ತಮಿಳನಾಡು ಸಿಎಂ ಆಗಿ ದಳಪತಿ ವಿಜಯ್​ ಪ್ರಮಾಣ ವಚನ  
ದೇಶ

ಸಿಎಂ ಪಟ್ಟಕ್ಕೇರಿದ ದಳಪತಿ ವಿಜಯ್​: ಇವಳ್ಯಾಕೆ ಬಂದಿದ್ದಾಳೆ? ಸಮಾರಂಭದಲ್ಲಿ ತ್ರಿಷಾಳನ್ನು ಕಂಡ ನೆಟ್ಟಿಗರು ಗರಂ! Trisha Krishnan in Vijay Oath Ceremony

ಪ್ರಮುಖ ಮುಖ್ಯಾಂಶಗಳು

  • ತಮಿಳನಾಡು ಸಿಎಂ ಆಗಿ ದಳಪತಿ ವಿಜಯ್​ ಪ್ರಮಾಣ ವಚನ
  • ಕಾರ್ಯಕ್ರಮದಲ್ಲಿ ಮಿಂಚುತಿದ್ದ ನಟಿ ತ್ರಿಷಾ
  • ತ್ರಿಷಾಳನ್ನು ನೋಡಿ ಕೋಪಗೊಂಡಿರುವ ನೆಟ್ಟಿಗರು
ಚೆನ್ನೈ: ಮೇ.4 ರಂದು ಹೊರಬಿದ್ದ ತಮಿಳನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್​ ನೇತೃತ್ವದ ಟಿವಿಕೆ ಪಕ್ಷ ಅತಿ ಹೆಚ್ಚು ಸ್ಥಾನವನ್ನು ಪಡೆದ ಪಕ್ಷವಾಗಿ ಹೊರಹೊಮ್ಮಿತು. ಭಾನುವಾರ (ಮೇ.10) ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ದಳಪತಿ ರಾಜ್ಯದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇವಳ್ಯಾಕೆ ಬಂದಳು?

ವಿಜಯ್​ ತಮಿಳನಾಡು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ತಮಿಳು ನಟಿ ಹಾಗೂ ವಿಜಯ್​ ಜೊತೆ ಸಂಬಂಧ ಹೊಂದಿರುವುದಾಗಿ ವದಂತಿ ಹೊತ್ತಿರುವ ತ್ರಿಷಾ ಕೃಷ್ಣನ್ (Trisha Krishnan in Vijay Oath Ceremony)​ ಸಹ ಹಾಜರಿದ್ದಳು.
ತಿಳಿ ನೀಲಿ ಬಣ್ಣದ ಕಾಂಜಿವರಂ ಸೀರೆಯುಟ್ಟು, ಕೂದಲಿಗೆ ಮಲ್ಲಿಗೆ ಹೂವನ್ನು ಮುಡಿದು ಬಂದಿದ್ದ, ತ್ರಿಷಾ ಈ ಕಾರ್ಯಕ್ರಮದ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಳು ಎಂದರೆ ಸುಳ್ಳಲ್ಲ.
ಆದರೆ ಇವಳು ವಿಜಯ್​ನೊಂದಿಗೆ ಯಾವುದೇ ನ್ಯಾಯ ಸಮ್ಮತ ಸಂಬಂಧ ಹೊಂದಿಲ್ಲ, ಹಾಗೆಯೇ ಇಕೆಯೇನು ಟಿವಿಕೆ ಪಕ್ಷದ ಕಾರ್ಯಕರ್ತೆಯೂ ಅಲ್ಲ, ಆದರೂ ಈ ಸಮಾರಂಭಕ್ಕೆ ಏಕೆ ಬಂದಿದ್ದಾಳೆ? ಎನ್ನುವುದು ಹಲವರ ಪ್ರಶ್ನೆಯಾಗಿತ್ತು.

ಕಾರ್ಯಕ್ರಮಕ್ಕೆ ಗೈರಾದ ಹೆಂಡತಿ, ಮಕ್ಕಳು!

ಒಂದು ಕಡೆ ತ್ರಿಷಾ, ವಿಜಯ್​ ಸಿಎಂ ಆಗುತ್ತಿರುವ ಕಾರ್ಯಕ್ರಮದಲ್ಲಿ ಎಲ್ಲಾ ಕಡೆ ಓಡಾಡುತ್ತಿದ್ದರೆ, ಇನ್ನೊಂದು ಕಡೆ ವಿಜಯ್​ ಪತ್ನಿ ಸಂಗೀತಾ, ಮಗ ಜೇಸನ್​ ಸಂಜಯ್​ ಹಾಗೂ ಮಗಳು ದಿವ್ಯಾ ಸಾಶಾ ಈ ಸಮಾರಂಭಕ್ಕೆ ಗೈರಾಗಿದ್ದರು. ವಿಜಯ್​ ವಿರುದ್ಧ ವಿಚ್ಛೇದನ ಪ್ರಕರಣವನ್ನು ಸಂಗೀತಾ ಹೂಡಿರುವ ಹಿನ್ನಲೆ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ.

ನೆಟ್ಟಿಗರಿಂದ ತರಾಟೆ

ದಳಪತಿ ವಿಜಯ್​ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ತ್ರಿಷಾ ಹಾಜರಾಗಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಬ್ಬರ ಮನೆಮುರಿದು ಪಡೆದ ವಸ್ತು, ವ್ಯಕ್ತಿ ನಿನ್ನ ಬಳಿ ಕೂಡ ಬಹಳ ದಿನ ಇರಲ್ಲ ಎಂದು ಒಬ್ಬರು ಹೇಳಿದರೆ, ವಿಜಯ್​ ನೀನು ಪತ್ನಿ ಸಂಗೀತಾಗೆ ವಿಚ್ಛೇದನ ನೀಡಿ ಈ ತ್ರಿಷಾ ಜೊತೆ ಬೇಕಾದನ್ನು ಮಾಡಿಕೋ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಈ ತ್ರಿಷಾ ಏನು ವಿಜಯ್​ನ ಹೆಂಡತಿಯೇ? ಏನು ತನ್ನ ಗಂಡನೇ ಸಿಎಂ ಆಗಿರುವ ರೀತಿ ಓಡಾಡುತ್ತಿದ್ದಾಳೆಂದು ಮತ್ತೊಬ್ಬರು ಮೂಗು ಮುರಿದಿದ್ದಾರೆ, (ಏಜನ್ಸೀಸ್​).