ಗಳ ಭರ್ಜರಿ ಜಯ | India win

ರಾಂಚಿ: ಜಾರ್ಖಂಡ್​ನ ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತವು(India win) ದಕ್ಷಿಣ ಅಫ್ರಿಕಾವನ್ನು 17 ರನ್​​ಗಳಿಂದ ಸೋಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಪಡೆದುಕೊಂಡಿದೆ,
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರ ಪಡೆ, ಟೀಮ್ ಇಂಡಿಯಾಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಕ್ರೀಸ್​ಗೆ ಬಂದ ಆರಂಭಿಕ ಬ್ಯಾಟರ್​ಗಳ ಪೈಕಿ ಯಶಸ್ವಿ ಜೈಸ್ವಾಲ್ (18 ರನ್​)​ ಹೆಚ್ಚು ಸಮಯ ಕ್ರೀಸ್​ಗೆ ಅಂಟದೆ, ಪೆವಿಲಿಯನ್​ ಹಾದಿ ಹಿಡಿದರು. ಮೊದಲ ವಿಕೆಟ್​ ಪತನದ ಬೆನ್ನಲ್ಲೇ ಅಖಾಡಕ್ಕಿಳಿದ ವಿರಾಟ್​ ಕೊಹ್ಲಿ, ಹಿಟ್​ಮ್ಯಾನ್​ಗೆ ಉತ್ತಮ ಸಾಥ್​ ನೀಡಿದರು. ರೋಹಿತ್​ (57 ರನ್) ಗಳಿಸಿ ಮಾರ್ಕೊ ಜಾನ್ಸೆನ್ ವಿಕೆಟ್​ ಒಪ್ಪಿಸಿದ್ದರು. ನಂತರ ವಿರಾಟ್​ ಕೊಹ್ಲಿಯ ಶತಕದಾಟದಿಂದ (133* ರನ್​, 115 ಎಸೆತ) ನಿಗದಿತ 50 ಓವರ್​​ ಅಂತ್ಯಕ್ಕೆ ಟೀಮ್ ಇಂಡಿಯಾ 8 ವಿಕೆಟ್​ ಕಳೆದುಕೊಂಡು 349 ರನ್​ ಕಲೆಹಾಕಿತ್ತು,
ಬೃಹತ್​ ಗುರಿ ಬೆನ್ನಟ್ಟಿದ ಹರಿಣಗಳಿಗೆ ಬ್ಯಾಟಿಂಗ್ ಬೇಗನೆ ವಿಫಲವಾಯಿತು. ಆರಂಭದಲ್ಲಯೇ ವೇಗದ ಬೌಲರ್​ ಹರ್ಷಿತ್ ರಾಣಾ ರಯಾನ್ ರಿಕಲ್ಟನ್ ಮತ್ತು ಕ್ವಿಂಟನ್ ಡಿ ಕಾಕ್​ರನ್ನು ಸತತವಾಗಿ ಔಟ್ ಮಾಡಿದರು. ಅಲ್ಲದೆ, ಅರ್ಶ್ದೀಪ್ ಸಿಂಗ್ ಹರಿಣಗಳ ನಾಯಕ ಐಡೆನ್ ಮಾರ್ಕ್ರಮ್​ರನ್ನು ಪೆವಿಲಿಯನ್​ಗಟ್ಟಿದರು. ನಂರತ ಬಂದ ಡೆವಾಲ್ಡ್ ಬ್ರೆವಿಸ್ 37 ರನ್ ಗಳಿಸಿದರು.
ನಂತರ ಮ್ಯಾಥ್ಯೂ ಬ್ರೀಟ್ಜ್ಕೆ ಮತ್ತು ಮಾರ್ಕೊ ಜಾನ್ಸೆನ್ ನಡುವಿನ ಜತೆಯಾಟವು ದಕ್ಷಿಣ ಆಫ್ರಿಕಾದ ಭರವಸೆಯನ್ನು ಸ್ವಲ್ಪ ಸಮಯದವರೆಗೆ ಜೀವಂತವಾಗಿಟ್ಟರು. ಹರಿಣಗಳ ಪರವಾಗಿ ಬ್ರೀಟ್ಜ್ಕೆ ಅವರ 72 ಮತ್ತು ಜಾನ್ಸೆನ್ ಅವರ 70 ರನ್‌ಗಳಿಸಿ ಔಟ್​ ಆದರು. ಕೊನೆಗೆ 332 ರನ್​ಗಳಿಗೆ ಸರ್ವಪತನ ಕಂಡಿತು.
ಭಾರತದ ಪರವಾಗಿ ಕುಲದೀಪ್ ಯಾದವ್ 4 ವಿಕೆಟ್​, ಹರ್ಷಿತ್ ರಾಣಾ 3 ವಿಕೆಟ್​ ಮತ್ತು ಅರ್ಶ್ದೀಪ್ ಸಿಂಗ್ 2 ವಿಕೆಟ್​ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು,(ಏಜೆನ್ಸೀಸ್).