Chamarajanagar Shootout Victim Daughter Emotional SOS To Tamil Nadu CM 
ದೇಶ

'ವಿಜಯ್​ ಮಾಮ ದಯವಿಟ್ಟು ಬನ್ನಿ'; ಹನೂರು ಎನ್​ಕೌಂಟರ್​​ ಕೇಸ್​ನಲ್ಲಿ ಮೃತಪಟ್ಟ ಸೆಬಾಸ್ಟಿಯನ್​ ಡೇವಿಡ್ ಪುತ್ರಿ ಮನವಿ​..Chamarajanagar

ಪ್ರಮುಖ ಮುಖ್ಯಾಂಶಗಳು

  • ಆ.15ರಂದು ಹನೂರಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಮೂವರು ಎನ್​ಕೌಂಟರ್​
  • ಕಳ್ಳಬೇಟೆ ನಡೆಸುತ್ತಿದ್ದವರು ಶರಣಾಗದ ಕಾರಣ ಶೂಟ್ ಮಾಡಲಾಯಿತುಎಂದು ಸಮರ್ಥನೆ
  • ಮೃತ ಡೇವಿಡ್​ ಪುತ್ರಿಯಿಂದ ಸಿಎಂ ವಿಜಯ್​ಗ ಮನೆಗೆ ಬಂದು ಸಮಸ್ಯೆ ಆಲಿಸುವಂತೆ ಮನವಿ
ಸೆಬಾಸ್ಟಿಯನ್​ ಡೇವಿಡ್​ ಕುಮಾರ್​​ ಅವರ ಪುತ್ರಿ, ತಮಿಳುನಾಡಿನ ಸಿಎಂ ವಿಜಯ್​ ಅವರಿಗೆ ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗ್ತಿದೆ.  ತಮಿಳಿನಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ, ಹನೂರು ತಾಲ್ಲೂಕಿನ ಥೋಮಿಯಾರ್ ಪಾಳ್ಯದ ನಿವಾಸಿ ಬೆಸ್ಸಿ, ತನ್ನ ತಂದೆಯ ಮರಣದ ನಂತರ ಕುಟುಂಬದ ಆರ್ಥಿಕ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ.

ಬೆಸ್ಸಿ ಹೇಳಿದ್ದು ಹೀಗೆ

'ವಿಜಯ್ ಮಾಮಾ, ದಯವಿಟ್ಟು ನಮ್ಮ ಮನೆಗೆ ಬನ್ನಿ.  ನಮ್ಮ ಕುಟುಂಬದ ಆರ್ಥಿಕ ಸಮಸ್ಯೆಗಳ ಬಗ್ಗೆ ಆಲಿಸಿ. ತನ್ನ ತಂದೆಯ ಮರಣವು ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ತಂದೆ ತೆಗೆದುಕೊಂಡ ಸಾಲವನ್ನು ತೀರಿಸಲು ನನ್ನ ಕುಟುಂಬವು ಹೆಣಗಾಡುತ್ತಿದೆ. ಹಲವಾರು ಸಾಲಗಳಿವೆ, ಮತ್ತು ನನ್ನ ತಂದೆ ಇಲ್ಲದೆ ನಾವು ಅವುಗಳನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ನನಗೆ ತಿಳಿಯುತ್ತಿಲ್ಲ' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಏನಿದು ಕೇಸ್?

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಅರಣ್ಯ ಪ್ರದೇಶದಲ್ಲಿ ಆಗಸ್ಟ್​15ರಂದು ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ  ಗುಂಡಿನ ದಾಳಿಯಲ್ಲಿ ಸೆಬಾಸ್ಟಿಯನ್​ ಡೇವಿಡ್​ ಕುಮಾರ್​​(35) ಸೇರಿದಂತೆ ಮೂವರು ಮೃತಪಟ್ಟಿದ್ದರು. ಆತ್ಮರಕ್ಷಣೆಗೆ ಇವರ ಪ್ರತಿ ದಾಳಿ ನಡೆಸಲಾಗಿದೆ ಎಂದು  ಅರಣ್ಯ ಇಲಾಖೆ  ಹೇಳಿದೆ. ಆದರೆ' ಇದೊಂದು ಫೇಕ್ ಎನ್​ಕೌಂಟರ್ ಎಂದು ಸಾರ್ವಜನಿಕರು ಹಾಗೂ  ಕುಟುಂಬಸ್ಥರು ಆರೋಪಿಸಿದ್ದಾರೆ.
ಜಾನುವಾರು ಹುಡುಕಿ ಹಾಗೂ ಜಿಂಕೆ ಬೇಟೆಗೆಂದು ತೆರಳಿದ್ದ ಸಮಯದಲ್ಲಿ ಟೋನಿ ಸ್ವಾಮಿ ಹಾಗೂ ಜಾನ್ ರೋಸ್ ಪೀಟರ್. ಸೆಬಾಸ್ಟಿಯನ್​ ಡೇವಿಡ್​ ಕುಮಾರ್​​ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಈ ಬಗ್ಗೆ ತಮಿಳುನಾಡಿಸ ಸಿಎಂ ವಿಜಯ್​ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. 
ಕಾಣೆಯಾದ ಜಾನುವಾರು ಹುಡುಕಿ ಕಾಡಿಗೆ ಹೊರಟವರ ಮೇಲೆ ಗುಂಡು ಹಾರಿಸಿ  ಕೊಲ್ಲಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಕುಟುಂಬಸ್ಥರು, ಹೋರಾಟಗಾರರು ಹೇಳುತ್ತಿದ್ದರೆ, ಅರಣ್ಯ ಇಲಾಖೆ ಕಳ್ಳ ಬೇಟೆ  ವಿರುದ್ಧ  ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಈ ಘಟನೆ ನಡೆದಿದೆ. ಕಳ್ಳಬೇಟೆಗಾರರಿಗೆ ಶರಣಾಗುವಂತೆ ಮನವಿ ಮಾಡಿಕೊಂಡರು ನಾಡ ಬಂದೂಕಿನಿಂದ ದಾಳಿ ನಡೆಸಿದರು. ಹೀಗಾಗಿ ಅರಣ್ಯ ಇಲಾಖೆ ಎನ್​ಕೌಂಟರ್​ ನಡೆಸಿದೆ ಎಂದು ಸಮರ್ಥಿಸಿಕೊಂಡಿದೆ.  ಮುಂಗಾರು  ಕಲಾಪದಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ, (ಏಜೆನ್ಸೀಸ್).