RCB vs GT: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕಲ್ ಭರ್ಜರಿ ಬ್ಯಾಟಿಂಗ್ನಿಂದ 5 ವಿಕೆಟ್ಗಳ ಅಂತರದಿಂದ ಆರ್‌ಸಿಬಿ ಗೆದ್ದು ಬೀಗಿದೆ.
ಜೇಕಬ್ ಬೆಥೆಲ್ ಅವರೊಂದಗೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಅವರು ಎದುರಾಳಿ ಬೌಲರ್ ಗಳ ಬಾಲ್ಗಳನ್ನು ಮನಸೋ ಇಚ್ಛೆ ದಂಡಿಸಿದರು. 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 81ರನ್ ಗಳಿಸಿ ಔಟಾದರು. ಪಡಿಕಲ್ ಸಹ 27 ಎಸೆತಗಳಲ್ಲಿ 55 ರನ್ಗಳಿಸಿ 206ರನ್ಗ ಗುರಿಯನ್ನು ತಲುಪಿ ತಂಡದ ಗೆಲುವಿಗೆ ಕಾರಣರಾದರು.
ವಿರಾಟ್ ಕೊಹ್ಲಿ ದಾಖಲೆ
ಇದೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿರು ಕೊಹ್ಲಿ, ಈಗ ಐಪಿಎಲ್‌ನಲ್ಲಿ 800 ಬೌಂಡರಿಗಳನ್ನು ಹೊಡೆದ ಮೊದಲ ಬ್ಯಾಟ್ಸ್‌ಮನ್ ಮತ್ತು ಒಂದೇ ಫ್ರಾಂಚೈಸಿಗೆ 300 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಈ ಮೊದಲು ಈ ಸಾಧನೆಯನ್ನು ಆರ್ಸಿಬಿಯ ಖ್ಯಾತ ಆಟಗಾರನಾಗಿದ್ದ ಕ್ರಿಸ್ ಗೇಲ್ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಮಾತ್ರ ಮಾಡಿದ್ದರು. ಇದೀಗ ಅವರ ಸಾಲಿಗೆ ಮೂರನೇಯವರಾಗಿ ವಿರಾಟ್ ಕೊಹ್ಲಿ ಅವರು ಸೇರ್ಪಡೆಗೊಂಡಿದ್ದಾರೆ.
ಸಾಯಿ ಸುದರ್ಶನ್ ಹೋರಾಟ ವ್ಯರ್ಥ
ಇನ್ನೂ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡವು, ಸಾಯಿ ಸುದರ್ಶನ್ ಅವರ ಭರ್ಜರಿ ಶತಕದಾಟದಿಂದ 20 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 205ರನ್ ಗಳಿಸಿತ್ತು. ಶುಭಮನ್ ಗಿಲ್ ಅವರೊಂದಿಗೆ ಆರಂಭಿಕರಾಗಿ ಆಟ ಆರಂಭಿಸಿದ ಸುದರ್ಶನ್, ಕೇವಲ 58 ಎಸೆತಗಳಲ್ಲಿ 100 ರನ್ ಗಳಿಸಿದರು. 11 ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು. 128 ರನ್‌ಗಳ ಜೊತೆಯಾಟ ನಡೆಸಿ ತಂಡ ಬೃಹತ್ ರನ್ಗಳಿಸಲು ಸಹಾಯ ಮಾಡಿದರು.
ಐಪಿಎಲ್‌ನಲ್ಲಿ ಅತ್ಯಂತ ವೇಗದಲ್ಲಿ 2,000 ರನ್ ಪೂರೈಸಿದ ಅತ್ಯಂತ ವೇಗದ ಆಟಗಾರ ಎಂಬ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು. ಜೊತೆಗೆ ಆರ್‌ಸಿಬಿ ವಿರುದ್ಧ ಐಪಿಎಲ್‌ನಲ್ಲಿ ಶತಕ ಗಳಿಸಿದ 14 ನೇ ಬ್ಯಾಟ್ಸ್‌ಮನ್ ಆದರು.
ಪಂದ್ಯದ ಮುಖ್ಯಾಂಶಗಳು
ಆರ್‌ಸಿಬಿ ಮೊತ್ತ: 206/5 (18.5 ಓವರ್)
ಮುಂಬೈ ಮೊತ್ತ: 205/03 (20 ಓವರ್)