ಟಿವಿಕೆ ಪಕ್ಷದ ನಾಯಕ ವಿಜಯ್​ 
ದೇಶ

ತಮಿಳುನಾಡು ಚುನಾವಣೆ ಗೆಲ್ಲಲು ವಿಜಯ್​ ಮಾಸ್ಟರ್​ಪ್ಲ್ಯಾನ್​ ಹಿಂದಿತ್ತು '2'! ಏನಿದು ಲೆಕ್ಕಾಚಾರ? ಹೀಗಿದೆ ಉತ್ತರ

TamilNadu Elections: ಪ್ರಸ್ತುತ, ತಮಿಳುನಾಡಿನ ರಾಜಕೀಯ ಲೆಕ್ಕಾಚಾರವೇ ಬದಲಾಗಿದ್ದು, 2026ರ ವಿಧಾನಸಭಾ ಚುನವಾಣೆಯಲ್ಲಿ ನಟ ವಿಜಯ್​ ನೇತೃತ್ವದ ಟಿವಿಕೆ ತಮ್ಮ ಚೊಚ್ಚಲ ಸ್ಪರ್ಧೆಯಲ್ಲೇ ಐತಿಹಾಸಿಕೆ ಗೆಲುವು ದಾಖಲಿಸಿರುವುದು ಹೊಸ ಸಂಚಲನ ಹುಟ್ಟುಹಾಕಿದೆ. ಡಿಎಂಕೆ, ಎಐಡಿಎಂಕೆ ಅಂತಹ ಬಲಿಷ್ಠ ಪಕ್ಷಗಳನ್ನೇ ಹಿಂದಿಕ್ಕಿದ ವಿಜಯ್​ ಗೆಲುವಿನ ಸಿಕ್ರೇಟ್​ ಇದೀಗ ಬಯಲಾಗಿದೆ.

ಸಾಮಾನ್ಯರಿಗೆ ಟಿಕೆಟ್​

ವಿಜಯ್ ಅವರ ಪಕ್ಷವು ಯಾವುದೇ ಗುರುತಿಲ್ಲದ ಅತ್ಯಂತ ಸಾಮಾನ್ಯ ಜನರಿಗೆ ಟಿಕೆಟ್ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಜಕೀಯ ಹಿನ್ನೆಲೆ ಇಲ್ಲದ ವ್ಯಕ್ತಿಗಳ ಮೇಲೆ ಸಂಪೂರ್ಣ ನಂಬಿಕೆ, ಭರವಸೆಯನ್ನಿಟ್ಟ ವಿಜಯ್​, ರಾಜಕೀಯದ ಗಂಧ-ಗಾಳಿಯೇ ಇಲ್ಲದ ಹಲವು ಅಭ್ಯರ್ಥಿಗಳಿಗೆ ಶಾಸಕ ಸ್ಥಾನ ನೀಡಿದ್ದು ಗಮನಾರ್ಹ. ಇದರೊಟ್ಟಿಗೆ ಬಹು ವರ್ಷಗಳಿಂದ ತಮಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್​ಗೆ ಟಿಕೆಟ್ ಘೋಷಿಸಿದರು. ಈಗ ಅವರೂ ಚುನಾವಣೆಯಲ್ಲಿ ಗೆದ್ದು ಪಕ್ಷದ ಜಯಕ್ಕೆ ಕಾರಣರಾಗಿದ್ದು ಹಲವರ ಗಮನ ಸೆಳೆದಿದೆ.

'2' ಕ್ಷೇತ್ರ, ದಳಪತಿ ಮಾಸ್ಟರ್​ಪ್ಲ್ಯಾನ್​

ತಮಿಳುನಾಡಿನ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪಣತೊಟ್ಟ ವಿಜಯ್​, ಬುದ್ಧಿವಂತಿಕೆಯಿಂದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಧರಿಸಿದರು. ಅಲ್ಲಿಗೆ, ಅವರು ಮೊದಲೇ ತಾನು ಎರಡು ಕಡೆಯಿಂದ ಪೈಪೋಟಿ ನಡೆಸಿದರೆ, ಕಡೆಯ ಪಕ್ಷ ಒಂದರಲ್ಲಿ ಆದರೂ ಗೆಲುವು ಖಚಿತ ಎಂಬುದನ್ನು ತಿಳಿದಿದ್ದರು. ಹೀಗಾಗಿಯೇ, ಉತ್ತರ ಮತ್ತು ಮಧ್ಯ ತಮಿಳುನಾಡಿನಾದ್ಯಂತ ಬಲವಾದ ನೆಲೆಯನ್ನು ಸ್ಥಾಪಿಸಲು ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು.
ಈ ಸ್ಮಾರ್ಟ್​ ಲೆಕ್ಕಾಚಾರದ ಮೂಲಕ ತಮ್ಮ ಎದುರಾಳಿ ಪಕ್ಷಗಳಿಗೆ ಖಡಕ್ ಸಂದೇಶ ನೀಡಿದ ವಿಜಯ್​, ಕಡೆಗೂ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಡಿಎಂಕೆ ಕಟ್ಟಿದ್ದ ಭದ್ರಕೋಟೆಯನ್ನು ನೆಲಸಮ ಮಾಡಿ, ತಮಿಳುನಾಡಿನ ನೂತನ ಸಿಎಂ ಆಗಲು ಸಿದ್ಧರಾಗುತ್ತಿದ್ದಾರೆ,(ಏಜೆನ್ಸೀಸ್). ​