ಸಿಎಂ ವಿಜಯ್ ಜತೆ ತ್ರಿಷಾ ಇದ್ರೆ....ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ! Astrologer Venu Swamy
- ತೆಲುಗು ರಾಜ್ಯಗಳ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಅವರ ವಿವಾದಾತ್ಮಕ ಭವಿಷ್ಯವಾಣಿಗಳು
- ಸಮಂತಾ ನಾಗಚೈತನ್ಯ ವಿಚ್ಛೇದನದ ಬಳಿಕ ವೇಣುಸ್ವಾಮಿ ನುಡಿಯುವ ಭವಿಷ್ಯಕ್ಕೆ ಹೆಚ್ಚಿದ ಗಂಭೀರತೆ
- ತಮಿಳು ನಟ ವಿಜಯ್ ಹಾಗೂ ನಟಿ ತ್ರಿಷಾ ಒಡನಾಟ ವಿಜಯ್‌ಗೆ ಅಪಾಯಕಾರಿ ಎಂದ ಜ್ಯೋತಿಷಿ
- ತ್ರಿಷಾ ರಾಜಕೀಯ ಪ್ರವೇಶ ಹಾಗೂ ಉಪ ಮುಖ್ಯಮಂತ್ರಿಯಾಗುವ ಯೋಗವಿಲ್ಲವೆಂದು ಭವಿಷ್ಯ
Astrologer Venu Swamy : ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ತೆಲುಗು ರಾಜ್ಯಗಳ ಜನರಿಗೆ ಚಿರಪರಿಚಿತ. ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ವೇಣು ಸ್ವಾಮಿ ಖ್ಯಾತಿಯನ್ನು ಗಳಿಸಿದ್ದಾರೆ. ಆರಂಭದಲ್ಲಿ ಈತ ಹೇಳುವ ಭವಿಷ್ಯವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ನುಡಿದ ಭವಿಷ್ಯವನ್ನು ಬಹುತೇಕರು ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿರುವ ವೇಣುಸ್ವಾಮಿ, ಈ ಬಾರಿ ಮತ್ತೊಂದು ಭವಿಷ್ಯವಾಣಿ ನುಡಿದಿದ್ದಾರೆ.
ನಟ ವಿಜಯ್ ಅವರು ಟಿವಿಕೆ ಪಕ್ಷವನ್ನು ಸ್ಥಾಪಿಸಿ, ರಾಜಕೀಯ ಪ್ರವೇಶಿಸಿದಾಗಿನಿಂದ ತಮಿಳುನಾಡು ರಾಜಕೀಯ ಹಾಗೂ ಸಿನಿ ಲೋಕದಲ್ಲಿ ನಟಿ ತ್ರಿಷಾ ಅವರ ಹೆಸರು ನಿರಂತರವಾಗಿ ಚರ್ಚೆಯಲ್ಲಿದೆ. ವಿಜಯ್ ಮತ್ತು ತ್ರಿಷಾ ನಡುವಿನ ಸಂಬಂಧದ ಕುರಿತಾದ ವಾದ-ವಿವಾದಗಳು ಇಂದಿಗೂ ಮುಂದುವರಿದಿದೆ. ಇದರ ನಡುವೆ ಜ್ಯೋತಿಷಿ ವೇಣುಸ್ವಾಮಿ ಅವರು ವಿಜಯ್ ಮತ್ತು ತ್ರಿಷಾ ಬಗ್ಗೆ ನುಡಿದಿರುವ ಭವಿಷ್ಯವಾಣಿಗಳು ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದೆ.
ಅಥಡು ಸಿನಿಮಾ ಬಿಡುಗಡೆಯಾದ ಸಮಯದಲ್ಲೇ ನಾನು ತ್ರಿಷಾ ಅವರ ಜಾತಕವನ್ನು ಹೇಳಿದ್ದೆ ಎಂದು ತಿಳಿಸಿರುವ ವೇಣುಸ್ವಾಮಿ, ತ್ರಿಷಾ ಅವರು ರಾಜಕೀಯ ಪ್ರವೇಶಿಸುವುದು ಹಾಗೂ ಉಪ ಮುಖ್ಯಮಂತ್ರಿಯಾಗುವುದು ಸರಿಯಲ್ಲ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ವೇಣುಸ್ವಾಮಿ, ವಿಜಯ್ ಮತ್ತು ತ್ರಿಷಾ ಭೇಟಿಯಾದರೆ ಇಬ್ಬರ ನಡುವೆ ಹೊಂದಾಣಿಕೆಯೇ ಇರುವುದಿಲ್ಲ ಹಾಗೂ ತ್ರಿಷಾ ಅವರ ಒಡನಾಟವು ವಿಜಯ್‌ಗೆ ತುಂಬಾ ಅಪಾಯಕಾರಿ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇಬ್ಬರ ಜಾತಕಗಳು ಪರಸ್ಪರ ಸರಿಹೋಗುವುದಿಲ್ಲ ಎಂಬ ವೇಣುಸ್ವಾಮಿ ಅವರ ಮಾತುಗಳು ಕಾಲಿವುಡ್ ಸಿನಿ ಅಂಗಳ ಹಾಗೂ ತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
ಅಂದಹಾಗೆ, ಜ್ಯೋತಿಷಿ ವೇಣುಸ್ವಾಮಿ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಸಿದ್ಧ ಸೆಲೆಬ್ರಿಟಿ ಜ್ಯೋತಿಷಿ. ಟಾಲಿವುಡ್ ನಟ-ನಟಿಯರು ಮತ್ತು ರಾಜಕೀಯ ವ್ಯಕ್ತಿಗಳ ಬಗ್ಗೆ ಭವಿಷ್ಯ ಹೇಳುವುದರಿಂದ ಹೆಸರುವಾಸಿಯಾಗಿದ್ದಾರೆ. ಅವರು ಹಲವು ಸಿನಿಮಾ ಮುಹೂರ್ತಗಳು, ಪೂಜೆಗಳು ಮತ್ತು ರಾಶಿ-ನಕ್ಷತ್ರಗಳ ಬಗ್ಗೆ ಮಾತನಾಡುತ್ತಾರೆ. ಅವರ ಅನೇಕ ಭವಿಷ್ಯಗಳು ತಪ್ಪಾಗುವುದರಿಂದ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಾಗಿ ಅವರು ಟೀಕೆಗೆ ಒಳಗಾಗುತ್ತಾರೆ. ಅವರು ಹೈದರಾಬಾದ್ ಮೂಲದವರು ಮತ್ತು ಅವರ ಪತ್ನಿ ವೀಣಾ ಶ್ರೀವಾಣಿ ವೀಣಾ ವಾದಕರು, (ಏಜೆನ್ಸೀಸ್).