Virat Kohli 
ದೇಶ

ಹೊಸ ಉದ್ಯಮಕ್ಕೆ 40 ಕೋಟಿ ರೂ. ಹೂಡಿಕೆ ಮಾಡಿದ ವಿರಾಟ್ ​ಕೊಹ್ಲಿ! ಏನಿದು ಕಿಂಗ್​ನ ನ್ಯೂ ಬಿಸಿನೆಸ್​​?

ಮುಂಬೈ: ಭಾರತೀಯ ತಂಡದ ರನ್​​ ಮಷಿನ್​ ವಿರಾಟ್​ ಕೊಹ್ಲಿ ಭಾರತೀಯ ಕ್ರೀಡಾ ಉಡುಪುಗಳ ಸ್ಟಾರ್ಟ್ಅಪ್ ಅಜಿಲಿಟಾಸ್ ಸ್ಪೋರ್ಟ್ಸ್ ಜೊತೆಗಿನ ಪಾಲುದಾರಿಕೆಯನ್ನು ಸೋಮವಾರ ಘೋಷಿಸಿದ್ದಾರೆ. ಅಲ್ಲದೇ, ಅಜಿಲಿಟಾಸ್‌ನಲ್ಲಿ 40 ಕೋಟಿ ರೂ. ಹೂಡಿಕೆ ಮಾಡುವ ಹಿನ್ನೆಲೆ ಕೊಹ್ಲಿ, ಪೂಮಾ ಜೊತೆಗಿನ ತಮ್ಮ ದೀರ್ಘಕಾಲದ ಸಂಬಂಧವನ್ನು(ಒಪ್ಪಂದ) ಕೊನೆಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಹೌದು, ಜರ್ಮನ್ ಸ್ಪೋರ್ಟ್ಸ್ ಜೈಂಟ್ ಪುಮಾದ 8 ವರ್ಷಗಳ ಒಪ್ಪಂದದ ಕೊನೆಗೊಂಡ ಬಳಿಕ, ಕೊಹ್ಲಿ ಭಾರತೀಯ ಸ್ಟಾರ್ಟ್‌ಅಪ್ ಅಗಿಲಿಟಾಸ್ ಸ್ಪೋರ್ಟ್ಸ್‌ಗೆ (Agilitas Sports) 40 ಕೋಟಿ ರೂಪಾಯಿ ಹೂಡಿಕೆ ಮಾಡಿ, ಈ ಡೀಲ್‌ನ ಭಾಗವಾಗಿ, ಅಗಿಲಿಟಾಸ್ 'ವನ್8' ಬ್ರ್ಯಾಂಡ್ ಅನ್ನು ಖರೀದಿಸಿದ್ದು, ಇದು ಕೊಹ್ಲಿಯ ಬ್ರ್ಯಾಂಡ್‌ಗೆ ಗ್ಲೋಬಲ್ ಎಕ್ಸ್‌ಪ್ಯಾನ್ಷನ್‌ಗೆ ಹೊಸ ವೇದಿಕೆಯಾಗಿದೆ.
ಕೊಹ್ಲಿ, 2017ರಲ್ಲಿ ಪುಮಾದೊಂದಿಗೆ 110 ಕೋಟಿ ರೂಪಾಯಿಯ ಎಂಡೋರ್ಸ್‌ಮೆಂಟ್ ಡೀಲ್ ಮಾಡಿದ್ದರು. ಈ ಒಪ್ಪಂದ 2025ರಲ್ಲಿ ಕೊನೆಗೊಂಡ ನಂತರ, ಪುಮಾ 300 ಕೋಟಿ ರೂಪಾಯಿಯ ರೀನ್ಯೂಯಲ್ ಆಫರ್ ನೀಡಿತ್ತು. ಆದರೆ, ಕೊಹ್ಲಿ ಅದನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಕೊಹ್ಲಿ, ಇದೀಗ ದೇಶದ ಸ್ಟಾರ್ಟ್‌ಅಪ್‌ಗೆ ಬೆಂಬಲ ನೀಡಿದ್ದಾರೆ.
ಇಂದು ನನ್ನ ಹೃದಯದಿಂದ ನೇರವಾಗಿ ಒಂದು ರೋಮಾಂಚಕಾರಿ ಸುದ್ದಿ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. one8 ಮತ್ತು Agilitas ಗೆ ಉದ್ದೇಶ ಮತ್ತು ಮಹತ್ವಾಕಾಂಕ್ಷೆಯಿಂದ ನಡೆಸಲ್ಪಡುವ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. one8 ಅನ್ನು Agilitas ಮನೆಗೆ ಕರೆದೊಯ್ಯುತ್ತದೆ" ಎಂದು ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಅಜಿಲಿಟಾಸ್ ಸ್ಪೋರ್ಟ್ಸ್ ಎಂಬುದು ಪೂಮಾ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಅಭಿಷೇಕ್ ಗಂಗೂಲಿ ಅವರು ಸಹ-ಸ್ಥಾಪಿಸಿದ ಕ್ರೀಡಾ ಉಡುಪುಗಳ ಸ್ಟಾರ್ಟ್ಅಪ್ ಆಗಿದೆ,(ಏಜೆನ್ಸೀಸ್​).