ವೈರಲ್ ಹುಡುಗ ಅರುಣ್ ( Viral Boy )
- ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ
- ರೀಲ್ಸ್ಗಳಲ್ಲಿ ಓರ್ವ ಯುವಕನ ನಗುವಿನ ವಿಡಿಯೋ ತುಣುಕು ಮಾತ್ರ ಸಾಮಾನ್ಯವಾಗಿಬಿಟ್ಟಿದೆ
- ಟೀ ಗ್ಲಾಸ್ ಹಿಡಿದು, ಹಲ್ಲು ಕಿಸಿದು, ಗಹಗಹಿಸಿ ನಗುವುದನ್ನು ಬಹುತೇಕರು ನೋಡಿರುತ್ತಾರೆ
- ಆ ಹುಡುಗ ಯಾರೆಂಬ ಪ್ರಶ್ನೆಗೆ ನಾವಿಂದು ನಿಮಗೆ ಉತ್ತರ ತಿಳಿಸುತ್ತೇವೆ
Viral Boy : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಬಹುತೇಕ ವಿಡಿಯೋಗಳಲ್ಲಿ ಅದರಲ್ಲೂ ಟ್ರೋಲ್ ಅಥವಾ ಕಾಮಿಡಿ ವಿಡಿಯೋಗಳಲ್ಲಿ ಓರ್ವ ಯುವಕನ ನಗುವಿನ ವಿಡಿಯೋ ತುಣುಕು ಮಾತ್ರ ಸಾಮಾನ್ಯವಾಗಿಬಿಟ್ಟಿದೆ. ಆ ಹುಡುಗ ಟೀ ಗ್ಲಾಸ್ ಹಿಡಿದು, ಹಲ್ಲು ಕಿಸಿದು, ಗಹಗಹಿಸಿ ನಗುವುದನ್ನು ಯಾರೇ ನೋಡಿದರು ಅವರ ಮುಖದಲ್ಲೂ ನಗು ಮೂಡುವುದು ಖಚಿತ. ಪ್ರತಿ ಕಾಮಿಡಿ ವಿಡಿಯೋದಲ್ಲಿ ಈ ಹುಡುಗನ ವಿಡಿಯೋ ತುಣುಕು ಇದ್ದೇ ಇರುತ್ತದೆ. ಆದರೆ, ಈತ ಯಾರೆಂದು ಪ್ರಶ್ನೆ ಮಾಡಿದರೆ, ಬಹುತೇಕ ಮಂದಿಗೆ ಉತ್ತರವೇ ಗೊತ್ತಿಲ್ಲ. ಆ ಪ್ರಶ್ನೆಗೆ ಉತ್ತರವನ್ನು ನಾವಿಂದು ತಿಳಿಸಿಕೊಡುತ್ತೇವೆ.
ಅಂದಹಾಗೆ, ಈ ವಿಡಿಯೋದಲ್ಲಿರುವ ಹುಡುಗನ ಹೆಸರು ಅರುಣ್. ಈ ಹುಡುಗ ಪಕ್ಕದ ತೆಲಂಗಾಣ ರಾಜ್ಯದ ನಿವಾಸಿ. ಇಲ್ಲಿನ ಜಯಶಂಕರ್ ಬೊಪ್ಪಳಪಲ್ಲಿ ಜಿಲ್ಲೆಯ ನಾಲಪ್ಪುಚಟುವಲ್ಲಿ ಗ್ರಾಮದವನು.
ಅಂದಹಾಗೆ ಅರುಣ್, ಲಾರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನ ಜತೆಗಿರುವ ಲಾರಿ ಡ್ರೈವರ್ ಹೆಸರು ನೆಹರು. ಗಮನಾರ್ಹ ಸಂಗತಿ ಏನೆಂದರೆ, ನೀವು ನೋಡುತ್ತಿರುವ ವೈರಲ್ ವಿಡಿಯೋ ಹಿಂದಿನ ಸೃಷ್ಟಿಕರ್ತನೇ ಈ ನೆಹರು. ಅಂದಹಾಗೆ, ವೈರಲ್ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ್ದಲ್ಲ, ಆಕಸ್ಮಿಕವಾಗಿ ಸೆರೆಯಾದಂತಹ ದೃಶ್ಯವಿದು.
ಸನ್ನಿವೇಶ ಏನು?
ಚಹಾ ಕುಡಿಯುವಾಗ ನೆಹರು ಅವರು ಒಂದು ಜೋಕ್ಸ್ ಹೇಳುತ್ತಾರೆ. ಅದನ್ನು ಕೇಳಿ ಅರುಣ್, ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾನೆ. ಅದನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ ನೆಹೆರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಆ ವಿಡಿಯೋ ವೈರಲ್ ಆಗಿದ್ದಲ್ಲದೆ, ಇಂದಿಗೂ ಟ್ರೋಲಿಗರ ಫೇವರಿಟ್ ವಿಡಿಯೋ ಆಗಿ ಉಳಿದಿದೆ. ಇಂದಿಗೂ ಈ ವಿಡಿಯೋ ಕಾಮಿಡಿ ಅಥವಾ ಟ್ರೋಲ್ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ.
ಅಂದಹಾಗೆ, ಲಾರಿಯ ಕ್ಲೀನರ್ ಆಗಿ ಕೆಲಸ ಮಾಡುತ್ತಿರುವ ಅರುಣ್, ನಾಲ್ಕನೇ ತರಗತಿಯವರೆಗೆ ಮಾತ್ರ ಓದಿದ್ದಾನೆ. ಬಡತನದಿಂದ ಅರ್ಧದಲ್ಲೇ ಶಾಲೆ ಬಿಡಬೇಕಾಯಿತು. ಈ ವೇಳೆ ಚಾಲಕ ನೆಹರು ಅರುಣ್ ಬೆನ್ನಿಗೆ ನಿಂತರು. ಅವರ ಸಹಾಯದಿಂದ ಇದೀಗ 10ನೇ ತರಗತಿ ಪರೀಕ್ಷೆಯನ್ನು ಬರೆದು ಅರುಣ್ ಪಾಸ್ ಆಗಿದ್ದಾನೆ ಎಂಬ ವರದಿ ಇದೆ.
ಅಂದಹಾಗೆ, ಈ ವಿಡಿಯೋ ನೆಹರು ಅವರ ಜಾಲತಾಣ ಖಾತೆಯಿಂದ ಅಪ್ಲೋಡ್ ಆದ ಕೇವಲ ಒಂದೂವರೆ ತಿಂಗಳಲ್ಲೇ ಸುಮಾರು 40 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈಗ ನೀವು ನೋಡುವ ಯಾವುದೇ ಟ್ರೋಲ್ ಅಥವಾ ಮೀಮ್ಸ್ ವಿಡಿಯೋ ಈತನ ನಗುವಿಲ್ಲದೇ ಪೂರ್ಣಗೊಳ್ಳುವುದೇ ಇಲ್ಲ. ಸಾಮಾಜಿಕ ಜಾಲತಾಣವನ್ನು ಒಂದು ಸುತ್ತು ಹಾಕಿ ಬಂದರೆ, ಸಾಕು ರೀಲ್ಸ್, ಯೂಟ್ಯೂಬ್ ಶಾರ್ಟ್ ಸೇರಿದಂತೆ ಬಹುತೇಕ ವಿಡಿಯೋಗಳಲ್ಲಿ ಈತನ ನಗು ಇದ್ದೇ ಇರುತ್ತದೆ.
ಇದೇ ನಗು ಅರುಣ್ ಅವರ ಲಕ್ ಸಹ ಬದಲಾಯಿಸಿದೆ. ರಾತ್ರೋರಾತ್ರಿ ಅರುಣ್ ತೆಲಂಗಾಣದಲ್ಲಿ ಖ್ಯಾತಿ ಪಡೆದಿದ್ದಾನೆ. ಅನೇಕ ಯೂಟ್ಯೂಬ್ಗಳಿಗೆ ಸಂದರ್ಶನ ಸಹ ನೀಡಿದ್ದಾನೆ. ತನ್ನ ನಗುವಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾನೆ. ತನ್ನ ಜೀವನ ಪಯಣವನ್ನು ತೆರೆದಿಟ್ಟಿದ್ದಾನೆ. ಇದಿಷ್ಟೇ ಅಲ್ಲದೆ, ತಾನೇ ಒಂದು ಇನ್ಸ್ಟಾಗ್ರಾಂ ಅಕೌಂಟ್ ಮಾಡಿ, ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದಾನೆ. ನಗುವಿಗೆ ಇರುವ ಶಕ್ತಿ ಏನು ಗೊತ್ತಾ ಎಂಬ ಪ್ರಶ್ನೆಗೆ ಅರುಣ್ ಇಂದು ಉತ್ತರವಾಗಿ ನಿಂತಿದ್ದಾರೆ, (ಏಜೆನ್ಸೀಸ್).