Tamil Nadu Politics (ಚಿತ್ರ X) 
ದೇಶ

ಬರೀ ಆಕಸ್ಮಿಕವಲ್ಲ, ಇದು ಪಕ್ಕಾ ಪ್ಲಾನಿಂಗ್! 'TN CM 2026' ಪ್ಲೇಟ್ ಹಿಂದಿದ್ದ ರಹಸ್ಯ ಬಿಚ್ಚಿಟ್ಟ ಚುನಾವಣಾ ಫಲಿತಾಂಶ...Tamil Nadu Politics

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ರಾಜಕೀಯ ಇತಿಹಾಸದಲ್ಲಿ 2026ರ ವಿಧಾನಸಭಾ ಚುನಾವಣೆ ಒಂದು ಮೈಲಿಗಲ್ಲು
  • ಕಳೆದ ಐದು ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆಯೇ ಸುತ್ತುತ್ತಿದ್ದ ದ್ರಾವಿಡ ರಾಜಕೀಯ
  • 2024 ರಲ್ಲಿ ವಿಜಯ್ ಟಿವಿಕೆ ಸ್ಥಾಪನೆಯಾದಾಗ ಅವರು 2026ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹ
ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ 2026ರ ವಿಧಾನಸಭಾ ಚುನಾವಣೆ ಒಂದು ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡುವ ಅಧ್ಯಾಯವಾಗಿದೆ. ಕಳೆದ ಐದು ದಶಕಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ನಡುವೆಯೇ ಸುತ್ತುತ್ತಿದ್ದ ದ್ರಾವಿಡ ರಾಜಕೀಯದ ಚಕ್ರಕ್ಕೆ ಈ ಬಾರಿ ನಟ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಬ್ರೇಕ್‌ ಹಾಕುವ ಮೂಲಕ ಗದ್ದುಗೆಗೆ ಏರಲು ಸಜ್ಜಾಗಿದೆ. 
2024 ರಲ್ಲಿ ವಿಜಯ್ ಟಿವಿಕೆ ಸ್ಥಾಪನೆಯಾದಾಗ ಅವರು 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದವು. ಏಳು ತಿಂಗಳ ನಂತರ, ಅವರ ಸೂಪರ್‌ಹಿಟ್ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಬಾಕ್ಸ್ ಆಫೀಸ್ ಬ್ಲಾಕ್ಬಸ್ಟರ್​ನಲ್ಲಿ ಸದ್ದು ಮಾಡಿದಷ್ಟೇ ಅಲ್ಲದೇ, ಚಿತ್ರದ ಕೆಲವು ದೃಶ್ಯಗಳಲ್ಲಿ ಸಿನಿಮಾ ಜೀವನ ಮುಗಿಸಿ ಜನರ ಸೇವೆಗೆ ಸಿದ್ಧ ಎಂಬ ಸುಳಿವು ನೀಡಿದ್ದರು.
ಇದೀಗ ಚಿತ್ರದ ಒಂದು ಸಣ್ಣ ಕ್ಲಿಪ್​ ಎಲ್ಲೆಡೆ ವೈರಲ್​ ಆಗಿದ್ದು, ಅದರಲ್ಲಿ ವಿಜಯ್ ನೋಂದಣಿ ಸಂಖ್ಯೆಯ TN 07 CM 2026  ಹೊಂದಿರುವ ಕಾರನ್ನು ಓಡಿಸುತ್ತಿದ್ದಾರೆ. ಇದು ಅವರು 2026 ರಲ್ಲಿ ಮುಖ್ಯಮಂತ್ರಿಯಾಗುವ ಯೋಜನೆಗೆ ಉಹಾಪೋಹಗಳನ್ನು ಹುಟ್ಟುಹಾಕಿದೆ. 
ಇದಾದ ಬಳಿಕ ಸಹನಟ ಪ್ರೇಮ್‌ಗಿ ಅಮರೆನ್ ಕೂಡ ವಿಜಯ್ ರಾಜಕೀಯ ಪ್ರವೇಶ ಮಾಡುತ್ತಾರೆ ನಾನು ಅವರಿಗೆ ಓಟ್​ ಹಾಕುತ್ತೇನೆ.  2026 ರಲ್ಲಿ ಅವರೇ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. 
234 ಸದಸ್ಯರನ್ನು ಹೊಂದಿದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್​ ಅವರ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 108 ಸ್ಥಾನಗಳು ಕೈಯಲ್ಲಿದ್ದರೂ, ಪಕ್ಷವು 10 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದ್ದು, ಇದು ಮೈತ್ರಿ ಮಾತುಕತೆಗಳ ಊಹಾಪೋಹಗಳನ್ನು ಹುಟ್ಟುಹಾಕಿದೆ. 
ಐದು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ತಲಾ ಎರಡು ಸ್ಥಾನಗಳನ್ನು ಗೆದ್ದ ಸಿಪಿಐ, ಸಿಪಿಐಎಂ ಮತ್ತು ವಿಸಿಕೆ ಸೇರಿದಂತೆ ಪ್ರಸ್ತುತ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳು ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಮಾತುಕತೆಗಳು ಹೊರ ಬೀಳುತ್ತಿವೆ.
ವಿಜಯ್ ಸ್ವತಃ ತಮಿಳುನಾಡಿನ ತಿರುಚ್ಚಿ (ಪೂರ್ವ) ಮತ್ತು ಪೆರಂಬೂರಿನಲ್ಲಿ ಎರಡು ಸ್ಥಾನಗಳನ್ನು ಗೆದ್ದರು. ಮೂಲಗಳ ಪ್ರಕಾರ, ವಿಜಯ್ ತಿರುಚ್ಚಿ (ಪೂರ್ವ) ಸ್ಥಾನಕ್ಕೆ ರಾಜೀನಾಮೆ ನೀಡಿ ಪೆರಂಬೂರು ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ (ಏಜೆನ್ಸೀಸ್).