ವೈರಲ್​ ಬೆಡಗಿ ಮೊನಾಲಿಸಾ  
ದೇಶ

ಬೀದಿಗೆ ಬಂದಿದೆ ಕುಟುಂಬ... ವೈರಲ್ ಬೆಡಗಿ ಮೊನಾಲಿಸಾ 6 ತಿಂಗಳ ಪ್ರೀತಿ, ದಿಢೀರ್​ ಮದುವೆಗೆ ಸಹೋದರಿ ಅಳಲು

ಪ್ರಮುಖ ಮುಖ್ಯಾಂಶಗಳು

  • ನಮ್ಮ ಕುಟುಂಬ ಬೀದಿಗೆ ಬಂದಿದೆ... ವೈರಲ್ ಬೆಡಗಿ ಮೊನಾಲಿಸಾ 6 ತಿಂಗಳ ಪ್ರೀತಿ, ದಿಢೀರ್​ ಮದುವೆಗೆ ಸಹೋದರಿ ಅಳಲು
  • ಕುಂಭಮೇಳದಲ್ಲಿ ಜನರ ಗಮನ ಸೆಳೆದ ಬೆಕ್ಕಿನ ಕಂಗಳ ಸುಂದರಿ
  • ಆರು ತಿಂಗಳು ಪ್ರೀತಿಸಿ, ಹೆತ್ತವರ ವಿರೋಧದ ನಡುವೆಯೇ ಮದುವೆ
Monalisa Marriage: 2025ರ ಆರಂಭದಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ 144 ವರ್ಷಗಳಿಗೊಮ್ಮೆ ಬರುವ ಅತಿ ಅಪರೂಪದ ಮಹಾಕುಂಭಮೇಳದಲ್ಲಿ ತನ್ನ ಬೆಕ್ಕಿನ ಕಂಗಳಿಂದಲೇ ಜನರ ಗಮನವನ್ನು ತನ್ನತ್ತ ಸೆಳೆದ ಚೆಲುವೆ ಇದೀಗ ತನ್ನ ಮದುವೆ ಸುದ್ದಿ ಮೂಲಕ ಭಾರೀ ವಿವಾದದಲ್ಲಿ ಸಿಲುಕಿದ್ದಾರೆ. ಹೆತ್ತವರ ಮಾತು ಧಿಕ್ಕರಿಸಿ, ಆರು ತಿಂಗಳ ಪ್ರೀತಿಗೆ ಅಸ್ತು ಎಂದ ಮೊನಾಲಿಸಾ, ಚಿತ್ರವೊಂದರ ಶೂಟಿಂಗ್​ಗೆ ಹೋದ ಸಮಯದಲ್ಲೇ ಪೊಲೀಸರ ಸರ್ಪಗಾವಲಿನಲ್ಲಿ ಪ್ರಿಯಕರ ಫರ್ಮಾನ್​ ಕೈಹಿಡಿದಿದ್ದೇ ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಫರ್ಮಾನ್​ ಕೈಹಿಡಿದ ಮೊನಾಲಿಸಾ 

ಮಾ.12ರಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ ಮೊನಾಲಿಸಾ, ತನಗೆ ಬಲವಂತದ ಮದುವೆ ಮಾಡಿಸಲು ತಂದೆ ಮುಂದಾಗಿದ್ದಾರೆ ಎಂದು ಥಂಪನೂರು ಪೊಲೀಸ್ ಠಾಣೆಯ ಅಧಿಕಾರಿಗಳ ಬಳಿ ಆರೋಪಿಸಿದಳು. ತನ್ನ ಪ್ರಿಯಕರನೊಂದಿಗೆ ಠಾಣೆಗೆ ಬಂದ ಬೆಕ್ಕಿನ ಕಣ್ಣಿನ ಸುಂದರಿ, ತಂದೆ ವಿಜಯ್ ಸಿಂಗ್ ಭೋಸ್ಲೆ, ನನಗೆ ಇಷ್ಟವಿಲ್ಲದ ವಿವಾಹಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಪೊಲೀಸರ ಬಳಿ ಅಳಲು ತೋಡಿಕೊಂಡಳು. ಇದಾದ ಕೆಲವೇ ಗಂಟೆಗಳಲ್ಲಿ ಆಕೆ ತನ್ನ ಪ್ರೇಮಿ ಫರ್ಮಾನ್​ ಖಾನ್​​ ಜೊತೆಗೆ ಮದುವೆ ಮಾಡಿಕೊಂಡ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಯಿತು.
ತಂದೆಯ ಮಾತು ಧಿಕ್ಕರಿಸಿ, ಫರ್ಮಾನನ್ನು ಮದುವೆಯಾದ ಮೊನಾಲಿಸಾಗೆ ಹೆತ್ತವರು ಹಿಡಿಶಾಪ ಹಾಕಿದ್ದಾರೆ. ಆರು ತಿಂಗಳ ಸಿಕ್ಕ ಪ್ರಿಯಕರನ ಜೊತೆ ಮದುವೆಯಾದ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ, ಅವರ ಸಹೋದರಿ ಇಶಿಕಾ ಮಾತನಾಡಿ, ಅಕ್ಕನ ನಿರ್ಧಾರದಿಂದಾಗಿ ತಮ್ಮ ಕುಟುಂಬವು ಬೀದಿಗೆ ಬಂದಿದೆ ಎಂದು ಹೇಳುವ ಮೂಲಕ ಬೇಸರ ಹೊರಹಾಕಿದ್ದಾರೆ.

ಮೊನಾಲಿಸಾಳ ತಂಗಿ ಓಪನ್ ಟಾಕ್​

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇಶಿಕಾ, "ಫರ್ಮಾನ್ ಖಾನ್ ನನ್ನ ಅಕ್ಕನ ಫೋನ್ ಕಸಿದುಕೊಂಡರು. ಪ್ರೀತಿಸಿ ಮದುವೆಯಾದ ಮೇಲೆ ನಮ್ಮಿಂದ ದೂರವಾಗಿರುವ ಸಹೋದರಿಯಿಂದ ಈಗ ನಮ್ಮ ಇಡೀ ಕುಟುಂಬ ಮಣಿಗಳನ್ನು ಮಾರುವುದನ್ನೇ ನಿಲ್ಲಿಸಿದೆ ಮತ್ತು ಮನೆಯಲ್ಲಿಯೇ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ತಂದೆ ಹುಚ್ಚರಂತೆ ರಸ್ತೆಗಳಲ್ಲಿ ಅಲೆದಾಡುತ್ತಿದ್ದಾರೆ. ಅಕ್ಕನಿಂದ ಕುಟುಂಬ ಈಗ ಬೀದಿಗೆ ಬಿದ್ದಿದೆ" ಎಂದು ಗೋಳಾಡಿದ್ದಾರೆ. 
ಇಶಿಕಾ ನೀಡಿರುವ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಫರ್ಮಾನ್​ ಕೈಹಿಡಿದ ಮೊನಾಲಿಸಾ, ತಾನು ಅವರನ್ನೇ ಮದುವೆ ಆಗೋದು ಎಂದು ಪಟ್ಟುಹಿಡಿದು ಆದ ವಿವಾಹಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದರು. ಇದೊಂದು ಲವ್​ ಜಿಹಾದ್​ ಬಿಟ್ಟರೆ ಬೇರೇನೂ ಅಲ್ಲ. ಆರು ತಿಂಗಳ ಪ್ರೀತಿ, ನಿಜವಾದ ಪ್ರೀತಿಯೇ ಅಲ್ಲ ಎಂದೆಲ್ಲ ಮೊನಾಲಿಸಾ ವಿರುದ್ಧ ಛೀಮಾರಿಗಳನ್ನು ಹಾಕಿದರು,(ಏಜೆನ್ಸೀಸ್).