ತಮಿಳುನಾಡಿನ ಬಡವರಿಗೆ, ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ವಿಜಯ್ ಬಂಪರ್
- ತಮಿಳುನಾಡು ರಾಜಕೀಯದಲ್ಲಿ ವಿಜಯ್ ಸಂಚಲನ
- ಬಡ ಕುಟುಂಬಗಳಿಗೆ ವರ್ಷಕ್ಕೆ ಮೂರು ಸಿಲಿಂಡರ್ ಉಚಿತ
- ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಫ್ರೀ ಬಸ್ ಘೋಷಿಸಿದ ಸಿಎಂ ವಿಜಯ್
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜೋಸೆಫ್ ವಿಜಯ್, ಈದೀಗ ಮತ್ತೊಮ್ಮೆ ರಾಜ್ಯದ ಜನರಿಗೆ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ.
ವಿಧಾನ ಸಭೆಯ ಅಸೆಂಬ್ಲಿಯಲ್ಲಿ ಮಾತಾನಾಡಿದ ಸಿಎಂ ವಿಜಯ್, ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ವಾರ್ಷಿಕ ಮೂರು ಗ್ಯಾಸ್ ಸಿಲಿಂಡರ್ (Free Bus and Free Cylinder) ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಅನ್ನಪೂರ್ಣಿ ಸೂಪರ್ ಸಿಕ್ಸ್ ಬಿಡುಗಡೆ!
ಜನಪರ ಯೋಜನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ವಿಜಯ್, 2027 ರಿಂದ ಅನ್ನಪೂರ್ಣಿ ಸೂಪರ್ ಸಿಕ್ಸ್ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದು, ಈ ಯೋಜನೆಯ ಫಲವನ್ನು ಸುಮಾರು 1.30 ಕೋಟಿ ಕುಟುಂಬಗಳು ಪಡೆಯಲಿವೆ ಎಂದು ತಿಳಿಸಿದ್ದಾರೆ.
ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳು ಈ ಉಚಿತ ಗ್ಯಾಸ್ ಸಿಲಿಂಡರ್ ಪಡೆಲಿದ್ದು, ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ಅವರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಜಮಾ ಮಾಡುವುದಾಗಿ ಹೇಳಿದ್ದಾರೆ. ವಿಜಯ್ ತಿಳಿಸಿರುವ ಪ್ರಕಾರ ಈ ಯೋಜನೆಗೆ ಸುಮಾರು 4 ಸಾವಿರ ಕೋಟಿ ಖರ್ಚಾಗಲಿದೆ ಎಂದಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಸಂಘರ್ಷ ನಡೆಯುತ್ತಿರುವ ಹಿನ್ನಲೆ, ಸಿಲಿಂಡರ್ ಬೆಲೆ ಹೆಚ್ಚಳ ಮತ್ತು ಅಲಭ್ಯತೆ ತಲೆದೂರಿರುವ ಹಿನ್ನಲೆ ರಾಜ್ಯದ ಬಡ ಕುಟುಂಬಗಳಿಗೆ ಸಿಲಿಂಡರ್ ಖರೀದಿ ಕಷ್ಟವಾಗುತ್ತಿದೆ. ಹೀಗಾಗಿ ಈ ಯೋಜನೆಯನ್ನು ಜಾರಿಗೆ ತಂದರೆ ಕನಿಷ್ಟ ಅವರ ಹೊಟ್ಟೆಗೆ ಊಟ ದೊರೆಯಲಿದೆ ಎಂದಿದ್ದಾರೆ.
ಕೊಟ್ಟ ಭರವಸೆ ಉಳಿಸಿಕೊಳ್ಳಬೇಕು!
ಇದೇ ಮೊದಲ ಬಾರಿಗೆ ತಮಿಳುನಾಡಿನ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯ್, ಮೊದಲ ಯತ್ನದಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷ ಬಡ ಕುಟುಂಬಗಳಿಗೆ ವರ್ಷಕ್ಕೆ ಆರು ಉಚಿತ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿತ್ತು.
ಇದರ ಬಗ್ಗೆ ಮಾತನಾಡಿದ ವಿಜಯ್, ರಾಜ್ಯದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಆದರೆ ನೀಡಿದ ಭರವಸೆ ಹಾಗೂ ತಿನ್ನುವ ಅನ್ನವನ್ನು ದೃಷ್ಟಿಯಲ್ಲಿಟ್ಟಕೊಂಡು ಈ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದಿದ್ದಾರೆ.
ಮಹಿಳೆಯರಿಗೆ, ತೃತೀಯ ಲಿಂಗಿಗಳಿಗೆ ಬಂಪರ್!
ರಾಜ್ಯದಲ್ಲಿರುವ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ವೆಟ್ರಿ ಪಯಣ ತಿಟ್ಟಿಂ ಎಂಬ ಯೋಜನೆಯಡಿ ರಾಜ್ಯದೆಲ್ಲಡೆ ಸಂಚರಿಸುವ ಬಸ್ಸುಗಳನ್ನು ಪ್ರಯಾಣವನ್ನು ಉಚಿತವೆಂದು ಘೋಷಿಸಿದ್ದಾರೆ. ಈ ಯೋಜನೆಗೆ ಕೇವಲ ಸಿಟಿ ಬಸ್ಸುಗಳು ಮಾತ್ರವಲ್ಲದೇ, ಅದ್ಧೂರಿ ಬಸ್ಸುಗಳಲ್ಲಿ ಕೂಡ ಮಹಿಳೆಯರಿಗೆ ಉಚಿತ ಪ್ರಯಾಣವೆಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣದ ಸೌಲಭ್ಯವಿದೆ. ಆದರೆ ಅದು ಕೇವಲ 40 ಕಿ.ಮೀ ಮಾತ್ರವಿದ್ದು, ಇದರಿಂದ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಮಹಿಳೆಯರಿಗೆ ಅನಾನೂಕವಾಗುತ್ತದೆ ಎಂಬ ಕಾರಣಕ್ಕೆ ಯೋಜನೆಗ ಸ್ವರೂಪವನ್ನು ಬದಲಿಸಲಾಗಿದ್ದು, ಅಕ್ಟೋಬರ್ 2 ಗಾಂಧಿ ಜಯಂತಿ ದಿನದಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ, (ಏಜನ್ಸೀಸ್).