ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ರಾಮಾಪುರ ಗ್ರಾಮಸ್ಥರು
- ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಸಿಜೆಪಿ
- ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ರಾಮಾಪುರ ಗ್ರಾಮಸ್ಥರು
- ನಮ್ಮ ಮೇಲೆ ದಾಳಿ ಮಾಡಿದವರು ಬಿಜೆಪಿ ಗೂಂಡಾಗಳು: ರಾಂಕಾ ಆಕ್ರೋಶ
ಜೈಪುರ್: ನೀಟ್ ಪ್ರತಿಭಟನೆ ಯಶಸ್ಸಿನ ನಂತರ ಕಾಕ್ರೋಚ್ ಜನತಾ ಪಾರ್ಟಿ ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಸರ್ಕಾರಿ ಶಾಲೆಗಳನ್ನು ಸರಿಪಡಿಸಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಅಭಿಯಯಾನದ ಭಾಗವಾಗಿ ಸಿಜೆಪಿ ವಕ್ತಾರ, ಆಶುತೋಷ್ ರಾಂಕಾ ನೇತೃತ್ವದಲ್ಲಿ ಜೈಪುರದ, ರಾಮಪುರದ ಶಾಲೆಯೊಂದಕ್ಕೆ ಬೇಟಿ ನೀಡಲು ಮುಂದಾದಾಗ ಸ್ಥಳೀಯರು ಮತ್ತು ಸಿಜೆಪಿ ಕಾರ್ಯಕರ್ತ (CJP Activists Attacked) ರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಲು ತೂರಾಟ; ಕಾರು ಪುಡಿ-ಪುಡಿ!
ಸರ್ಕಾರಿ ಶಾಲೆಗಳನ್ನು ಸರಿಪಡಿಸಿ ಎಂಬ ಅಭಿಯಾನದ ಅಂಗವಾಗಿ, ಆಶುತೋಷ್ ರಾಂಕಾ ನೇತೃತ್ವದಲ್ಲಿ ಸಿಜೆಪಿ ಕಾರ್ಯಕರ್ತರು ರಾಮಪುರದ ಶಾಲೆಗೆ ಬೇಟಿ ನೀಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ವಾಗ್ವಾದ ಪ್ರಾರಂಭವಾಗಿದೆ.
ನಂತರ ಈ ಮಾತಿನ ಚಕಮಕಿ, ಕೈ-ಕೈ ಮಿಲಾಯಿಸುವ ಮಟ್ಟಿಗೆ ಹೋಗಿದ್ದು, ಊರ ನಾಗರಿಕರು ಸಿಜೆಪಿ ಕಾರ್ಯಕರ್ತರನ್ನುಅಟ್ಟಾಡಿಸಿ ಹೊಡೆದಿದ್ದಾರೆ. ಅಂತೆಯೇ ನಮ್ಮ ಮೇಲೆ ಊರಿನ ಜನ ಕಲ್ಲು ತೂರಿದ್ದಾರೆ ಹಾಗೂ ನಮ್ಮ ಕಾರುಗಳನ್ನು ಜಕಂ ಮಾಡಿದ್ದಾಗಿ ಕಾಕ್ರೋಚ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇವರೆಲ್ಲಾ ಬಿಜೆಪಿ ಗೂಂಡಾಗಳು!
ಈ ಘಟನೆ ಬಗ್ಗೆ ಮಾತನಾಡಿರುವ ಆಶುತೋಷ್ ರಾಂಕಾ, ನಮಗೆ ರಾಮಾಪುರದ ಸರ್ಕಾರಿ ಶಾಲೆಯಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಸ್ಥಳೀಯ ಆಡಳಿತ ಸರ್ಕಾರದಿಂದ ಮಂಜೂರಾದ 12.50 ಲಕ್ಷ ಹಣವನ್ನು ಖಬಳಿಸಿದ್ದಾರೆ. ಇದರ ಬಗ್ಗೆ ನಾವು ಪ್ರಶ್ನೆ ಮಾಡಲು ಶಾಲೆಗೆ ತೆರಳಲು ಮುಂದಾದಾ ಕೆಲವು ಜನರು ನಮ್ಮನ್ನು ತಡೆದಿದ್ದಾರೆ.
ನಾವು ಹಿಂದಿರುಗಲು ಒಪ್ಪದಿದ್ದಾಗ, ಬಿಜೆಪಿ ಗೂಂಡಾಗಳು ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದು, ನಮ್ಮ ಜೊತೆಗಿದ್ದ, ಯುವತಿಯರು ಸೇರಿದಂತೆ ಎಲ್ಲರ ಮೇಲೆ ಮನಬಂದಂತೆ ಥಳಿಸಿದ್ದಾರೆ. ನನ್ನ ಅಂಗಿಯನ್ನೂ ಕೂಡ ಹರಿದ್ದಿದ್ದು, ಕಾರುಗಳ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆಂದು ಅವರು ಹೇಳಿದ್ದಾರೆ.
ಗ್ರಾಮಸ್ಥರ ಬೆಂಬಲಕ್ಕೆ ನಿಂತ ಬಿಜೆಪಿ!
ಒಂದು ಕಡೆ ಕಾಕ್ರೋಚ್ ಪಾರ್ಟಿ ತಮ್ಮ ಮೇಲೆ ದಾಳಿ ಮಾಡಿದವರು ಬಿಜೆಪಿ ಗೂಂಡಾಗಳೆಂದು ಹೇಳುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ನಾಯಕರು ಗ್ರಾಮಸ್ಥರ ಕ್ರಮವನ್ನು ಬೆಂಬಲಿಸುತ್ತಿದ್ದಾರೆ.
ಗ್ರಾಮಸ್ಥರಿಗೆ ದೆಹಲಿಯಲ್ಲಿ ಈ ಜಿರಳೆಗಳು ನಿರ್ಮಾಣ ಮಾಡಿದ್ದ ಪರಿಸ್ಥಿತಿ ಬಗ್ಗೆ ಅರಿವಿದೆ. ಇಂತಹ ಕೆಟ್ಟ ಹುಳುಗಳು ನಮ್ಮ ಊರಿಗೆ ಬಂದು, ಊರಿನ ಹೆಸರನ್ನು ಹಾಳು ಮಾಡದಿರಲಿ ಎಂದು ಸರಿಯಾದ ಕ್ರಮ ಕೈಗೊಂಡಿದ್ದಾರೆಂದು ಬಿಜೆಪಿ ಎಂಎಲ್ಎ ಬಾಲ ಮುಕ್ಕುಂದಾಚಾರ್ಯ ಹೇಳಿದ್ದಾರೆ.
ಬಿಜೆಪಿ ಎಂಎಲ್ಎ ಗೋಪಾಲ್ ಶರ್ಮಾ, ಯಾರು ಈ ಸಿಜೆಪಿ? ಇವರು ನಮ್ಮ ಯುವ ಪೀಳಿಗೆಯ ನಾಯಕರೇ? ಇವರು ಜೆನ್-ಜೀ ನಾಯಕರೇ? ಖುದಿರಾಮ್ ಬೋಸ್ ರಂತಹ ಐತಿಹಾಸಿಕ ವ್ಯಕ್ತಿತ್ವಗಳು ನಮ್ಮ ಜೆನ್- ಜೀ ನಾಯಕರಾಗಿದ್ದಾರೆ.
ದೇಶವಿರೋಧಿ ಹೇಳಿಕೆ ನೀಡುವ, ದೇಶವನ್ನು ಇಬ್ಭಾಗ ಮಾಡಲು ಮುಂದಾಗುವ ಜನರಿಗೆ ನಮ್ಮ ರಾಮಪುರ್ ನಿವಾಸಿಗಳು ತಕ್ಕ ಪಾಠವನ್ನು ಕಲಿಸಿದ್ದಾರೆಂದು ಹೇಳಿದ್ದಾರೆ, (ಏಜನ್ಸೀಸ್).