ಮುಂಬೈ: ( Rashmika Mandanna) ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರಸ್ತುತ ಇಟಲಿಯ ರೋಮ್ ನಗರದಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳದಿದ್ದರೂ, ಅಭಿಮಾನಿಗಳು ಕೆಲವು ಕುತೂಹಲಕಾರಿ ಅಂಶಗಳನ್ನು ಇಬ್ಬರ ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಪತ್ತೆ ಹಚ್ಚಿದ್ದಾರೆ.
ರಶ್ಮಿಕಾ ಅವರು ಕೂಡ "ರೋಮ್ ಸೋ ಫಾರ್" (Rome so far) ಎಂಬ ಶೀರ್ಷಿಕೆಯೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದು, ವಿಜಯ್ ಹೋದ ಅದೇ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಕೂಡ ರಶ್ಮಿಕಾ ಅವರ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ
"ನನ್ನ ಪ್ರಿಯ ಸ್ನೇಹಿತರೇ ಹೊಸ ವರ್ಷದ ಶುಭಾಶಯಗಳು. ನಾವೆಲ್ಲರೂ ಒಟ್ಟಿಗೆ ಬೆಳೆಯೋಣ, ಸಂತೋಷದ ನೆನಪುಗಳನ್ನು ಮಾಡಿಕೊಳ್ಳೋಣ, ಒಳ್ಳೆಯ ಕಾರ್ಯಗಳನ್ನು ಮಾಡೋಣ ಮತ್ತು ಪ್ರೀತಿ ಮತ್ತು ಸಂತೋಷವನ್ನು ಹರಡೋಣ. ನಿಮ್ಮೆಲ್ಲರಿಗೂ ಪ್ರೀತಿ." ಎಂದು ವಿಜಯ್ ಸ್ನೇಹಿತರ ಜತೆಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇಬ್ಬರು ರಜೆಯ ಪೋಸ್ಟ್‌ಗೆ ಬೇರೆ ದಿನಾಂಕವನ್ನು ಹಾಗೆ ಬೇರೆ ಫೋಟೋಗಳನ್ನೆ ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರು ಸೂಕ್ಷ್ಮವಾಗಿ ಗಮನಿಸಿದಾಗ ಇಬ್ಬರು ಒಟ್ಟಿಗೆ ಸ್ನೇಹಿತರ ಜತೆ ಕಾಲ ಕಳೆಯುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ವಿಜಯ್ ಅವರು ಹಂಚಿಕೊಂಡಿರುವ ಫೋಟೋದಲ್ಲಿ ರಶ್ಮಿಕಾ ವಿಜಯ್ ಅವರನ್ನು ಹಿಂದಿನಿಂದ ತಬ್ಬಿಕೊಳ್ಳುತ್ತಿದ್ದಾರೆ. ರಶ್ಮಿಕಾ 5 ನೇ ಫೋಟೋದಲ್ಲಿದ್ದಾರೆ ಎಂದು ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಈ ಹಿಂದೆ ರೋಮ್‌ನ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ವಿಜಯ್ ಹೋದ ಅದೇ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಕೂಡ ರಶ್ಮಿಕಾ ಅವರ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ರಶ್ಮಿಕಾ ತೊಟ್ಟಿದ್ದ ಸನ್ ಗ್ಲಾಸ್ನಲ್ಲಿ ನೆರಳು ನೋಡಿ ವಿಜಯ್ ಕೂಡಾ ಜತೆಗೆ ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಜೋಡಿ ಅಕ್ಟೋಬರ್ 2025 ರಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ನಡೆದಿದೆ ಎನ್ನಲಾಗುತ್ತಿದೆ. ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿರುವ ಹೆರಿಟೇಜ್ ಪ್ಯಾಲೇಸ್‌ನಲ್ಲಿ ಇವರ ವಿವಾಹ ಮಹೋತ್ಸವ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 2026 ಜನವರಿ 1ರಂದು ವಿಜಯ್ ಹಂಚಿಕೊಂಡ ಹೊಸ ವರ್ಷದ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿಜಯ್ ದೇವರಕೊಂಡ ಅಥವಾ ರಶ್ಮಿಕಾ ಮಂದಣ್ಣ ಇನ್ನೂ ಮದುವೆಯನ್ನು ಖಚಿತಪಡಿಸಿಲ್ಲ.