delhi Malviya Nagar restaurant fire
ನವದೆಹಲಿ: ಹೊಗೆ, ಬೆಂಕಿ ತುಂಬಿದ ರೆಸ್ಟೋರೆಂಟ್, ಏನಾಗುತ್ತಿದೆ ಎನ್ನುವ ಅರಿವೇ ಇಲ್ಲದೆ ನಿದ್ರಿಸುತ್ತಲೇ ಇದ್ದ ಮಕ್ಕಳು ಹಾಗೂ ಹಿರಿಯರು, ಬೆಂಕಿ ಬಿದ್ದಿದೆ ನೋಡಿ ಎಂದು ಕಿರುಚುತ್ತಿರುವ ಸ್ಥಳೀಯರು, ರಕ್ಷಿಸಲು ಚೀರಾಡುತ್ತಿರುವ ಕೂಗುಗಳ ಮಧ್ಯೆ ಅಲ್ಲೊಬ್ಬ ತಾಯಿ ತನ್ನ ಮಗುವನ್ನು ಕಾಪಾಡಿಕೊಳ್ಳಲು ಜೀವದ ಹಂಗನ್ನು ಬಿಟ್ಟು ಮೂರನೇ ಮಹಡಿಯಿಂದ ನೆಲದ ಮೇಲಿದ್ದ ಹಾಸಿಗೆ ಮೇಲೆ ಜಿಗಿದು ಪ್ರಾಣ ಉಳಿಸಿಕೊಂಡ ಘಟನೆಯ ವಿಡಿಯೋ ಸದ್ಯ ದೇಶದಾದ್ಯಂತ ಮನಕಲಕುವಂತೆ ಮಾಡಿದೆ.
ಹೌದು, ಜನಸಂದಣಿಯಿಂದ ಕೂಡಿದ ದೆಹಲಿಯ ಮಾಳವೀಯ ನಗರದಲ್ಲಿರುವ ಹೌಜ್ ರಾಣಿ ಪ್ರದೇಶದ ಫ್ಲೋರಿಶ್ ಸ್ಟೇ ಬೆಡ್ ಅಂಡ್ ಬ್ರೇಕ್ ಅಂಡ್ ಬೆಸ್ಟ್ ಹೋಟೆಲ್ನ ನೆಲಮಾಳಿಗೆಯಲ್ಲಿ ಮುಂಜಾನೆ 8:48ಕ್ಕೆ ಬೆಂಕಿ ಅವಘಡ ಸಂಭವಿಸಿದೆ. ಕೆಟ್ಟ ಹೊಗೆಯನ್ನು ಗ್ರಹಿಸಿ ಹೊರ ಬಂದು ನೋಡಿ ಅಡುಗೆ ಭಟ್ಟನಿಗೆ ಬೆಂಕಿ ಹೊತ್ತುಕೊಂಡಿದ್ದ ಬಗ್ಗೆ ಸ್ಥಳೀಯರು ಕೂಡಲೇ ರಕ್ಷಣಾ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ.
37ಕ್ಕೂ ಹೆಚ್ಚು ಮಂದಿ ರಕ್ಷಣೆ
ಸಾಹಸಮಯ ಜಂಟಿ ಕಾರ್ಯಾಚರಣೆಯ ಮೂಲಕ ದೆಹಲಿ ಅಗ್ನಿಶಾಮಕ ದಳ (DFS) ಮತ್ತು ವಿಪತ್ತು ನಿರ್ವಹಣಾ ತಂಡಗಳು ಬೇಸ್‌ಮೆಂಟ್‌ನಿಂದ ಮೂವರು ಸೇರಿದಂತೆ ಒಟ್ಟು 37ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸ್ಯಾಕೆಟ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿವೆ. 21 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಹಾಸಿಗೆ ಮೇಲೆ ಬಿದ್ದ ತಾಯಿ-ಮಗು
ದಟ್ಟ ಹೊಗೆ ಆವರಿಸುತ್ತಲೇ ಹೋಟೆಲ್ನಲ್ಲಿ ತಂಗಿದ್ದ ಭಾಗಶಃ ವಿದೇಶಿ ಪ್ರಜೆಗಳು ಕಿಟಕಿ ಗಾಜು ಮುರಿದು ಸ್ಥಳೀಯರ ಸಹಾಯ ಕೇಳಿದ್ದಾರೆ. ಆ ಕೂಡಲೇ ಸ್ಥಳೀಯರು ತಮ್ಮ ಹಾಸಿಗೆಗಳನ್ನು ತಂದು ನೆಲದ ಮೇಲೆ ಹಾಕಿದ್ದಾರೆ. ಈ ವೇಳೆ ಮೂರನೇ ಮಹಡಿಯಲ್ಲಿದ್ದ ತಾಯಿಯೊಬ್ಬರು ಮಗುವನ್ನು ಹಿಡಿದು ನೆಲಕ್ಕೆ ಹಾರಿದ್ದಾರೆ. ಅವರಿಗೆ ಕಾಲು ಮುರಿದಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ವಿವರಿಸಿದರು.
ಸದ್ಯ ಆನ್ಲೈನ್ನಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ 2 ಮತ್ತು ಮೂರನೇ ಮಹಡಿಯಲ್ಲಿದ್ದ ಮೂರ್ನಾಲ್ಕು ಮಹಿಳೆಯರು ಒಬ್ಬರ ನಂತರ ಒಬ್ಬರು ಸ್ಥಳೀಯರು ಹಾಕಿದ್ದ ಹಾಸಿಗೆಗಳ ಮೇಲೆ ಜಿಗಿಯುತ್ತಾರೆ. ಈ ವೇಳೆ ಅಲ್ಲೇ ಇದ್ದ ರಕ್ಷಣಾ ಸಿಬ್ಬಂದಿ ಕಂಬಳಿ ಹೊದಿಸಿ. ಇಬ್ಬರೂ ಮಹಿಳೆಯರ ಸ್ಥಿತಿ ತಿಳಿದಿಲ್ಲವಾದರೂ, ಅವರಲ್ಲಿ ಒಬ್ಬರು ಇಬ್ಬರು ಪುರುಷರ ಬೆಂಬಲದೊಂದಿಗೆ ಅದ್ಭುತವಾಗಿ ಎದ್ದು ಮತ್ತೆ ಕುಸಿದು ಬೀಳುತ್ತಾರೆ. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ವಿದೇಶಿಗರಿದ್ದ ಹೋಟೆಲ್
ದೆಹಲಿ ಪೊಲೀಸರು ಕೊಟ್ಟಿರುವ ಮಾಹಿತಿ ಪ್ರಕಾರ, ಚಿಕೆತ್ಸೆಗಾಗಿ ಭಾರತಕ್ಕೆ ಬಂದು ತಂಗಿದ್ದ 18 ಜನ ವಿದೇಶಿಗರು ಮೃತಪಟ್ಟಿದ್ದಾರೆ. ಇವರು ಲೈಬೀರಿಯಾ, ನೈಜೀರಿಯಾ, ಮೊಜಾಂಬಿಕ್ ಮತ್ತು ಬಾಂಗ್ಲಾದೇಶದವರು ಎಂದು ಸ್ಪಷ್ಟಪಡಿಸಿದರು.
ಒಂದೇ ಕುಟುಂಬದ 6 ಜನರು ಸಜೀವ ದಹನ
ಆಸ್ಪತ್ರೆಯ ಆವರಣದಲ್ಲಿ ಸಂತ್ರಸ್ತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹಗಳು ಎಷ್ಟು ಭೀಕರವಾಗಿ ಸುಟ್ಟುಹೋಗಿವೆ ಎಂದರೆ ಫೋಟೋಗಳನ್ನು ನೋಡಿಯೂ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಗುರುಗ್ರಾಮದಿಂದ ವೈದ್ಯಕೀಯ ಚಿಕಿತ್ಸೆಗಾಗಿ ಬಂದು ಇಲ್ಲಿ ತಂಗಿದ್ದ ಒಂದೇ ಕುಟುಂಬದ 6 ಜನರು ಈ ದುರಂತಕ್ಕೆ ತುತ್ತಾಗಿದ್ದಾರೆ,
ಸರ್ಕಾರದಿಂದ ಪರಿಹಾರ ಧನ
ಅವಘಡ ಸಂಬಂಧ ಎಕ್ಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ 50 ಸಾವಿರ ಪರಿಹಾರ ನೀಡುವುದಾಗಿ ಉಲ್ಲೇಖಿಸಿದ್ದಾರೆ.
ರೇಖಾ ಗುಪ್ತಾ ಏನಂದ್ರು?
'ದೆಹಲಿ ಸಿಎಂ ರೇಖಾ ಗುಪ್ತಾ ಅವರು ಸಹ ಸಂತಾಪ ಸೂಚಿಸಿದ್ದು. ಗಾಯಾಳುಗಳಿಗೆ ಬೇಕಾದ ಸೂಕ್ತ ಚಿಕಿತ್ಸೆ ನೀಡುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು ಎನ್ನುವುದಕ್ಕೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತದೆ' ಎಂದು ಹೇಳಿದರು.